ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಕಾಡು ಹಂದಿ ಮಾಂಸ ಎಂದು ನಾಯಿ ಮಾಂಸ ಮಾರಾಟ: ಗ್ರಾಮಸ್ಥರ ಬಲೆಗೆ ಬಿದ್ದ ಖದೀಮರು

ಕಾಡುಹಂದಿ ಮಾಂಸ ಎಂದು ಗ್ರಾಹಕರನ್ನು ನಂಬಿಸಿ ನಾಯಿ ಮಾಂಸವನ್ನು ಮಾರಾಟ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗ್ಟಾ ಮತ್ತು ಹಿಲ್ಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮುಂದೆನಾಯ್ತು ತಿಳಿಯಿರಿ.

|
Google Oneindia Kannada News

ಕಾರವಾರ, ಜನವರಿ 30: ನಾನ್ ವೆಜ್‌ ಪ್ರೀಯರಿಗೆ ಶಾಕ್ ನೀಡುವ ಸಂಗತಿಯೊಂದು ಉತ್ತರ ಕನ್ನಡದ ಕಾರವಾರ ವ್ಯಾಪ್ತಿಯಲ್ಲಿ ನಡೆದಿದೆ. ಇವರ ಬಳಿ ಮಾಂಸ ಖರೀದಿಸಿದವರಿಗೆ ಅದು ಹಂದಿ ಮಾಂಸವಲ್ಲ, ಬದಲಾಗಿ ನಾಯಿ ಮಾಂಸ ಎಂದು ಗೊತ್ತಾಗಿ ಅವರೆಲ್ಲ ದಂಗಾಗಿದ್ದಾರೆ.

ಚಲನಚಿತ್ರವೊಂದರಲ್ಲಿ ನವರಸನಾಯಕ ಜಗ್ಗೇಶ್​ ಅವರು ಬೌಬೌ ಬಿರಿಯಾನಿ ತಿನ್ನುವ ದೃಶ್ಯ ಸಾಕಷ್ಟು ಜನರು ನೋಡಿಯೇ ಇರುತ್ತಾರೆ. ಸಿನಿಮಾಗಾಗಿ, ಮನರಂಜನೆಗಾಗಿ ಸೇರಿಸಲಾದ ದೃಶ್ಯ ಅದಾಗಿತ್ತು. ಅದುವೇ ನಿಜ ಜೀವನದಲ್ಲಿ ನಡೆದರೆ ಹೇಗಿರುತ್ತದೆ ಎಂಬುದನ್ನು ಊಹಿಸಲು ಕಷ್ಟವಾಗುತ್ತದೆ. ಆದರೆ ಅಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ.

Aero India 2023:ಯಲಹಂಕದಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಮಾಂಸ ಮಾರಾಟ ನಿಷೇಧAero India 2023:ಯಲಹಂಕದಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಮಾಂಸ ಮಾರಾಟ ನಿಷೇಧ

ವ್ಯಾಪಾರಿಗಳು ಕಾಡುಹಂದಿ ಮಾಂಸ ಎಂದು ಗ್ರಾಹಕರನ್ನು ನಂಬಿಸಿ ನಾಯಿ ಮಾಂಸವನ್ನು ಮಾರಾಟ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗ್ಟಾ ಮತ್ತು ಹಿಲ್ಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಭಾಗದ ಜನರುಗೆ ಮೋಸ ಹೋಗಿದ್ದು ಹಂದಿ ಮಾಂಸದ ಬದಲಾಗಿ ನಾಯಿ ಮಾಂಸ ಖರೀದಿಸಿ ಮೋಸ ಹೋಗಿದ್ದಾರೆ.

