Get Updates
Get notified of breaking news, exclusive insights, and must-see stories!

5 ವರ್ಷಗಳಿಂದ ಮೂಲಸೌಲಭ್ಯಗಳ ಕೊರತೆ: ಗೋಕರ್ಣದ ಸಣ್ಣ ಬಿಜ್ಜೂರಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ

ಕಾರವಾರ, ಮಾರ್ಚ್‌, 28: ಪ್ರತಿಬಾರಿಯೂ ಮಳೆಗಾಲದ ವೇಳೆ ನೆರೆಹಾವಳಿಗೆ ಒಳಗಾಗುತ್ತಿದ್ದ ಗೋಕರ್ಣದ ಸಣ್ಣ ಬಿಜ್ಜೂರಿನ ಹಲವು ಕುಟುಂಬಗಳಿಗೆ ಸರ್ಕಾರ 50 ವರ್ಷಗಳ ಹಿಂದೆ ಭೂಮಿ ಮಂಜೂರಿ ಮಾಡಿತ್ತು. ಆದರೆ ಇದೀಗ ಇಲ್ಲಿನ ಜನಪ್ರತಿಧಿಗಳ ನಿರ್ಲಕ್ಷದಿಂದ ಜನರು ಮನೆಗಳಿದ್ದರೂ ಸೂಕ್ತ ಸೌಲಭ್ಯ ಪಡೆಯಲಾಗದೆ ಕನಿಷ್ಠಮಟ್ಟದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ಗೋಕರ್ಣದಿಂದ ಕೆಲವೇ ಕಿ.ಮೀ ಅಂತರದಲ್ಲಿರುವ ಸಣ್ಣ ಬಿಜ್ಜೂರಿನ ಜನ ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮದ ಸರ್ವೆ ನಂಬರ್ 283ರಲ್ಲಿ 1973ರಲ್ಲಿಯೇ ಪ್ಲಾಟ್‌ಗಳಾಗಿ ವಿಂಗಡಿಸಿ ಜನರಿಗೆ ಕಬ್ಜಾ ನೀಡಲಾಗಿದೆ. ಕಾಲೋನಿಯಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸವಾಗಿದ್ದು, ಅವರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ.

Lack of infrastructure from 5 years: Election boycott warn by Sanna Bijjur Villagers

ಸೌಲಭ್ಯಗಳನ್ನ ಕಲ್ಪಿಸದ ಜನಪ್ರತಿನಿಧಿಗಳು

ಸರ್ಕಾರ ಮಾತ್ರ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದಾಗಿ ಹೇಳಿತ್ತಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಯಾವುದೇ ಸೌಲಭ್ಯ ತಲುಪದೆ ಇಂದಿಗೂ ಪ್ರಾಣಿಗಳಂತೆ ಕನಿಷ್ಠ ಮಟ್ಟದ ಜೀವನ ನಡೆಸುವಂತಾಗಿದೆ. ಸರ್ಕಾರ ನೀಡಿದ ಗಾಂವಠಾಣಾ ಜಾಗದಲ್ಲಿ ಬಹುತೇಕರು ಸಣ್ಣ ಮನೆ, ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಸರ್ಕಾರದಿಂದ ಮನೆ ಸೇರಿದಂತೆ ಇನ್ನಿತರ ಯಾವುದೇ ದೊಡ್ಡ ಮಟ್ಟದ ಸೌಲಭ್ಯಗಳು ಬಂದರೂ, ಸ್ಥಳೀಯ ಗ್ರಾಮ ಪಂಚಾಯಿತಿಯವರು ನಿಮಗೆ ಆರ್‌ಟಿಸಿ ಇಲ್ಲ ಎಂದು ನಿರಾಕರಣೆ ಮಾಡುತ್ತಿದ್ದಾರೆ.

