Get Updates
Get notified of breaking news, exclusive insights, and must-see stories!

ಕೌಟುಂಬಿಕ ಹಣಕಾಸಿನ ಕಲಹ; ಅಜ್ಜನಿಂದಲೇ ಬಾಲಕನ ಅಪಹರಣ!

ಕಾರವಾರ, ಆಗಸ್ಟ್‌ 22: ಭಟ್ಕಳದ ಅಜಾದ್ ನಗರದಲ್ಲಿ ಶನಿವಾರ ಅಪಹರಣವಾಗಿದ್ದ ಬಾಲಕನನ್ನು ಹಣದ ವಿಚಾರವಾಗಿ ಕೌಟುಂಬಿಕ ಕಲಹದಿಂದ ಅಜ್ಜನೇ ಅಪಹರಿಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಕಾರವಾರ ಪೊಲೀಸರು ಸೋಮವಾರ ಬೆಳಿಗ್ಗೆ ಗೋವಾದ ಕಲುಂಗುಟ್ ಕಡಲತೀರದಲ್ಲಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಆಗಸ್ಟ್‌ 20ರಂದು ಸಂಜೆ ಅಂಗಡಿಗೆ ತೆರಳಿದ್ದ ಭಟ್ಕಳ ಆಜಾದ್ ನಗರದ ಎಂಟು ವರ್ಷದ ಬಾಲಕನೋರ್ವನನ್ನ ಅಪಹರಣ ಮಾಡಲಾಗಿತ್ತು. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು. ಬಾಲಕನ ಹುಡುಕಾಟ ಹಾಗೂ ಆತನನ್ನ ಸುರಕ್ಷಿತವಾಗಿ ಕರೆತರಲು ಪೊಲೀಸರ ಐದು ತಂಡಗಳನ್ನ ರಚಿಸಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿಯ ನೆರವಿನಿಂದ ಹಾಗೂ ಕುಟುಂಬದವರನ್ನ ವಿಚಾರಣೆ ನಡೆಸಿದಾಗ ಹಣದ ವ್ಯವಹಾರವೇ ಇದಕ್ಕೆ ಕಾರಣ ಎಂಬುದು ಪೊಲೀಸರಿಗೆ ತಿಳಿದು ಕಾರ್ಯಾಚರಣೆ ನಡೆಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ನಾ ಪೆನ್ನೇಕರ್ ತಿಳಿಸಿದ್ದಾರೆ.

ಬಾಲಕನನ್ನು ಮಾರುತಿ ಸುಜುಕಿ ಇಕೋ ವಾಹನದಲ್ಲಿ ಆಜಾದ್ ನಗರದಿಂದ ಅಪಹರಿಸಿ, ಬಳಿಕ ಮತ್ತೊಂದು ವಾಹನ ಬಳಸಿ ಗೋವಾಕ್ಕೆ ಬಾಲಕನನ್ನ ಕರೆದೊಯ್ಯಲಾಗಿತ್ತು. ಗೋವಾದ ಕಲಂಗುಟ್ ಬೀಚ್ ನ ರೂಮೊಂದರಲ್ಲಿ ಬಾಲಕ ಆರೋಪಿ ಅನೀಶ್ (29) ಎಂಬಾತನೊಂದಿಗೆ ಪತ್ತೆಯಾಗಿದ್ದಾನೆ. ಬಾಲಕನ ತಾಯಿಯ ಸೋದರ ಮಾವ (ಬಾಲಕನ ಅಜ್ಜ), ಸೌದಿ ಅರೇಬಿಯಾದಲ್ಲಿರುವ ಇನಾಯತ್ ಉಲ್ಲಾ ಎಂಬಾತನ ಸೂಚನೆಯ ಮೇರೆಗೆ ಈ ಅಪಹರಣ ನಡೆದಿದೆ. ಐವರು ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ಓರ್ವನನ್ನು ಬಂಧಿಸಲಾಗಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

Karwar Police Rescued a Boy who Kidnapped by his Grandfather

ಬಾಲಕನ ತಂದೆ ಮತ್ತು ಅಜ್ಜನಿಗೆ ಹಣದ ವ್ಯವಹಾರವಿತ್ತು. ಅದಕ್ಕಾಗಿ ಬಾಲಕನನ್ನು ಅಪಹರಣ ಮಾಡಿಸಲಾಗಿತ್ತು. ಬಾಲಕನಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಸುರಕ್ಷಿತವಾಗಿ ಕರೆತರಲಾಗಿದೆ ಎಂದ ಅವರು, ಈ ಅಪಹರಣದಿಂದ ಭಟ್ಕಳಿಗರು ಅಥವಾ ಉತ್ತರ ಕನ್ನಡ ಜಿಲ್ಲೆಯ ಜನತೆ ಭಯಪಡುವಂಥದ್ದೇನೂ ಇಲ್ಲ. ಇದು ಕೌಟುಂಬಿಕ ಕಲಹದಿಂದ ನಡೆದ ಅಪಹರಣವಷ್ಟೇ ಎಂದು ಹೇಳಿದ್ದಾರೆ.

ಕೈ ಮುರಿದ ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ

ನಗರದ ಬಾಡ ಐಟಿಐ ಕಾಲೇಜಿನ ರಸ್ತೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಹಲವರ ಗುಂಪೊಂದು ದೊಣ್ಣೆಯಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ನಾ ಪೆನ್ನೇಕರ್ ಹೆಚ್ಚಿನ‌ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿಯೋರ್ವನನ್ನು ಸುತ್ತುವರಿದ ಗುಂಪು ಮನಬಂದಂತೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಕೈಮುರಿದ ವ್ಯಕ್ತಿಯೆಂದೂ ನೋಡದೇ ಥಳಿಸಿದ್ದರು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿದಾಗ ಘಟನೆ ಕುರಿತು ಕೆಲ ದಿನಗಳ ಹಿಂದಷ್ಟೇ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ನೀಡಿದ್ದ ದೂರಿನಲ್ಲಿ ಅಂಗಡಿಯಲ್ಲಿ ಪಡೆದಿದ್ದ ವಸ್ತುವಿಗೆ ಹಣ ನೀಡಿಲ್ಲ ಎಂದು ವಿನೋದ್ ಬಿಣಗೇಕರ್, ಕಾರ್ತಿಕ ನಾಯ್ಕ ಹಾಗೂ ಸೂರ್ಯಕಾಂತ ಕಳಸ ಎಂಬುವವರು ಹಲ್ಲೆ ಮಾಡಿರುವುದಾಗಿ ಆರೋಪ ಮಾಡಿದ್ದರು.

Karwar Police Rescued a Boy who Kidnapped by his Grandfather

ದೂರು ನೀಡಿದವರು ಹಣದ ವಿಚಾರಕ್ಕೆ ಕೇವಲ ಹಲ್ಲೆ ಎಂದಷ್ಟೇ ತಿಳಿಸಿದ್ದು, ಈ ಹಿನ್ನಲೆ ಸಣ್ಣ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಬಳಿಕ ವಿಡಿಯೋ ವೈರಲ್ ಆದ ಹಿನ್ನೆಲೆ ಘಟನೆಯ ಗಂಭೀರತೆ ಅರಿವಿಗೆ ಬಂದಿದ್ದು, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+