ಕಾರವಾರ: ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಪತ್ತೆ
ಕಾರವಾರ, ಸೆಪ್ಟೆಂಬರ್ 02: ಕೈಗಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಇಂದು ಪತ್ತೆಯಾಗಿದ್ದಾರೆ.
ದೆಹಲಿಯಿಂದ ಬಂದ ಒಂದು ಮಾಹಿತಿಯಂತೆ ಡಿವೈಎಸ್‌ಪಿ ಶಂಕರ್ ಮಾರಿಹಾಳ ಮತ್ತು ಗುಪ್ತಚರ ಇಲಾಖೆ ಅಧಿಕಾರಿ ರವಿಚಂದ್ರ ಅವರು ನಿನ್ನೆ ಕೈಗಾ ಅರಣ್ಯ ಪ್ರದೇಶದಲ್ಲಿ ಇನ್ನೂ ಹತ್ತು ಮಂದಿ ತಂಡವನ್ನು ಕರೆದುಕೊಂಡು ಕಾರ್ಯಾಚರಣೆಗೆ ತೆರಳಿದ್ದರು.
ಈ ವೇಳೆ ಅಚಾನಕ್ಕಾಗಿ ಕಾಡುಪ್ರಾಣಿ ದಾಳಿ ಮಾಡಿದ ಕಾರಣ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ರವಿಂಚಂದ್ರ ಮತ್ತು ಶಂಕರ್ ಅವರು ದಾರಿ ತಪ್ಪಿದ್ದಾರೆ.

ರಾತ್ರಿಯಿಡಿ ಇಬ್ಬರೂ ಅಧಿಕಾರಿಗಳು ಕಾಡಿನಲ್ಲಿಯೇ ಇದ್ದರು, ಅಧಿಕಾರಿಗಳನ್ನು ಹುಡುಕಲು ನಿನ್ನೆ ನಡೆಸಿದ ಕಾರ್ಯವು ವಿಫಲವಾಯಿತು. ಇಂದು ಬೆಳಿಗ್ಗೆ ಇಬ್ಬರೂ ಅಧಿಕಾರಿಗಳು ಪತ್ತೆಯಾಗಿದ್ದಾರೆ.
ಇಬ್ಬರೂ ಅಧಿಕಾರಿಗಳು ಮತ್ತು ತಂಡ ಯಾವ ಕಾರ್ಯಾಚರಣೆಗೆ ಕಾಡಿಗೆ ತೆರಳಿದ್ದರು ಎಂಬುದನ್ನು ಪೊಲೀಸರು ಮತ್ತು ಜಿಲ್ಲಾಡಳಿತ ಬಹಿರಂಗಪಡಿಸಿಲ್ಲ.












Click it and Unblock the Notifications