ಮಾಲೂರಿನಲ್ಲಿ ಹೊಸ ತಂತ್ರಜ್ಞಾನ ಬಳಕಿ ಕೊಳಚೆ ನೀರು ಘಟಕ

Posted By:
Subscribe to Oneindia Kannada

ಕೋಲಾರ, ಸೆ. 30: ಬ್ಯಾಚ್ ರಿಯಾಕ್ಟರ್ ಎಂಬ ಹೊಸ ತಂತ್ರಜ್ಞಾನ ಬಳಸಿ ಮೊದಲ ಕೊಳಚೆ ನೀರು ಸಂಸ್ಕರಣ ಘಟಕವನ್ನು ಕೋಲಾರ ಜಿಲ್ಲೆಯ ಮಾಲೂರ್ ಟೌನ್ ನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಕ.ನ.ನಿ.ಸ.ಓ.ಚ) ಕಾರ್ಯಾಚರಣೆ ಆರಂಭಿಸಿದೆ.

ಈ ಯೋಜನೆಯಡಿ ಮಾಲೂರು ಪಟ್ಟಣದಲ್ಲಿ ಆಳುಗುಂಡಿ ಮತ್ತು ಕೊಳವೆ ಮಾರ್ಗಗಳು ಪೂರ್ಣಗೊಂಡಿದ್ದು, 4 ಎಂ. ಎಲ್, ಡಿ ನೀರನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ತಂತ್ರಜ್ಞಾನದಲ್ಲಿ ಕಡಿಮೆ ಭೂಮಿ ಬಳಸುವುದಲ್ಲದೆ ಇತರ ಉದ್ದೇಶಗಳಿಗಾಗಿ ನೀರು ಪುನರ್ಬಳಕೆ ಮಾಡಬಹುದು. ಈ ರೀತಿಯ ತಂತ್ರಜ್ಞಾನ ಉಪಯೋಗಿಸುವುದರಿಂದ ಹೆಚ್ಚು ಜಮೀನಿನ ಅವಶ್ಯಕತೆ ಇರುವುದಿಲ್ಲ ಹಾಗೂ ಈ ತಂತ್ರಜ್ಞಾನ ಬಳಸಿ ಶುದ್ಧೀಕರಿಸಿದ ಮಲಿನ ನೀರು ಯಾವುದೇ ರೀತಿಯ ಮರು ಬಳಕೆಗೆ ಯೋಗ್ಯವಾಗಿರುತ್ತದೆ.

The first Sewage Treatment Plant using latest technology at Malur Kolar

ಇನ್ನು ಹಲವಾರು ನಗರ/ಪಟ್ಟಣಗಳಲ್ಲಿ ಈ ರೀತಿಯ ತಂತ್ರಜ್ಞಾನವನ್ನೇ ಉಪಯೋಗಿಸಿ ಮಲಿನ ನೀರನ್ನು ಶುದ್ಧೀಕರಿಸುವ ಕಾರ್ಯಕ್ರಮ ಕೈಗೊಳ್ಳಲು ಮಂಡಳಿಯು ಬದ್ಧವಾಗಿದೆ.

4 ಎಂ.ಎಲ್.ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಿಸುವುದಕ್ಕೆ ಕನಿಷ್ಠ 8 ಎಕರೆ ಜಮೀನು ಬೇಕಾಗಿದ್ದು, ಈ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯು ಕಷ್ಟಕರ ಹಾಗೂ ಹೆಚ್ಚು ಸಮಯ ಹಿಡಿಯುವಂತಾಗಿತ್ತು.

ಹೀಗಾಗಿ ಕಡಿಮೆ ಜಮೀನನಲ್ಲಿ ನಿರ್ಮಿಸಬಹುದಾದಂತಹ ಆಧುನಿಕ ತಂತ್ರಜ್ಞಾನದ "ಸಿಕ್ವೆನ್ಶಿಯಲ್ ಬ್ಯಾಚ್ ರಿಯಾಕ್ಟರ್"(ಎಸ್ಬಿಆರ್) ಮಾದರಿ ಉಪಯೋಗಿಸಿಕೊಂಡು 4 ಎಂ.ಎಲ್.ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣವನ್ನು ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ವಹಿಸಿ ಮಂಡಳಿಯು ಪೂರ್ಣಗೊಳಿಸಿದೆ.

