ನೀವು ಸರ್ಕಾರ ನಡೆಸುತ್ತಿದ್ದೀರಿ, ಬೀದಿ ಜಗಳ ಅಲ್ಲ; ರಮೇಶ್ ಕುಮಾರ್
ಕೋಲಾರ, ಆಗಸ್ಟ್ 03: "ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿ ಹಗರಣ ನಡೆದಿದೆ" ಎಂದು ಹೇಳಿಕೆ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
Recommended Video
"ನನ್ನ ವಿರುದ್ಧ ಆರೋಪ ಮಾಡಿರುವುದನ್ನು ವಿಚಾರಿಸಿ, ಬೇಕಿದ್ದರೆ ಈಗಲೇ ಹೋಗಿ ಜೈಲಲ್ಲಿ ಕುಳಿತುಕೊಳ್ಳುತ್ತೇನೆ. ಆರೋಪಕ್ಕೆ ಪ್ರತ್ಯಾರೋಪ ಮಾಡುವುದು ಸಾರ್ವಜನಿಕ ಜೀವನದಲ್ಲಿ ಉತ್ತರ ಅಲ್ಲ. ದಾಖಲೆಗಳ ಸಮೇತ ನಿಷ್ಕಲ್ಮಶವಾಗಿ ಉತ್ತರ ನೀಡಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.
"ನೀವು ಸರ್ಕಾರ ನಡೆಸುತ್ತಿದ್ದೀರಿ, ಬೀದಿ ಜಗಳ ಅಲ್ಲ. ನೀವು ಸತ್ತೋಗುತ್ತಿರುವವರಿಗೆ ಔಷಧಿ ಕೊಡುತ್ತಿಲ್ಲ. ಹೌದು, ನಾವು ಅವಿವೇಕಿಗಳು. ನೀವು ಭಾರತ ಮಾತಾ ಕೀ ಸೆರಗಿನಲ್ಲಿ ಇದ್ದು, ಆಕೆಯ ಮಾನ ಕಾಪಾಡೋ ಅವತಾರ ಪುರುಷರಲ್ವ? ನಾವು ಹುಟ್ಟಿದ್ದೆ ಹೊಲಸಲ್ಲಿ, ನಾವು ಏನು ಮಾಡಿಲ್ಲ ಈ ದೇಶಕ್ಕೆ. ಆದ್ರೆ ಋಷಿ ಮುನಿಗಳಿಂದ ಜನ್ಮ ಪಡೆದ ನೀವೆಲ್ಲಲ್ಲ ಹೋದಿರಿ?" ಎಂದು ಕಿಡಿಕಾರಿದ್ದಾರೆ.

ಪಿಎಂ ಕೇರ್ ಫಂಡ್ ನಿಂದ ನಾಲ್ಕು ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿ ಕಳುಹಿಸಿಕೊಟ್ಟಿದ್ದಾರೆ. ಹಾಗಾದ್ರೆ ಭಾರತ ಸರ್ಕಾರ ಕಳಪೆ ಮಟ್ಟದ್ದು ಕಳುಹಿಸಿತ್ತಾ ಅಥವಾ ಇವರು ಲೂಟಿ ಹೊಡೆದರಾ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.












Click it and Unblock the Notifications