ಇವರು ಉತ್ತರ ಕನ್ನಡ ಜಿಲ್ಲೆಯ 'ಕೊರೊನಾ ವಾರಿಯರ್ಸ್'...
ಕಾರವಾರ, ಜುಲೈ 7: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ಕಾರ್ಯ ದಿನನಿತ್ಯ ಪ್ರತ್ಯಕ್ಷವಾಗಿ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಕಾಣುತ್ತಿರುತ್ತೇವೆ. ಆದರೆ, ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆಯೋ ಇಲ್ಲವೋ ಎಂಬ ವರದಿ ನೀಡಲು ನಿದ್ದೆ, ಊಟ- ತಿಂಡಿ ಬಿಟ್ಟು ಹಗಲು- ರಾತ್ರಿ ಪ್ರಯೋಗಾಲಯದಲ್ಲಿ ದುಡಿಯುತ್ತಿರುವವರ ಕಾರ್ಯ ಮಾತ್ರ ಎಲೆಮರೆಯ ಕಾಯಿಯಾಗೇ ಉಳಿದುಬಿಟ್ಟಿದೆ.
ಹೌದು, ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಒಬ್ಬರಿಂದ ಮಾತ್ರವಲ್ಲ, ಒಗ್ಗಟ್ಟಿನ ಹೋರಾಟ. ಹಾಗೆಯೇ, ಪ್ರತಿದಿನ ಜಿಲ್ಲಾಡಳಿತ ಅಥವಾ ಸರ್ಕಾರ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ ಹಿಂದೆಯೂ ಅದೆಷ್ಟೋ ಕೈಗಳ ದಿನವಿಡಿಯ ಶ್ರಮವೂ ಅಡಗಿದೆ ಎನ್ನುವುದನ್ನು ಕೂಡ ಕೊರೊನಾದ ಸದ್ದು- ಸುದ್ದಿಗಳ ನಡುವೆ ಮರೆತೇ ಬಿಟ್ಟಿದ್ದೇವೆ.

ಉತ್ತರ ಕನ್ನಡದ ಕಿಮ್ಸ್ ನಲ್ಲಿ ಪ್ರಯೋಗಾಲಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕಿಮ್ಸ್) ಕೋವಿಡ್- 19 ಪ್ರಯೋಗಾಲಯ ತಿಂಗಳ ಹಿಂದೆ ಆರಂಭಗೊಂಡಿದೆ. ಈ ಪ್ರಯೋಗಾಲಯ ಆರಂಭಗೊಂಡು ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಅವರ ಮಾರ್ಗದರ್ಶನ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ಅವರ ಪರಿಶ್ರಮ, ಕಿಮ್ಸ್ ನ ನಿರ್ದೇಶಕ ಡಾ.ಗಜಾನನ ನಾಯಕ ಅವರ ಸಹಕಾರ ಇದೆ.
ಸದ್ಯ ಈ ಪ್ರಯೋಗಾಲಯ ಕಿಮ್ಸ್ ನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಏಳು ವೈದ್ಯರು, ಇಬ್ಬರು ವಿಜ್ಞಾನಿಗಳು, 9 ಮಂದಿ ತಂತ್ರಜ್ಞರು, ಡಾಟಾ ಆಪರೇಟರ್ಸ್ 4 ಹಾಗೂ ಡಿ ದರ್ಜೆಯ ಇಬ್ಬರು ನೌಕರರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಮಾರು 4,000 ಯಶಸ್ವಿ ಪರೀಕ್ಷೆ...
ವೈದ್ಯರು ಮೂರು ಶಿಫ್ಟ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಒಂದು ಶಿಫ್ಟ್ ಎಂಟು ಗಂಟೆ ಇರಲಿದೆ. ಕಿಮ್ಸ್ ಕೋವಿಡ್ ಪ್ರಯೋಗಾಲಯದಲ್ಲಿ ಡಾ.ಶೀತಲ ಗೌಡ, ಡಾ.ನವೀನ್, ಡಾ.ಅಶ್ವಿನ್, ಡಾ.ಚಾಂದಿನಿ, ಡಾ.ಸ್ನೇಹಾ ಕುಕನೂರ್, ಸ್ವಪ್ನಾ ಹಾಗೂ ಪಾರಿತೋಶ್ ಇವರೊಂದಿಗೆ ವಿಜ್ಞಾನಿಗಳಾಗಿ ಡಾ.ಶಿವಕುಮಾರ್ ಹಾಗೂ ಡಾ.ರಾಜೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜೂನ್ ಒಂದರಿಂದ ಕಾರ್ಯಾರಂಭ ಮಾಡಿದ ಈ ಲ್ಯಾಬ್ ನಲ್ಲಿ ಈವರೆಗೆ ಸುಮಾರು 4,000 ಪರೀಕ್ಷೆಗಳನ್ನು ನಡೆಸಲಾಗಿದೆ. ಲ್ಯಾಬ್ ನ ಸಾಮರ್ಥ್ಯ ದಿನಕ್ಕೆ 250 ಆರ್ ಟಿ- ಪಿಸಿಆರ್ (including pooling) ಹಾಗೂ ಟ್ರ್ಯೂ- ನ್ಯಾಟ್ ನಲ್ಲಿ 20 ಪರೀಕ್ಷೆಗಳನ್ನು ದಿನಕ್ಕೆ ನಡೆಸಬಹುದಾಗಿದೆ. ಆದರೆ, ಸದ್ಯ ದಿನವೊಂದಕ್ಕೆ 500ರಷ್ಟು ಗಂಟಲು ದ್ರವದ ಮಾದರಿ ಜಿಲ್ಲೆಯ ವಿವಿಧೆಡೆಯಿಂದ ಪರೀಕ್ಷೆಗಾಗಿ ಲ್ಯಾಬ್ ಗೆ ಬರುತ್ತಿವೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಹಗಲು- ರಾತ್ರಿ ಎನ್ನದೇ ಒತ್ತಡದ ನಡುವೆಯೂ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ವರದಿಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕರ್ತವ್ಯದ ಅವಧಿಯ ಎಂಟು ತಾಸೂ ಗಮನವಿಟ್ಟು ಪರೀಕ್ಷೆಗಳನ್ನು ನಡೆಸಬೇಕಿದೆ.