"ನಗರ ಪ್ರದೇಶಗಳಲ್ಲಿ ನೀರಿನ ಬಳಕೆ ಹೆಚ್ಚಾಗಿರುವುದರಿಂದ ಹಾಗೂ ಅದರ ಲಭ್ಯತೆ ಸೀಮಿತವಾಗಿರುವುದರಿಂದ ಜಲ ಸಂರಕ್ಷಣೆ, ಶುದ್ಧೀಕರಣ ಮತ್ತು ಮರುಬಳಕೆ ಬಹು ಅಗತ್ಯವಾಗಿದೆ, ಹೆಚ್ಚು ನೀರು ಸಂಸ್ಕರಣ ಘಟಕಗಳು ಸಿದ್ಧಪಡಿಸುವ ಮೂಲಕ, ನೀರಿನ ಸಂರಕ್ಷಣೆ ಮಾತ್ರವಲ್ಲದೆ ಅದನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುತ್ತದೆ.ಸಂರಕ್ಷಣೆ ಮತ್ತು ನೀರಿನ ಮರು ಬಳಕೆ ತುರ್ತು ಅಗತ್ಯವಾಗಿದೆ, ನೀರಿನ ಶುದ್ಧೀಕರಣ ಅಲ್ಲದೆ ನೀರನ್ನು ಕೈಗಾರಿಕಾ ಮತ್ತು ಗೃಹಬಳಕೆಗೆ ಉಪಯೋಗಿಸಬಹುದು.

ಈ ರೀತಿಯ ಸೌಲಭ್ಯಗಳನ್ನು ರಾಜ್ಯಾದ್ಯಂತ ಆರಂಭಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ ಅಧ್ಯಕ್ಷರಾದ, ನಗರಾಭಿವೃದ್ಧಿ ಮತ್ತು ಹಜ್ ಸಚಿವರಾದ ಆರ್ ರೋಶನ್ ಬೇಗ್ ರವರು ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ ಕರ್ನಾಟಕದ 270 ನಗರ ಪ್ರದೇಶಗಳಲ್ಲಿ ಒಳಚರಂಡಿ ಸೌಲಭ್ಯಗಳನ್ನು ವ್ಯವಸ್ಥಾಪಕ ಮಾಡಲಾಗಿದೆ. ಬೋರ್ಡ್ ವಿನ್ಯಾಸ ಸೂತ್ರೀಕರಣ, ನೀರು ಸರಬರಾಜು & ಅಂಡರ್ ಗ್ರೌಂಡ್ ಒಳಚರಂಡಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಹೊಂದಿದೆ.

ಪೂರ್ಣಗೊಂಡಿರುವ ಯೋಜನೆಗಳು ಮತ್ತಷ್ಟು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುತ್ತದೆ. ಪ್ರಸ್ತುತ 87 ನಡೆಯುತ್ತಿರುವ ಯೋಜನೆಗಳು, ಅವುಗಳ ಪೈಕಿ 34 ನೀರು ಪೂರೈಕೆ ಯೋಜನೆಗಳು & 53 ಯು. ಜಿ. ಡಿ ಯೋಜನೆಗಳು ಇವೆ. 42 ಹೆಚ್ಚುವರಿ ಯೋಜನೆಗಳು ಮುಂದಿನ 2 ವರ್ಷಗಳಲ್ಲಿ ಕಾರ್ಯಾರಂಭವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The first Sewage Treatment Plant using latest technology called the Sequential Batch Reactor Technology has been commissioned by the Karnataka Urban Water Supply and Drainage Board at Malur Town in Kolar District.
Please Wait while comments are loading...