India
 • search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ರಾಜಕೀಯದಲ್ಲಿ ಹೊಸ ಟ್ವಿಸ್ಟ್: ಕಾಂಗ್ರೆಸ್ಸಿಗೆ ಕೆ.ಎಚ್.ಮುನಿಯಪ್ಪ ಗುಡ್ ಬೈ?

|
Google Oneindia Kannada News

ಕೋಲಾರ, ಜು. 2: ಕೋಲಾರ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ. ಇಲ್ಲಿ ಕಾಂಗ್ರೆಸ್ ಪಕ್ಷದೊಳಗೇ ಆಂತರಿಕ ಕಲಹದಿಂದ ಬೇಸತ್ತು ನಾಯಕರುಗಳು ಬಹಿರಂಗ ಕಾದಾಟ ಮುಗಿದ ಬಳಿಕ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಂಸದ, ಕೇಂದ್ರ ಮಾಜಿ ಮಂತ್ರಿ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್‌ಗೆ ಗುಡ್‌ಬಐ ಹೇಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಂತಿರುವ ಮುನಿಯಪ್ಪ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲೂ ಆಕಾಂಕ್ಷಿ ಆಗಿದ್ದರು. ಆದರೆ, ಅಲ್ಲೂ ಅವರಿಗೆ ಹಿನ್ನಡೆಯಾಯಿತು. ಈ ಮಧ್ಯೆ ಅವರು ಕಾಂಗ್ರೆಸ್‌ನಲ್ಲಿ ಬೇಸತ್ತಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಬಿಜೆಪಿ ಮುನಿಯಪ್ಪ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳೂ ಹರಡಿಕೊಂಡಿವೆ.

ಕೊತ್ತೂರು ಮಂಜುನಾಥ್, ಸುಧಾಕರ್ ಕಾಂಗ್ರೆಸ್ಸಿಗೆ: ರಾಹುಲ್ ಹಾಕಿದ ಏಕೈಕ ಷರತ್ತು?ಕೊತ್ತೂರು ಮಂಜುನಾಥ್, ಸುಧಾಕರ್ ಕಾಂಗ್ರೆಸ್ಸಿಗೆ: ರಾಹುಲ್ ಹಾಕಿದ ಏಕೈಕ ಷರತ್ತು?

ಮುನಿಯಪ್ಪ ಕೊಟ್ಟ ಉತ್ತರವೇನು?

ಮುನಿಯಪ್ಪ ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. "ನಾನು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗುವುದಿಲ್ಲ, ಕೋಲಾರದಲ್ಲಿ 30 ವರ್ಷ ನನ್ನನ್ನು ಬೆಳೆಸಿದ ಮುಖಂಡರು, ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ." ಎಂದು ಕೆ.ಎಚ್​. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

"ನಾನು ಸೋತ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ.ಎಚ್.ಮುನಿಯಪ್ಪ ಇರಬೇಕಾ ಅಂತಾ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಅವರಿಗೆ ಮುಂದೆ ಉತ್ತರ ಸಿಗಲಿದೆ," ಎಂದು ಕಿಡಿಕಾರಿದ್ದಾರೆ.

ಮಹಿಳೆಯ ಶಪಥ ಮಾಡಿ ಜಗನ್ ಮೊಹನ್ ರೆಡ್ಡಿ ಕೊಲೆಗೆ ಸುಪಾರಿ?ಮಹಿಳೆಯ ಶಪಥ ಮಾಡಿ ಜಗನ್ ಮೊಹನ್ ರೆಡ್ಡಿ ಕೊಲೆಗೆ ಸುಪಾರಿ?

ಜಿಲ್ಲೆಯ ಎಲ್ಲಾ ಶಾಸಕರಿಗೆ ಮಾಟ- ಮಂತ್ರ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಯಾರೂ ಮಂತ್ರಿ ಆಗಬಾರದು ಎಂಬ ನಿಟ್ಟಿನಲ್ಲಿ ರಮೇಶ್ ಕುಮಾರ್ ಶಕುನಿ ಪಾತ್ರವಹಿಸಿದ್ದಾರೆ. ಪಾಂಡವರ ವನವಾಸ ಮುಗಿದಿದೆ, ಯುದ್ಧ ಆರಂಭವಾಗಲಿದೆ ಶಕುನಿ, ದುರ್ಯೋಧನ, ಎಲ್ಲರೂ ಆತುರದಲ್ಲಿದ್ದಾರೆ ಎಂದು ತಮ್ಮದೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಮೇಶ್ ಕುಮಾರ್‌ಗೆ ಜನರೇ ಉತ್ತರ

ಏಕಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಗೆ ಮುಂದೆ ಜನರು ಉತ್ತರ ಕೊಡುತ್ತಾರೆ.ಅವರ ಮಾತಿಗೆ ಎಲ್ಲರೂ ಮುರ್ಖರಾಗಿದ್ದಾರೆ.ಯುದ್ಧದಲ್ಲಿ ಕೃಷ್ಣನ ಸಹಕಾರದಿಂದ ಪಾಂಡವರು ಗೆಲ್ಲಲಿದ್ದಾರೆ.

EX MP KH Muniappa clarification for Joining BJP

ನಾನು ಯಾರ ಬಳಿ ಹೋಗಿ ಅಪಾಯಿಂಟ್​ಮೆಂಟ್​ ತೆಗೆದುಕೊಂಡಿಲ್ಲ, ಎಲ್ಲಾವೂ ಸಮಯ ನಿರ್ಣಯ ಮಾಡಲಿದೆ.‌ನಾವು‌ ಶಾಂತವಾಗಿರೋಣ. ವಿಪಕ್ಷ ನಾಯಕ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ಅವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ನೋಡೋಣ ಎಂದು ಹೇಳಿದರು.

ಒಂದು ತಿಂಗಳು ಕಾಲಾವಕಾಶ ಕೊಡುವೆ

ನನ್ನ‌ ಬಿಟ್ಟು ಮಾಜಿ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವ ಬಗ್ಗೆ ಜನರಿಗೆ ತಿಳಿಸಬೇಕು, ಇವರನ್ನು ಸೇರಿಸಿಕೊಳ್ಳುವ ಬಗ್ಗೆ ನಮ್ಮ ವಿರೋಧ ಇದೆ.ಸುಧಾಕಾರ ಮತ್ತು ಕೊತ್ತೂರು ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಒಂದು ತಿಂಗಳು ಕಾಲಾವಕಾಶ ಕೊಡುವೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡುವೆ ಎಂದು ಹೇಳಿದ್ದಾರೆ.

   Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada
   English summary
   I will not join BJP or any ther party. Congress leader and Kolar ex MP KH Muniyappa clarification.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X