ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ

ಕಾರವಾರ, ಜೂನ್ 20; ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಘಾಡಸಾಯಿ ಮಜರೆಯ ವೃದ್ಧೆ ಗೋಪಿಕಾ ಗುನಗಿ ಸಂಕಷ್ಟಕ್ಕೆ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜೂನ್ 17ರಂದು ರಾತ್ರಿ ಬೀಸಿದ ಬಿರುಗಾಳಿ ಮಳೆಯಿಂದಾಗಿ ವೃದ್ಧೆಯ ಮನೆಯ ಮೇಲ್ಛಾವಣಿಗೆ ಪೂರ್ತಿ ಹಾನಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ವಿದ್ಯಾಶ್ರೀ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vidyashree Chandaragi

ಕಿನ್ನರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕರೆಯಿಸಿ, ಹಾನಿಯಾದ ಮನೆಯ ಮೇಲ್ಛಾವಣಿಯನ್ನು ತುರ್ತಾಗಿ ದುರಸ್ತಿ ಮಾಡಿಸಿದ್ದಾರೆ. ಈ ಮೂಲಕ ವೃದ್ಧೆಗೆ ನೆರವಾಗಿದ್ದಾರೆ.

ವೃದ್ಧೆಗೆ ಸಂಧ್ಯಾ ಸುರಕ್ಷಾ ಪಿಂಚಣಿ ಸರಿಯಾಗಿ ತಲುಪುತ್ತಿಲ್ಲ ಎಂಬುದನ್ನು ಖಚಿತಪಡಿಕೊಂಡ ವಿದ್ಯಾಶ್ರೀ, ವೃದ್ಧೆಯು ಒಬ್ಬಂಟಿಯಾಗಿರುವುದರಿಂದ ಹಾಗೂ ಅವರ ಯೋಗಕ್ಷೇಮ ನೋಡಿಕೊಳ್ಳಲು ಯಾರು ಕೂಡ ಇಲ್ಲದಿರುವುದನ್ನು ಗಮನಿಸಿ, ವೃದ್ಧೆಗೆ ಕೂಡಲೇ ಪಡಿತರ ಕಿಟ್ ವಿತರಿಸಲು ವ್ಯವಸ್ಥೆ ಮಾಡಿದರು.

ಅಲ್ಲದೆ ಹಾನಿ ಲೆಕ್ಕಾಚಾರದ ಬಗ್ಗೆ ಪರಿಶೀಲನೆಯಿಂದ ತುರ್ತಾಗಿ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ತಹಶೀಲ್ದಾರರಿಗೆ ಸೂಚಿಸಿದರು. ವೃದ್ಧೆಯ ಮನೆ ಹಿಂದೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಇರುವುದನ್ನು ಗಮನಿಸಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕೂಡಲೇ ದುರಸ್ತಿಪಡಿಸಲು ಸೂಚಿಸಿದರು.

karwar

ತಕ್ಷಣ ಕ್ರಮ ಕೈಗೊಂಡು ಕಂಬವನ್ನು ದುರಸ್ತಿ ಮಾಡಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇಂತಹ ತುರ್ತು ಪ್ರಕರಣಗಳನ್ನು ಗುರುತಿಸಿ ಹಾನಿ ಪಟ್ಟಿಯನ್ನು ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರಿಂದ ಪಡೆದು ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+