ನಾವು ಆರ್‌ಟಿಸಿ ಬದಲಾವಣೆಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಮಾಸ್ತಿ ಆಗೇರ್ ಅಳಲು ತೋಡಿಕೊಂಡಿದ್ದಾರೆ. ಕಾಲೋನಿಯಲ್ಲಿ ಹಲವು ಮನೆಗಳಿಗೆ ಇನ್ನೂ ಕೂಡ ವಿದ್ಯುತ್ ಸಂಪರ್ಕ ನೀಡಿಲ್ಲ. ಶೌಚಾಲಯಗಳನ್ನು ನೀಡಿದರೂ ಅವುಗಳ ಕಾಮಗಾರಿ ಕೂಡ ಅರೆ ಬರೆಯಾಗಿದೆ. ಇತ್ತೀಚೆಗೆ ನೀರಿನ ವ್ಯವಸ್ಥೆ ಕಲ್ಪಿಸಿದರೂ ಕೂಡ ನೀರು ಕೂಡ ಸರಿಯಾಗಿ ಬರುತ್ತಿಲ್ಲ.

Lack of infrastructure from 5 years: Election boycott warn by Sanna Bijjur Villagers

ಕೆಲವರಿಗೆ ಪಡಿತರ ಸಿಗುತ್ತಿದ್ದರೇ, ಇನ್ನು ಕೆಲವರಿಗೆ ಅದು ಕೂಡ ಸಿಗುತ್ತಿಲ್ಲ. ಬಹುತೇಕರು ಅನಕ್ಷರಸ್ಥರಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ನಮ್ಮ ಕೈಲಾದ ಹೋರಾಟ ಮಾಡಿದರೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸದ ಕಾರಣ ನಾವು ಸೋತು ಇದೀಗ ಇದ್ದ ಮನೆಯಲ್ಲಿಯೇ ಕನಿಷ್ಠ ಮಟ್ಟದ ಜೀವನ ನಡೆಸುವಂತಾಗಿದೆ ಎಂದು ಇಲ್ಲಿನ ನಿವಾಸಿ ಮಹಿಳೆ ಭಾರತಿ ಮಂಜುನಾಥ ನಾಯ್ಕ ಎನ್ನುವವರು ಅಳಲು ತೋಡಿಕೊಂಡಿದ್ದಾರೆ.

ಜನರ ಸಮಸ್ಯೆ ಆಲಿಸದ ಶಾಸಕರು

ಕಾಲೋನಿ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಮನವಿ ಮಾಡಿದ್ದೇವೆ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಮ್ಮ ಶಾಸಕರಾಗಿರುವ ದಿನಕರ ಶೆಟ್ಟಿ ಅವರಿಗೂ ಮನವಿ ಮಾಡಿದ್ದೇವೆ. ಆದರೆ ಯಾರೊಬ್ಬರು ನಮ್ಮ ಬಗ್ಗೆ ಗಮನಹರಿಸುತ್ತಿಲ್ಲ. ನಮ್ಮ ಸಮುದಾಯಕ್ಕೆ ಸರ್ಕಾರ ಅತಿ ಹೆಚ್ಚು ಸೌಲಭ್ಯ ನೀಡುತ್ತಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಬ್ದಾರಿತನದಿಂದಾಗಿ ಆ ಸೌಲಭ್ಯ ಲಭ್ಯವಾಗದಂತಾಗಿದೆ ಎಂದು ಜನರ ಆರೋಪವಾಗಿದೆ

ಸರ್ಕಾರ ಚುನಾವಣೆ ಪೂರ್ವದಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂಧಿಸದೆ ಇದ್ದಲ್ಲಿ ಅನಿವಾರ್ಯವಾಗಿ ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಇನ್ನು ಈ ಬಗ್ಗೆ ಕುಮಟಾ ತಹಶೀಲ್ದಾರ ಆರ್.ವಿ.ಕಟ್ಟಿ ಅವರನ್ನು ಕೇಳಿದಾಗ ಸಮಸ್ಯೆ ಗಮನಕ್ಕೆ ಬಂದಿಲ್ಲ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸುತ್ತೇವೆ. ಅವರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸುತ್ತೇವೆ. ಮತದಾನದ ಬಗ್ಗೆ ಮನವರಿಕೆ ಮಾಡಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+