Get Updates
Get notified of breaking news, exclusive insights, and must-see stories!

'ಏಷ್ಯನ್ ಪ್ರಿಂಟ್ ಅವಾರ್ಡ್' ಗರಿ ಮುಡಿಗೇರಿಸಿಕೊಂಡ ಡ್ರೀಮ್ ಲ್ಯಾಂಡ್ ಪುಸ್ತಕ

ಕಾರವಾರ, ಮೇ 09 : ಉತ್ತರ ಕನ್ನಡ ಜಿಲ್ಲಾಡಳಿತ ಬಿಡುಗಡೆ ಮಾಡಿದ್ದ, ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡಿರುವ THE DREAMLAND Captivating glimpses of the most diverse district UTTARA KANNADA ಎಂಬ ಕಾಫಿ ಟೇಬಲ್ ಬುಕ್ ಗೆ ಏ‍ಷ್ಯನ್ ಪ್ರಿಂಟ್-2018 ಅವಾರ್ಡ್ ಲಭಿಸಿದೆ.

ಏಷ್ಯಾದ ಬೆಸ್ಟ್ ಪ್ರಿಂಟ್ ಪ್ರೊಡಕ್ಷನ್ ಗೆ ನೀಡಲಾಗುವ ಪ್ರಶಸ್ತಿ ಬ್ರೌಂಝ್ ಅವಾರ್ಡ್ ಅನ್ನು ಈ ಪುಸ್ತಕದ ಮುದ್ರಣ ಹಾಗೂ ಡಿಸೈನ್ ಮಾಡಿದ 'ಫ್ಲಾವರ್ ಗ್ರಾಫಿಕ್' ಕಂಪನಿಗೆ ಮೇ 3ರಂದು ಹಾಂಕಾಂಗ್ ನಲ್ಲಿ ಪ್ರದಾನ ಮಾಡಲಾಯಿತು. ಇಂಟರ್ ನ್ಯಾಷನಲ್ ಕ್ವಾಲಿಟಿ ಪ್ರಿಂಟ್‌ ಮಾತ್ರ ಆಯ್ಕೆ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಏಷ್ಯಾದ ಎಲ್ಲಾ ರಾಷ್ಟ್ರಗಳ ಸುಮಾರು 35ಕ್ಕೂ ಹೆಚ್ಚಿನ ಅತ್ಯುತ್ತಮ ಪ್ರಿಂಟ್ ಗಳು ಇದರಲ್ಲಿ ಪಾಲ್ಗೊಂಡಿದ್ದವು. ಡ್ರೀಮ್‌ ಲ್ಯಾಂಡ್ ಪುಸ್ತಕ ಪರಿಚಯ ಜಿಲ್ಲಾಡಳಿತ ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಪರಿಚಯಿಸುವ ನಿಟ್ಟಿನಲ್ಲಿ 'ದಿ ಡ್ರೀಮ್ ಲ್ಯಾಂಡ್' ಹೆಸರಿನ ಛಾಯಾಚಿತ್ರ ಪುಸ್ತಕವನ್ನು ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು.

DREAMLAND book won Asian Award at Hong Kong

ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಮತ್ತು ವೈಶಿಷ್ಟವನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ಛಾಯಾಚಿತ್ರಗಳನ್ನು ಪುಸ್ತಕದಲ್ಲಿ ಮುದ್ರಿಸಿ, ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಪುಸ್ತಕದಲ್ಲಿ ವಿಶೇಷವಾದ ನೈಸರ್ಗಿಕ ಭೌಗೋಳಿಕ ಪ್ರದೇಶ, ಕಲೆ, ಸಂಸ್ಕೃತಿ, ವಿವಿಧ ಸಮುದಾಯಗಳ ಜನ ಜೀವನ ಹಾಗೂ ವನ್ಯ ಜೀವಿಗಳ ಛಾಯಾಚಿತ್ರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ.
DREAMLAND book won Asian Award at Hong Kong

ಮುರಡೇಶ್ವರ, ಗೋಕರ್ಣ, ಯಾಣ, ದೇವಭಾಗ ಕಡಲ ತೀರ, ದಾಂಡೇಲಿ ಅರಣ್ಯ ಪ್ರದೇಶ ಹೀಗೆ ವಿಶೇಷ ಛಾಯಾಚಿತ್ರಗಳನ್ನು ಕ್ರೋಢಿಕರಿಸಿ ಈ ಪುಸ್ತಕ ಸಿದ್ಧಪಡಿಸಲಾಗಿದೆ. ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಸಂಗ್ರಹಯೋಗ್ಯವಾದ ಪುಸ್ತಕ ಇದಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಪುಸ್ತಕ ಆಧುನಿಕ ತಂತ್ರಜ್ಞಾನದಲ್ಲಿ ಮುದ್ರಣಗೊಂಡಿದೆ. ಫ್ಲಾವರ್ ಗ್ರಾಫಿಕ್ ಕಂಪನಿಯು ಇದರ ಮುದ್ರಣ ಹಾಗೂ ಡಿಸೈನ್ ಮಾಡಿದ್ದು, ಇದೀಗ ಅಂತರರಾಷ್ಟ್ರೀಯ ಅವಾರ್ಡ್ ಪಡೆದಿರುವುದು ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+