Selling dog meat by trusting villagers, People who handed over two accused to police

ಕಾಡು ಹಂದಿ ಮಾಂಸವೆಂದು ನಾಯಿ ಮಾಂಸದ ಜೊತೆಗೆ ಊರ ಹಂದಿಯ ಮಾಂಸ ನೀಡಿದ್ದ ಇಬ್ಬರು ಅಲೆಮಾರಿ ಜನಾಂಗ ಯುವಕರನ್ನು ಗ್ರಾಮಸ್ಥರೇ ರೆಡ್ ಹಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಯಾರು ಕಾಡು ಹಂದಿ ಮಾಂಸ ಬೇಕು ಎನ್ನುತಾರೋ ಅಂತವರನ್ನು ಈ ಆರೋಪಿಗಳು ಮೊದಲು ಟಾರ್ಗೆಟ್ ಮಾಡಿದ್ದಾರೆ. ಈ ಮೊಗ್ಟಾ ಮತ್ತು ಹಿಲ್ಲೂರು ಎರಡು ಗ್ರಾಮಸ್ಥರು ಆರೋಪಿಗಳಿಂದ ಕೇಜಿಗಟ್ಟಲೇ ಹಂದಿ ಮಾಂಸ ಖರೀದಿಸಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಇದು ಕಾಡು ಹಂದಿ ಮಾಂಸ ಅಲ್ಲ ಎಂಬ ಅನುಮಾನ ಬಂದಿದೆ. ನಂತರ ಆರೋಪಿಗಳಿಗೆ ಮತ್ತೆ ಮಾಂಸ ತರುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿಗಳು ಸಮಯ ನೋಡಿಕೊಂಡು ನಾಯಿ ಹಿಡಿಯುಲು ಮುಂದಾಗಿದ್ದಾರೆ. ಮೊದಲೇ ಅನುಮಾನಗೊಂಡಿದ್ದ ಗ್ರಾಮಸ್ಥರು ನಾಯಿ ಹಿಡಿಯುವ ವೇಳೆ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ.

ಆರಂಭದಲ್ಲಿ ತಪ್ಪೊಪ್ಪಿಕೊಳ್ಳದ ಇಬ್ಬರಿಗೂ ಊರ ಮಂದಿ ಕೂಡಿಕೊಂಡು ಸರಿಯಾಗಿ ಥಳಿಸಿದ್ದಾರೆ. ನೀಜ ಹೇಳುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಇಬ್ಬರು ಆರೋಪಿಗಳು ಹೌದು, ಕಾಡು ಹಂದಿ ಮಾಂಸದ ಬದಲಾಗಿ ನಾಯಿ ಮತ್ತು ಊರ ಹಂದಿ ಮಾಂಸ ನೀಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ತಾವು ಮೋಸ ಹೋಗಿರುವುದಾಗಿ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಅವರನ್ನು ಒಪ್ಪಿಸಿದ್ದಾರೆ.

Selling dog meat by trusting villagers, People who handed over two accused to police

ನಾಯಿ ಮಾಂಸ ಮಾರಾಟ ಇದು ಮೊದಲಲ್ಲ

ಇಂತಹ ಘಟನೆಗಳು ಇದೇ ಮೊದಲಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ಕಡೆಗಳಲ್ಲಿ ನಾಯಿ ಮಾಂಸದಿಂದ ತಯಾರಿಸಿದ್ದ ಬಿರಿಯಾನಿ (ಬೌಬೌ ಬಿರಿಯಾನಿ) ಮಾರಾಟದ ಅರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಬೀದಿನಾಯಿಗಳು ಕಣ್ಮರೆಯಾಗಿದ್ದವರು. ಈಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಅಧಿಕಾರಿಗಳು ಸತ್ಯ ಬಯಲು ಮಾಡಿದ್ದರು. ನಾಯಿ ದೇಹದ ಭಾಗಗಳು ಪತ್ತೆಯಾಗಿದ್ದವು.

ಅದೇ ರೀತಿ ಎರಡು ವರ್ಷಗಳ ಹಿಂದೆ ಹಾಸನದ ಹೊಳೆನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ನಾಯಿಗಳ ತಲೆಬುರುಡೆಗಳು ಭಾರಿ ಸಂಖ್ಯೆಯಲ್ಲಿ ಪತ್ತೆಯಾಗಿದ್ದವು. ಮಾಂಸಕ್ಕಾಗಿ ನಾಯಿಗಳನ್ನು ಕೊಂದು ತಲೆ ಬುರುಗಡೆಗಳನ್ನು ಇಲ್ಲಿ ಹಾಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಭಾಗದ ಮಾಂಸ ಪ್ರೀಯರು ಸುದ್ದಿ ಕೇಳಿ ದಂಗಾಗಿದ್ದರು.

English summary
Karwar: Selling dog meat by trusting villagers, People who handed over two accused to police,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X