ದೇಶ ಸೇವೆಗೆ ಕೈತುಂಬ ಸಂಬಳ ನೀಡುವ ಉದ್ಯೋಗ ತೊರೆದು ಬಂದ ಕುವರಿ

ಅಂಕೋಲಾ, ಡಿಸೆಂಬರ್ 12: ಕಿರಿಯ ವಯಸ್ಸಿನಲ್ಲೇ ದೇಶದ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗುವುದು ಹೆಮ್ಮೆಯ ವಿಷಯ. ಅಂಥದ್ದೊಂದು ಅಪೂರ್ವ ಅವಕಾಶ ಉತ್ತರ ಕನ್ನಡ ಜಿಲ್ಲೆಯ ಯುವತಿ ಚೈತ್ರಾ ನಾಯ್ಕ ಅವರಿಗೆ ಲಭಿಸಿದೆ.

ಚೈತ್ರಾ ನಾಯ್ಕ ಭಾರತೀಯ ನೌಕಾಪಡೆಯ ಮಹಿಳಾ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿ, ತರಬೇತಿ ಪಡೆದಿದ್ದು ಅವರಿಗೆ ಪ್ರತಿಜ್ಞಾ ವಿಧಿ ಸಮಾರಂಭವು ಇತ್ತೀಚೆಗೆ ಕೇರಳದ ನೌಕಾದಳ ಕೇಂದ್ರ ಕಚೇರಿ ಎಜಿ ಮಾಲಾದಲ್ಲಿ ನೆರವೇರಿತು. ಚೈತ್ರಾ ನಾಯ್ಕ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಬ್ರುವಾಡದವರು. ತಂದೆ ನಾಗಪ್ಪ ನಾಯ್ಕ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಪುನೀತಿ ನಾಯ್ಕ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಚೈತ್ರಾ ಅಂಕೋಲಾ ಅವರು ಧಾರವಾಡ ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ (E&C) ಮುಗಿಸಿ ಇಂಟೆಲ್ ಟೆಕ್ನಾಲಜಿಕಲ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯಲ್ಲಿ ಫಿಜಿಕಲ್ ಡಿಜೈನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.

Chaitra Naik From Ankola Selected As Sub Lieutenant In Indian Navy

ದೇಶ ಸೇವೆಗಾಗಿ ಉದ್ಯೋಗ ತೊರೆದು ನೌಕಾಪಡೆ ಸೇರಿದ್ದಾರೆ. ಚೈತ್ರಾ ಅವರು ತಮ್ಮ ಶಾಲಾ ಕಾಲೇಜಿನ ಓದಿನ ದಿನಮಾನಗಳಲ್ಲೇ ದೇಶದ ನೌಕಾಪಡೆಗೆ ಸೇರುವ ಗುರಿಯನ್ನು ಹೊಂದಿದ್ದರು. ಈಗ ಪ್ರಸ್ತುತ ಭಾರತೀಯ ನೌಕಾಪಡೆ ಸೇರಿರುವುದು ಕುಟುಂಬಸ್ಥರು ಹಾಗೂ ಬಂಧುಗಳಿಗೆ ಸಂತಸ ಉಂಟುಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+