ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಕುಸಿದು ಮೂರು ದಿನದ ಮಗುವಿಗೆ ಗಾಯ
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಕುಸಿದು ತಾಯಿ ಹಾಗೂ ಮಗುವಿಗೆ ಗಾಯವಾಗಿದೆ. ಇದರಿಂದ ಆಸ್ಪತ್ರೆಯಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಗಾಯಾಳು ಮಗುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ
ಕೋಲಾರ, ಮೇ 23: ಕೋಲಾರ ಜಿಲ್ಲಾಸ್ಪತ್ರೆಯ ಛಾವಣಿ ಕುಸಿದು ತಾಯಿ-ಮಗುವಿಗೆ ಗಾಯವಾಗಿದೆ. ಹೆರಿಗೆ ವಾರ್ಡ್ ನ ಒಂದು ಬದಿಯಲ್ಲಿ ಛಾವಣಿ ಕುಸಿದಿದೆ. ಆಗ ಮಂಚದಲ್ಲಿ ಮಲಗಿದ್ದ ನೇತ್ರಾ ಹಾಗೂ ಅವರ ಮೂರು ದಿನದ ಮಗುವಿಗೆ ಗಾಯವಾಗಿದೆ.
ನೇತ್ರ ಅವರ ಕಾಲಿಗೂ, ಮಗುವಿನ ತಲೆಗೂ ಪೆಟ್ಟಾಗಿದೆ. ಈ ವೇಳೆ ಹೆರಿಗೆ ವಾರ್ಡ್ ನಲ್ಲಿ ಮೂವತ್ತು ತಾಯಂದಿರು ಹಾಗೂ ಮಕ್ಕಳು ಇದ್ದರು. ಈ ಘಟನೆಯಿಂದ ಗಾಬರಿಗೊಂಡ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಏಕಾಏಕಿ ಇಷ್ಟು ಮಂದಿ ಹೊರಗೆ ಓಡಿಬಂದಿದ್ದರಿಂದ ಆಸ್ಪತ್ರೆಯಲ್ಲಿದ್ದ ಇತರರು ಸಹ ಗಾಬರಿಯಾಗಿದ್ದಾರೆ.['ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್']

ಗಾಯವಾದ ಮಗುವಿಗೆ ಪ್ರಥಮ ಚಿಕಿತ್ಸೆ ಕೊಟ್ಟು, ಆ ನಂತರ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡ ನೇತ್ರಾ ಅವರು ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗ್ರಾಮದವರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಗವಿನ ತಲೆ ಊದಿಕೊಂಡಿದೆ. ನಗರ ಪೊಲೀಸ್ ಠಾಣೆಯಲಿ ದೂರನ್ನು ದಾಖಲಿಸಲಾಗಿದೆ.












Click it and Unblock the Notifications