ನನ್ನ ಸೋಲಿಸುವ ಅಜೆಂಡಾದಿಂದಲೇ ಅವರಿಗೆ ಸೋಲು; ಸಿಎಂ ಮಾತಿನ ಮರ್ಮವೇನು?
Recommended Video
ಯಲ್ಲಾಪುರ,
ನವೆಂಬರ್ 28: ಉಪ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದು, ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕಾಗಿ ಎರಡನೇ ಬಾರಿಗೆ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಬಂದಿದ್ದಾರೆ. id="toptextpromo"> id='are-slot-1' class='oiad oi-axt oiadv'>ಬಿಜೆಪಿ
ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಮತ ಪ್ರಚಾರಕ್ಕಿಳಿದಿರುವ ಅವರು ಇಂದು ಮುಂಡಗೋಡ ಪಟ್ಟಣದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. "ನಾವು ಈಗಾಗಲೇ ಗೆದ್ದಾಗಿದೆ. ಆದರೆ ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ನೋಡಬೇಕಿದೆ. ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಬಹಳ ಅಂತರದಲ್ಲಿ ಗೆಲ್ಲುವುದು ಗ್ಯಾರಂಟಿ" ಎಂದು ತಿಳಿಸಿದ್ದಾರೆ. id='are-slot-2' class='oiad oi-axt oiadv'>
ಬಿಜೆಪಿಗೆ ಪ್ಲಸ್ ಪಾಯಿಂಟ್
"ಕಾಂಗ್ರೆಸ್, ಜೆಡಿಎಸ್ ನವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಹೇಗಾದರೂ ಚುನಾವಣೆಗೆ ಹೋಗಬೇಕು ಎನ್ನುವಂತೆ ವರ್ತಿಸುತ್ತಿದ್ದಾರೆ. ಮೂರು ಮೂರು ತಿಂಗಳಿಗೆ ಚುನಾವಣೆ ಮಾಡಲು ಸಾಧ್ಯವೇ? ಹೇಗಾದರು ಮಾಡಿ ಯಡಿಯೂರಪ್ಪನವರಿಗೆ ಬಹುಮತ ಬರಬಾರದು ಎಂದು ಮಸಲತ್ತು ನಡೆಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನವರು ಮಾತನಾಡುವ ರೀತಿಯಿಂದ ಜನರು ತಿರುಗಿಬಿದ್ದಿದ್ದಾರೆ. ಇದೇ ನಮಗೆ ಪ್ಲಸ್ ಪಾಯಿಂಟ್. ಯಡಿಯೂರಪ್ಪ ಮೂರೂವರೆ ವರ್ಷ ಮುಂದುವರೆಯಬೇಕು, ಸ್ಥಿರ ಸರ್ಕಾರ ಕೊಡಬೇಕು ಎಂದು ಜನ ಬಯಸಿದ್ದಾರೆ" ಎಂದು ಹೇಳಿದರು.

ನೂರು ದಿನದ ಕೆಲಸ ಮೆಚ್ಚುಗೆ ಪಡೆದಿದೆ
"ಸರ್ಕಾರದ ನೂರು ದಿನದ ಕೆಲಸ ಜನರಿಗೆ ತುಂಬಾ ಇಷ್ಟವಾಗಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರಿಗೆ ನಾಲ್ಕು ಸಾವಿರ ಹಣ ಕೊಡುವ ಕಾರ್ಯ ಮಾಡಿದ್ದೇನೆ. ಜನರಿಗೆ ಸರ್ಕಾರದ ಸಾಧನೆ ಗೊತ್ತಾಗಿದೆ. ನೆರೆ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೆವು ಎಂಬುದನ್ನು ಕಂಡಿದ್ದಾರೆ. ಆದ್ದರಿಂದ ಬಿಜೆಪಿ ಗೆಲ್ಲಿಸುವ ಭರವಸೆ ಇದೆ" ಎಂದು ತಿಳಿಸಿದರು.

ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ
"ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಆದ್ದರಿಂದ ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ನಡೆಸಿದ್ದೇನೆ. ಹೇಳಿಕೆಯ ರೆಕಾರ್ಡ್ ಗಳನ್ನ ತೆಗೆದುಕೊಳ್ಳುತ್ತಿದ್ದೇನೆ. ಪಕ್ಷದ ಮೂಲಕ ಪ್ರಕರಣ ಹಾಕಿಸುತ್ತೇನೆ" ಎಂದು ಕಿಡಿಕಾರಿದರು.
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ಸಾಧನೆ ಶೂನ್ಯ. ಆದ್ದರಿಂದ ದಯನೀಯ ಸೋಲನ್ನ ಅನುಭವಿಸಿದರು. ನಮಗೆ ಬೇಕಿರುವುದು ಕೇವಲ 8 ಶಾಸಕರು. ಆದರೆ ಹದಿನೈದು ಕ್ಷೇತ್ರಗಳನ್ನೂ ಗೆದ್ದು ಮುಂದಿನ ಅವಧಿಯ ಪೂರ್ಣಾವಧಿ ಆಡಳಿತ ನಡೆಸುತ್ತೇವೆ" ಎಂದರು.

ಅನರ್ಹರ ತ್ಯಾಗದಿಂದ ಸಿಎಂ ಪಟ್ಟ
ಶಿವರಾಮ್ ಹೆಬ್ಬಾರ್ ಹಾಗೂ 17 ಜನ ಸ್ನೇಹಿತರು ರಾಜೀನಾಮೆ ಕೊಟ್ಟಿದ್ದರಿಂದ ನಾನು ಸಿಎಂ ಆಗಿದ್ದೇನೆ. ಅವರು ಮನಸ್ಸು ಮಾಡಿದ್ದರೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಬಹುದಿತ್ತು. ಅವರ ತ್ಯಾಗದಿಂದ ನಾನು ಸಿಎಂ ಆಗಿದ್ದೇನೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಕೊಡುಗೆ ಏನು? ಜನಹಿತ ಮರೆತು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸಿದ್ದೀರಿ. ಶಾಸಕರ, ಜನರ ನೋವಿಗೆ ಸ್ಪಂದಿಸಲಿಲ್ಲ. ನನ್ನ ಮನೆಗೆ ಯಾರೇ ಬಂದು ಇಂದು ಮನವಿ ಕೊಡಬಹುದು. ಆ ರೀತಿ ಇದ್ದೇನೆ. ಜನರ ಸಮಸ್ಯೆಗೆ ಸ್ಪಂದಿಸದವರು ಚುನಾವಣೆಗೆ ನಿಲ್ಲಬಾರದು" ಎಂದು ಹರಿಹಾಯ್ದರು.












Click it and Unblock the Notifications