ಅಯೋಧ್ಯೆ ರಾಮ ಮಂದಿರ ಶಂಕುಸ್ಥಾಪನೆಗೆ ಕೋಲಾರದ ಅಂತರಗಂಗೆ ಜಲ

ಕೋಲಾರ, ಜುಲೈ 23: ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ಪೂಜೆಗೆ ಕೋಲಾರದ ಅಂತರಗಂಗೆಯ ಪವಿತ್ರ ಜಲವನ್ನು ಬಳಕೆ ಮಾಡಲಾಗುತ್ತಿದೆ.

Recommended Video

      Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

      ಕೋಲಾರ ನಗರದಿಂದ ಎರಡು ಕಿ.ಮೀ. ದೂರವಿರುವ ಅಂತರಗಂಗೆ ಬೆಟ್ಟದ, ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿನ ಕಲ್ಲಿನ ಬಸವಣ್ಣನ ಬಾಯಲ್ಲಿ ಶತಮಾನಗಳಿಂದ ನೀರು ಹರಿಯುತ್ತಿದೆ. ಎಂತಹ ಬರಗಾಲದಲ್ಲಿ ಕೊಡ ಇಲ್ಲಿ ನೀರಿನ ಹರಿವು ನಿಂತಿಲ್ಲ. ಎಂದಿಗೂ ಬತ್ತದ ಈ ಪವಿತ್ರದ ಜಲವನ್ನು ಅಯೋಧ್ಯೆ ರಾಮ ಮಂದಿರ ಶಂಕುಸ್ಥಾಪನೆಗೆ ಬಳಕೆ ಮಾಡುತ್ತಿದ್ದು, ಇಂದು ಭಜರಂಗದಳ ಕಾರ್ಯಕರ್ತರು ಕಾಶಿ ವಿಶ್ವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಜಲವನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಿಕೊಟ್ಟರು.

      ಕೋಲಾರದ ಅಂತರಗಂಗೆ ಬೆಟ್ಟದಲ್ಲಿರುವ ಕಾಶಿ ವಿಶ್ವೇಶ್ವರ ದೇವಾಲಯ ಹಿಂದುಗಳ ಪವಿತ್ರ ಸ್ಥಳ. ಇಲ್ಲಿರುವ ಕಲ್ಲಿನ ಬಸವಣ್ಣನ ಬಾಯಲ್ಲಿ ಸದಾ ಕಾಲವೂ ನೀರು ಹರಿದು ಬರುತ್ತದೆ. ಇದುವರೆಗೂ ನೀರು ಎಲ್ಲಿಂದ ಬರುತ್ತದೆ ಎಂಬುದು ಪತ್ತೆಯಾಗಿಲ್ಲ. ಸಿಹಿನೀರಿನ ಚಿಲುಮೆಯಾಗಿರುವ ಈ ಸ್ಥಳ ದ್ವಾಪರಯುಗದಲ್ಲಿ ಹುಟ್ಟಿತು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

      Kolar Antaragange Water Will Be Used For Ayodhye Ram Mandir Foundation Stone

      ಪಾಂಡವರು ವನವಾಸ ಅನುಭವಿಸುತ್ತ ಈ ಸ್ಥಳಕ್ಕೆ ಬಂದಾಗ ದ್ರೌಪದಿಗೆ ನೀರಿನ ದಾಹವಾಗುತ್ತದೆ ಆಗ ಅರ್ಜುನ ದ್ರೌಪದಿಗೆ ದಾಹ ತಣ್ಣಿಸಲು ದೊಡ್ಡದಾದ ಕಲ್ಲುಬಂಡೆಗೆ ಬಾಣ ಹೂಡಿದಾಗ ಸಿಹಿನೀರಿನ ಚಿಲುಮೆ ಉದ್ಭವವಾಯಿತು. ಕಾಶಿಯಲ್ಲಿ ಹರಿಯುವ ಗಂಗೆಯೇ ಇಲ್ಲಿ ಉದ್ಭವವಾಗಿದೆ ಎಂಬ ಪ್ರತೀತಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+