ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ, ಹಾಸನ ಬಳಿಕ ಕೋಲಾರ ಜಿಲ್ಲೆಗೆ ಅಪ್ಪಳಿಸಿದ ಕೊರೊನಾ

|
Google Oneindia Kannada News

ಕೋಲಾರ, ಮೇ 12: ಕೋಲಾರದಲ್ಲಿ ಮೊದಲ ಬಾರಿಗೆ ಕೊರೊನಾ ಮಹಾಮಾರಿ ಕಾಲಿಟ್ಟಿದೆ. ಒಟ್ಟು ಐವರಿಗೆ ಕೊರೊನಾ ಪಾಸಿಟಿವ್ ಎಂದು ದೃಡವಾಗಿದೆ. ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಆರೋಗ್ಯ ಇಲಾಖೆ ಶನಿವಾರ 21 ಜನರ ಗಂಟಲು ದ್ರವ ಮಾದರಿಯನ್ನು ಕಳುಹಿಸಿತ್ತು. ಗಡಿ ಜಿಲ್ಲೆಯೆಂದು ಆರೋಗ್ಯ ತಪಾಸಣೆ ನಡೆಸಿತ್ತು. ಹೊರ ರಾಜ್ಯದವರಿಂದಲೇ ಕೋಲಾರಕ್ಕೆ ಮುಳುವಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ, ಜಿಲ್ಲಾಡಳಿತ ಈ ಐವರ ಟ್ರಾವೆಲ್ ಹಿಸ್ಟರಿ ಹಾಗೂ ಪ್ರಾಥಮಿಕ ಸಂಪರ್ಕ ಕಲೆ ಹಾಕಿದೆ.

ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

ಇಷ್ಟು ದಿನ ಹಗಲಿರುಳು ಶ್ರಮವಹಿಸಿದ್ದ ಜಿಲ್ಲಾಡಳಿತಕ್ಕೆ ನಿರಾಸೆಯಾಗಿದೆ. ಪಾಸಿಟಿವ್ ಕೇಸ್‌ ಹಿನ್ನಲೆ ಗ್ರಾಮಗಳನ್ನು ಸೀಲ್ ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ.

5 Coronavirus Positive Cases Tested In Kolar

''ಪಾಸಿಟಿವ್ ಬಂದ್ದಿರುವವರಲ್ಲಿ ರೋಗದ ಲಕ್ಷಣಗಳೇ ಇರಲಿಲ್ಲ. ಆಂಧ್ರ ಮೂಲದ ಸೋಂಕಿತ ಗ್ರಾಮಗಳಲ್ಲಿ ಸಂಚರಿಸಿದ್ದ ಆಧಾರದಲ್ಲಿ ಸ್ವಾಬ್ ಕಳುಹಿಸಿಕೊಡಲಾಗಿತ್ತು. ಆದರೆ, ಇವರೆಲ್ಲ ಯಾರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ತಿಳಿದು ಬರಬೇಕಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಹಾಗೂ ಮೊಬೈಲ್ ಲೋಕೇಷನ್ ಆಧಾರದ ಮೇಲೆ ತನಿಖೆ ಮಾಡ್ತಿದ್ದೇವೆ.'' ಎಂದು ಕೋಲಾರದ ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ರೋಗಿ ನಂಬರ್ 909 ಹಾಗೂ 910 ಒರಿಸ್ಸಾ ರಾಜ್ಯಕ್ಕೆ ಹೋಗಿ ಬಂದಿರುವುದು ತಿಳಿದುಬಂದಿದೆ.

ರೋಗಿ ನಂಬರ್ 908 ತಮಿಳುನಾಡಿಗೆ ಹೋಗಿ ಬಂದಿದ್ದಾರೆ.

ರೋಗಿ ನಂಬರ್ ಹಾಗೂ 907 ರ ಟ್ರಾವೆಲ್ ಹಿಸ್ಟರಿ ತಿಳಿದುಬಂದಿಲ್ಲ.

ಪಾಸಿಟಿವ್ ಬಂದಿರುವ ಗ್ರಾಮಗಳನ್ನು ಕಂಟೈನ್ಮೆಂಟ್ ಜೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಕೊರೊನಾ ಬಂದಿರುವವರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರನ್ನು ಪತ್ತೆ ಹಚ್ಚಿದ್ದು, ಆಂಧ್ರ ಗಡಿ ಭಾಗದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

English summary
5 coronavirus positive cases tested in kolar Today (May 12th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X