ಕಾರವಾರ: ಕಿರವತ್ತಿ ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಕಾರವಾರ, ಜುಲೈ.20: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಅರಣ್ಯಾಧಿಕಾರಿಯ ಮನೆ ಮತ್ತು ಕಚೇರಿ ಸೇರಿ ಒಟ್ಟು ನಾಲ್ಕು ಕಡೆ ಎಸಿಬಿ ದಾಳಿ ನಡೆದಿದೆ.
ಯಲ್ಲಾಪುರದ ಕಿರವತ್ತಿ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಅವರ ಅಂಕೋಲಾದ ಸಕಲಬೇಣದ ಮನೆ, ಕಾರವಾರ ಕಾಜುಬಾಗದ ಮಗಳ ಮನೆ, ಯಲ್ಲಾಪುರದ ಕಿರವತ್ತಿಯಲ್ಲಿನ ಕಚೇರಿ ಹಾಗೂ ಮಾಜಾಳಿಯಲ್ಲಿಯೂ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಎಸಿಬಿ ಮಂಗಳೂರು ಎಸ್ಪಿ ಸುಧೀರ ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮನೆಯಲ್ಲಿದ್ದ ಅಪಾರ ಕಾಗದಪತ್ರಗಳು, ದಾಖಲೆಗಳು, ಒಡವೆಗಳ ಪರಿಶೀಲನೆ ಕಾರ್ಯ ಬೆಳಗ್ಗಿನಿಂದ ಮುಂದುವರೆದಿದೆ.
ಮನೆಯಲ್ಲಿರುವ ಒಡವೆ, ಆಸ್ತಿ ವಿವರ, ಬ್ಯಾಂಕಿನಲ್ಲಿರುವ ಒಡವೆ, ಹಣ ಇನ್ನಿತರ ಎಲ್ಲಾ ದಾಖಲೆಗಳ ಆಮೂಲಾಗ್ರ ಪರಿಶೀಲನೆ ನಡೆಸಲಾಗುತ್ತಿದೆ.











Click it and Unblock the Notifications