ಐಟಿ ಇಲಾಖೆಯವರು ದರೋಡೆಕೋರರು: ಕುಮಾರಸ್ವಾಮಿ
ಉತ್ತರ ಕನ್ನಡ, ಏಪ್ರಿಲ್ 04: ಐಟಿ ಇಲಾಖೆಯವರು ನಿಜವಾದ ದರೋಡೆಕೋರರು, ದುಡ್ಡು ಹೋಗೋದು ಹೋಗುತ್ತಲೇ ಇದೆ, ಆದರೆ ನನ್ನ ಮತ್ತು ನನ್ನ ಬೆಂಗಾವಲು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ವಾಸ್ತವ್ಯ ಹೂಡಿರುವ ಹೊಟೆಲ್ ಮೇಲೂ ಸಹ ದಾಳಿ ಆಗಿರುವುದಾಗಿ ಹೇಳಿದ ಕುಮಾರಸ್ವಾಮಿ, ಐಟಿ ಅವರೋ ಅಥವಾ ಚುನಾವಣಾ ಅಧಿಕಾರಿಗಳೊ ನಿಖಿಲ್ ಇದ್ದ ಕೆ.ಆರ್.ಎಸ್. ಹೊಟೆಲ್ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಿದರು.
ಯಾರೂ ಇಲ್ಲದ ಸಮಯದಲ್ಲಿ ಅಧಿಕಾರಿಗಳು ಹೋಗಿದ್ದಾರೆ, ಅವರಿಗೆ ಅಲ್ಲಿ ಏನು ಸಿಗುತ್ತೆ, ಇದೆಲ್ಲವೂ ಕೀಳು ರಾಜಕೀಯ, ಎದುರಾಳಿಗಳು ಸಾರ್ವಜನಿಕವಾಗಿ ದುಡ್ಡು ಹಂಚಿದರೂ ಕೇಳುತ್ತಿಲ್ಲ, ಆದರೆ ನಿಖಿಲ್ ಕುಮಾರಸ್ವಾಮಿಯನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಐಟಿಯವರೇ ದರೋಡೆಕೋರರು, ಅಭ್ಯರ್ಥಿಗಳಿಗೆ, ಸಾರ್ವಜನಿಕರಿಗೆ ಸುಮ್ಮಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ನಾನು ರಾಜ್ಯದ ಮುಖ್ಯಮಂತ್ರಿ ನನ್ನನ್ನು 13-14 ಕಡೆ ಚೆಕ್ ಪೋಸ್ಟ್ ಅಂತ ನಿಲ್ಲಿಸ್ತಿದ್ದಾರೆ ಇದಕ್ಕೆಲ್ಲಾ ಅರ್ಥವಿದೆಯಾ? ಎಂದು ಕುಮಾರಸ್ವಾಮಿ ಬೇಸರದಿಂದ ಪ್ರಶ್ನಿಸಿದ್ದಾರೆ.












Click it and Unblock the Notifications