ಪಿಪಿಇ ಕಿಟ್ ಧರಿಸಿಯೇ ಇರಬೇಕು...
ಇನ್ನು, ಗಂಟಲು ದ್ರವದಲ್ಲಿನ ವೈರಾಣು ಪರೀಕ್ಷೆ ನಡೆಸುವ ಸಿಬ್ಬಂದಿಗೂ ಸೋಂಕು ಒಮ್ಮೊಮ್ಮೆ ತಗುಲುವ ಸಾಧ್ಯತೆ ಇರುತ್ತದೆ. ರಾಜ್ಯದ ಕೆಲವೆಡೆ ಕೂಡ ಈ ರೀತಿಯ ಘಟನೆಗಳು ನಡೆದಿವೆ. ಹೀಗಾಗಿ ಅತಿ ಜಾಗರೂಕತೆಯಿಂದ ಇಲ್ಲಿ ಕಾರ್ಯನಿರ್ವಹಿಸಬೇಕಿದೆ. ಮುಂಜಾಗ್ರತಾ ಕ್ರಮವಾಗಿ ಕರ್ತವ್ಯದ ಅವಧಿಯಲ್ಲಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಧರಿಸಿಯೇ ಇಲ್ಲಿ ಕಾರ್ಯನಿರ್ವಹಿಸುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ.

ಗಂಟಲು ದ್ರವ ಪರೀಕ್ಷೆಗೆ ಬೇಕು 8 ಗಂಟೆ
ಓರ್ವ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಲು ಕನಿಷ್ಠ 6ರಿಂದ 8 ಗಂಟೆ ಬೇಕಾಗುತ್ತದೆ. ಆ ವ್ಯಕ್ತಿಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂದು ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವ ಹೊತ್ತಿಗೆ ಇನ್ನೊಂದು ಗಂಟೆ ಹೆಚ್ಚೇ ತಗುಲುತ್ತದೆ. ಈ ವೇಳೆ ಮೊದಲಿನ ಶಿಫ್ಟ್ ಗೆ ಪರೀಕ್ಷೆ ನಡೆಸಿದ್ದವರು ವಿಶ್ರಾಂತಿಗಾಗಿ ತೆರಳಿದರೆ, ಎರಡನೇ ಶಿಫ್ಟ್ ನ ಸಿಬ್ಬಂದಿಯ ಮೇಲೆ ಕಾರ್ಯಭಾರ ಹೆಚ್ಚಾಗುತ್ತದೆ. ಒತ್ತಡದ ನಡುವೆಯೂ ಕಳೆದ ಒಂದು ತಿಂಗಳಿನಿಂದ ಇಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications