ಇದೊಂದು ಕಾರಣಕ್ಕೆ ಕುಂಬ್ರಿಯಲ್ಲಿ ಮಗಳನ್ನೇ ಕೊಂದ ತಂದೆ!
ಯಲ್ಲಾಪುರ, ಜನವರಿ 10: ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಅಮಾನವೀಯ ಘಟನೆ ತಾಲೂಕಿನ ಕುಂಬ್ರಿಯಲ್ಲಿ ಬುಧವಾರ ನಡೆದಿದೆ.
ನಯನಾ ಪೂಜಾರಿ (11) ಕೊಲೆಯಾದ ದುರ್ದೈವಿ. ತಂದೆ ನಾಗರಾಜ್ ಪೂಜಾರಿ (44) ಕೊಲೆ ಮಾಡಿರುವವರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ನಯನಾಳ ಚಿಕಿತ್ಸೆಗಾಗಿ ನಾಗರಾಜ್, ಸಾಕಷ್ಟು ವೆಚ್ಚ ಮಾಡಿದ್ದ. ದಾನಿಗಳು ನೀಡಿದ ಹಣದ ಜತೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದ.
ಮಗಳಿಗೆ ವೆಚ್ಚ ಮಾಡಿದ್ದ ಸಾಲದ ಹೊರೆಯನ್ನು ತಲೆಗೆ ಹಚ್ಚಿಕೊಂಡಿದ್ದ ಆತ, ಪತ್ನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಪತ್ನಿಯು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ನಾಲ್ಕು ತಿಂಗಳ ಹಿಂದೆ ಮನೆ ತೊರೆದಿದ್ದಳು. ಕೆಲವು ತಿಂಗಳ ಹಿಂದೆ ಕಾರವಾರದ ಮಹಿಳಾ ಸಂಘಟನೆ ಪತಿ, ಪತ್ನಿ ಹಾಗೂ ಮಕ್ಳೊಂದಿಗೆ ಕೌನ್ಸಿಲಿಂಗ್ ಮಾಡಿದ್ದರು. ಈ ವೇಳೆ ಮಕ್ಕಳು ತಾಯಿ ಬೇಕೆಂದು ತಿಳಿಸಿದ್ದರು.

ಮಕ್ಕಳ ಹೇಳಿಕೆಯಿಂದ ಸಿಟ್ಟಾಗಿದ್ದ ನಾಗರಾಜ ಜ.5ರಂದು ರಾತ್ರಿ ಇಬ್ಬರು ಮಕ್ಕಳಾದ ನಯನಾ ಹಾಗೂ ಸಹನಾಳಿಗೆ ಹೊಡೆದು ಗಾಯಗೊಳಿಸಿದ್ದ. ಪುನಃ ಬುಧವಾರ ಕೂಡ ನಯನಾಳಿಗೆ ಸಿಟ್ಟಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.












Click it and Unblock the Notifications