ಹಾಸನದಿಂದ ಬಂದು ಬಂಗಾರಪೇಟೇಲಿ ಡಕಾಯಿತಿ ಮಾಡಿದ್ದು ಏಕೆ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬಂಗಾರಪೇಟೆ, ನವೆಂಬರ್ 2: ಇದೊಂಥರ ವಿಚಿತ್ರ ಪ್ರಕರಣ. ಇಲ್ಲಿನ ರಾಮಕೃಷ್ಣಪ್ಪ ಅವರ ಮನೆಯಲ್ಲಿ ಎಂಬತ್ತು ಕೋಟಿ ಇದೆ ಎಂದು ಅದ್ಯಾರು ಈ ಆರೋಪಿಗಳಿಗೆ ಹೇಳಿದರೋ ಹಾಸನದಿಂದ ಬಂಗಾರಪೇಟೆವರೆಗೆ ಬಂದು ಡಕಾಯಿತಿ ಮಾಡಿದ್ದ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಕಮ್ಮದಿನ್ನೆಯ ರಾಮಕೃಷ್ಣಪ್ಪ ಅವರ ತೋಟದ ಮನೇಲಿ ಹಣ-ಆಭರಣ ದೋಚಿದ್ದ ಪ್ರೇಮಾ, ಪ್ರತಾಪ್, ಅನಿಲ್ ಕುಮಾರ್, ನಾಗೇಗೌಡ, ಹರೀಶ್, ಸುನಿಲ್ ಕುಮಾರ್, ರಘು, ಮಧು, ಮಾರಿಮುತ್ತು, ಸಂತೋಷ್ ಹಾಗೂ ಆರ್.ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಐವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ.[ಹಾವು ಕಡಿದು ಮಗಳು, ಹೃದಯಾಘಾತದಿಂದ ತಾಯಿ ಸಾವು]

crime

ಎಲ್ಲ ಆರೋಪಿಗಳು ಹಾಸನದವರು. ಅಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದರು. ಇದೇ ಮೊದಲ ಸಲ ಡಕಾಯಿತಿ ಮಾಡಿದ್ದರು. ರಾಮಕೃಷ್ಣಪ್ಪ ಅವರ ಮನೆಯಲ್ಲಿ ₹ 80 ಕೋಟಿ ಕಪ್ಪು ಹಣವಿದೆ ಎಂದು ಪ್ರಮುಖ ಆರೋಪಿ ಪ್ರೇಮಾ ಅವರಿಗೆ ಯಾರೋ ಹೇಳಿದ್ದರು. ಈ ಹಣ ದೋಚಬೇಕು ಎಂದು ಯೋಜನೆ ರೂಪಿಸಿದ ಆಕೆ, ತನ್ನ ಗಂಡ ಇತರರ ಗುಂಪು ಮಾಡಿಕೊಂಡು ಸೆ.19ರಂದು ದರೋಡೆಗೆ ಪ್ರಯತ್ನಿಸಲಾಗಿತ್ತು.

ಆದರೆ, ರಾಮಕೃಷ್ಣಪ್ಪ ಅವರ ಮನೇಲಿ ನಾಯಿಗಳು ಇದ್ದವು. ಆದ್ದರಿಂದ ದರೋಡೆ ವಿಫಲವಾಗಿತ್ತು. 4 ದಿನಗಳ ನಂತರ ಮತ್ತೆ ಬಂದ ಈ ತಂಡ ನಾಯಿಗಳಿಗೆ ಮದ್ದು ಹಾಕಿ, ಪ್ರಜ್ಞೆ ತಪ್ಪಿಸಿ ಮನೆ ಒಳಗೆ ಹೋಗಿತ್ತು. ಕೋಟಿಲಿಂಗ ದರ್ಶನಕ್ಕೆ ಬಂದಿದ್ವಿ. ದಾರಿ ತಪ್ಪಿಹೋಯಿತು. ಕುಡಿಯಲು ನೀರು ಕೊಡಿ ಎಂದು ಮನೆಯವರನ್ನು ಕೇಳಿತ್ತು.[ಹುಬ್ಬಳ್ಳಿಯಲ್ಲಿ ಎಟಿಎಂ ದರೋಡೆ, ಇನ್ನಿತರ ಕ್ರೈಂ ಸುದ್ದಿಗಳು]

ಮನೆ ಮಾಲೀಕರು ಬಾಗಿಲು ತೆಗೆದ ಬಳಿಕ ಅವರು ಹಾಗೂ ಮನೆಯವರ ಕೈ-ಕಾಲು ಕಟ್ಟಿಹಾಕಿ ಚಾಕು ತೋರಿಸಿ ₹ 5 ಲಕ್ಷ ನಗದು 197 ಗ್ರಾಂ ಚಿನ್ನ ದೋಚಿದ್ದರು. ಎಲ್ಲ ಆರೋಪಿಗಳನ್ನು ಹಾಸನದಲ್ಲೇ ಬಂಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
11 arrested by Bangarapete police on Tuesday in daketi case. These people from Hassan. Main accused Prema got the information that, RS 80 crore black money in Akkammadinne Ramakrishnappa's house. So, they came to Bangarepete and looted 5 lakh cash and 197 gram jewels on September 19th.
Please Wait while comments are loading...