ಕಾರವಾರದಲ್ಲಿ ಮಾಸ್ಕ್ ಧರಿಸಿ ನಾಟಕ ಪ್ರದರ್ಶನ

ಕಾರವಾರ, ಮಾರ್ಚ್ 19: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಕಾರ ನಾಟಕ ಸಂಘ ಹಣಕೋಣ ಮಾಸ್ಕ್ ಧರಿಸಿ ನಾಟಕ ಪ್ರದರ್ಶನ ನೀಡಿತು.

ಕಾರವಾರ ನಗರ ವ್ಯಾಪ್ತಿಯ ನಂದನಗದ್ದಾದ ಶ್ರೀ ಸಣ್ಣಮ್ಮಗಿಂಡಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಹಣಕೋಣದ ಸಾಕಾರ ನಾಟಕ ಸಂಘ ಪ್ರದರ್ಶಿಸಿರುವ "ಹಾವ್ ತುಕಾ ನಾಕಾ, ತರ್ ತು ಕಿತ್ಯಾಕ್ ಮಾಕಾ?" ನಾಟಕದ ಮೊದಲ ಪ್ರವೇಶದಲ್ಲಿ ಹಾಸ್ಯ ಕಲಾವಿದರಾದ ಕೆನ್ಯಾ ಹಣಕೋಣ ಮತ್ತು ದೀಪಕ ಹಳದಿಪುರ ಮುಖಕ್ಕೆ ಮಾಸ್ಕ್ ಧರಿಸಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಕನ್ನಡ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಹಾಸ್ಯದಲ್ಲಿಯೇ ಜನರಿಗೆ ಉತ್ತಮ ಸಂದೇಶ ನೀಡುವ ಸಾಕಾರ ನಾಟಕ ಸಂಘ ಹಣಕೋಣ 15ಕ್ಕೂ ಹೆಚ್ಚು ವರ್ಷಗಳಿಂದ ರಂಗ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ.

Drama Perfomed Wearing Mask In Karwar

ಸಂಘದ ಅಧ್ಯಕ್ಷ ಗಜಾನನ ನಾಯ್ಕ ದೇವುಳಮಕ್ಕಿ, ಉಪಾಧ್ಯಕ್ಷ ಸಂದೀಪ ಶೆಟ್ಟಿ ಕಿನ್ನರ, ಕಾರ್ಯದರ್ಶಿ ದೀಪಕ ಹಳದೀಪುರ, ಖಜಾಂಚಿ ಕೆನ್ಯಾ ಹಣಕೋಣ, ಸದಸ್ಯರಾದ ಗಜಾನನ ಕಲ್ಗುಟಕರ, ಪ್ರಸಾದ ಬಾಂದೇಕರ, ದಯಾ ನಾಯ್ಕ, ವಿನಾಯಕ ಬಾಂದೇಕರ, ಸುನೀಲ್ ನಾಯ್ಕ ಶಿರವಾಡ, ಅರವಿಂದ ನಾಯ್ಕ, ಅಭಿಜಿತ ಕಾಣಕೋಣಕರ, ಸುಕಾಂತ ನಾಯ್ಕ, ಪ್ರದೀಪ ಬಾಂದೇಕರ, ದರ್ಶನ್ ನಾಯ್ಕ ಹಣಕೋಣ, ದರ್ಶನ್ ಆಚಾರಿ ಹಣಕೋಣ, ಸುರಜ ನಾಗೇಕರ, ಸುರಜ ನಾಯ್ಕ, ದಿಪೇಶ ದೇವುಳಮಕ್ಕಿ, ವಸಂತ ಮರಾಠೆ, ಮನೋಜ ಮಾಜಾಳಿಕರ ಹಾಗೂ ಇತರರನ್ನು ಒಳಗೊಂಡಿರುವ ಈ ಸಂಘ ಹಲವಾರು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿದೆ.

ಸಂದರ್ಭಕ್ಕನುಗುಣವಾಗಿ ಸ್ವಯಂ ಪ್ರೇರಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ಸಂಘದ ಹೆಗ್ಗಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+