ಯಲ್ಲಾಪುರದಲ್ಲಿ ದಾಳಿಂಬೆ ತುಂಬಿಕೊಂಡಿದ್ದ ಲಾರಿ ಪಲ್ಟಿ; ಹಣ್ಣಿಗೆ ಮುಗಿಬಿದ್ದ ಜನ
ಯಲ್ಲಾಪುರ, ಜನವರಿ 04: ಯಲ್ಲಾಪುರ ನಗರದ ಹುಬ್ಬಳ್ಳಿ ರಸ್ತೆಯ ಕಾಮಾಕ್ಷಿ ಪೆಟ್ರೋಲ್ ಪಂಪ್ ಬಳಿ ದಾಳಿಂಬೆ ಹಣ್ಣು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು, ರಸ್ತೆ ಮೇಲೆಲ್ಲಾ ದಾಳಿಂಬೆ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಇಂದು ಬೆಳಗ್ಗಿನ ಜಾವ ಎದುರಿನಿಂದ ಬಂದ ಇನ್ನೊಂದು ವಾಹನವನ್ನು ತಪ್ಪಿಸಲು ಹೋದ ಪರಿಣಾಮ ಲಾರಿ ಪಲ್ಟಿ ಹೊಡೆದಿದೆ. ಲಾರಿ ಚಾಲಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯಲ್ಲಿದ್ದ ದಾಳಿಂಬೆ ಹಣ್ಣುಗಳೆಲ್ಲಾ ಸಂಪೂರ್ಣವಾಗಿ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರು ಆ ಹಣ್ಣುಗಳನ್ನು ತುಂಬಿಕೊಂಡು ಹೋಗಲು ಮುಗ್ಗಿಬಿದ್ದಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications