ಮಾಗೋಡಿನಲ್ಲಿ ವಿದ್ಯಾರ್ಥಿನಿ ಮೇಲೆ ಚಾಕುವಿನಿಂದ ಹಲ್ಲೆ, ನಿಷೇಧಾಜ್ಞೆ
Recommended Video

ಕಾರವಾರ, ಡಿಸೆಂಬರ್ 14: ವಿದ್ಯಾರ್ಥಿನಿಯೊಬ್ಬರ ಮೇಲೆ ಗುರುವಾರ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಮಾಗೋಡಿನಲ್ಲಿ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೊನ್ನಾವರ ತಾಲೂಕಿನಾದ್ಯಂತ 144ನೇ ಸೆಕ್ಷನ್ ಅನ್ವಯ 24 ಗಂಟೆ ನಿಷೇಧಾಜ್ಞೆ ಹೇರಿದ್ದಾರೆ.
ಪರೇಶ್ ಮೇಸ್ತಾ ಸಾವಿನ ಉದ್ವಿಗ್ನ ಪರಿಸ್ಥಿತಿಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಹೊನ್ನಾವರದಲ್ಲಿ ವಿದ್ಯಾರ್ಥಿನಿ ಕಾವ್ಯಾ ಶೇಖರ್ ಎಂಬಾಕೆ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆಗೆ ಯತ್ನ ಮಾಡಿದ್ದಾರೆ. ಈ ದಾಳಿಯಲ್ಲಿ ತಪ್ಪಿಸಿಕೊಂಡ ಕಾವ್ಯಾ ಕೈಗೆ ಇರಿತದ ಗಾಯವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ದಾಳಿಯು ಅನ್ಯ ಕೋಮಿನ ಯುವಕರಿಂದಲೇ ನಡೆದಿದೆ ಎಂಬ ಸುದ್ದಿ ಹರಿದಾಡಿದೆ. ವಿದ್ಯಾರ್ಥಿನಿಯ ಮನೆ ಮುಂದೆ ಸಾವಿರಾರು ಮಂದಿ ಜಮೆಯಾಗಿದ್ದಾರೆ. ಮೊದಲೇ ಬಿಗುವಿನ ವಾತಾವರಣ ಇದ್ದ ಹೊನ್ನಾವರದಲ್ಲಿ ಮತ್ತೆ ಗದ್ದಲ ಸೃಷಿಯಾಗಬಹುದು ಎಂಬ ಕಾರಣಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ್ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
"ಈ ಘಟನೆ ಬಗ್ಗೆ ಕೂಲಂಕಷ ತನಿಖೆ ಮಾಡುವವರೆಗೆ ಸಮಾಧಾನದಿಂದ ಇರಿ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications