ಶಿರಸಿಯಲ್ಲಿ ಸಿದ್ದರಾಮಯ್ಯನವರಿಗೆ ಮಹಿಳೆಯರಿಂದ ಅಪ್ಪುಗೆಯ ಸ್ವಾಗತ

Posted By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ಡಿಸೆಂಬರ್ 07: ಇಂದು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಈ ವೇಳೆ ಅವರನ್ನು ಮಹಿಳೆಯರಿಬ್ಬರು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಸುದ್ದಿಗೆ ಗ್ರಾಸವಾದರು.

ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ'

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಆಗಮಿಸಿದ ವೇಳೆ ಅವರನ್ನು ಸ್ವಾಗತಿಸಲು ಅನೇಕರು ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್ ನಲ್ಲಿ ನೆರೆದಿದ್ದರು.

Sirsi women welcomes CM Siddarmaiah with hug

ಈ ವೇಳೆ ಶಿರಸಿಯ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ ಹಾಗೂ ನಗರಸಭೆಯ ಪ್ರಭಾರಿ ಅಧ್ಯಕ್ಷೆ ಅರುಣಾ ವೆರ್ಣೇಕರ ಸಿಎಂರನ್ನ ಅಪ್ಪಿ ಸ್ವಾಗತಿಸಿಕೊಂಡಿದ್ದಾರೆ. ಬಳಿಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಮುಖ್ಯವಾಗಿ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಯಿತು.

ಕೆಟ್ಟ ಭಾಷೆ ಬಳಸಿದರೆ ಜನ ಬೆಳೆಸಲ್ಲ: ಬಿಜೆಪಿಗರಿಗೆ ಸಿಎಂ ಟಾಂಗ್

ಈ ಬಗ್ಗೆ 'ಒನ್ ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿರುವ ಶ್ರೀಲತಾ, "ಮುಖ್ಯಮಂತ್ರಿಗಳು ಹಾಗೂ ಡಾ.ಎಚ್.ಸಿ.ಮಹದೇವಪ್ಪ ನನ್ನ ಪತಿಗೆ ಬಹಳ ಹಿಂದಿನಿಂದಲೂ ಪರಿಚಯ. ಆತ್ಮೀಯರು ಕೂಡ," ಅವರನ್ನು ಸ್ವಾಗತ ಮಾಡಲೆಂದು ತೆರಳಿದ್ದ ನನಗೆ 'ಮನೆಮಗಳು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಗಿದ್ದಾಳೆ' ಎಂದು ಹರಸಿದರು," ಎಂದು ಹೇಳಿದ್ದಾರೆ.

Sirsi women welcomes CM Siddarmaiah with hug

"ಆಗ ಭಾವುಕಳಾದ ನಾನು ಅವರನ್ನು ತಂದೆಯ ಸಮಾನವಾಗಿ ತಬ್ಬಿಕೊಂಡೆ. ಆದರೆ ಅದನ್ನೇ ಕೆಲ ಮಾಧ್ಯಮದವರು ಅತಿರೇಖವಾಗಿ ರಂಜಿಸಿದ್ದಾರೆ. ಇದು ಬಹಳ ನೋವನ್ನುಂಟು ಮಾಡಿದೆ. ತಂದೆಯವರನ್ನು ಮಗಳು ತಬ್ಬಿಕೊಂಡರೆ ತಪ್ಪೇನಿದೆ?" ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah has come to Uttar Kannada district for the inauguration and construction of various works today. At this point, the two women hugs CM and taken photos with him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