ಪಾಕಿಸ್ತಾನಕ್ಕೆ ಪಾಠ ಕಲಿಸಲು ರಕ್ತ ನೀಡಲೂ ಸಿದ್ಧವೆಂದ ಸಿದ್ದಾಪುರದ ಮುಸ್ಲಿಂ ವಿದ್ಯಾರ್ಥಿ!
ಕಾರವಾರ, ಫೆಬ್ರವರಿ 17: 'ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ನಮ್ಮ ರಕ್ತದ ಅವಶ್ಯ ಬಿದ್ದರೂ ತ್ಯಾಗ ಮಾಡಲು ತಯಾರಿದ್ದೇವೆ' ಎಂದು ಸಿದ್ದಾಪುರ ತಾಲ್ಲೂಕಿನ ಮೊಹಮ್ಮದ್ ಸಾಕೀಬ್ ಎನ್ನುವವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಯೋಧರ ಮೇಲೆ ನಡೆಸಿದ ದಾಳಿಯ ಕುರಿತಂತೆ ಅವರು ಈ ಪತ್ರ ವನ್ನು ಬರೆದಿದ್ದಾರೆ. ಇದರಲ್ಲಿ ಅವರು, 'ಪಾಕಿಸ್ತಾನಿ ಕುಕೃತ್ಯಕ್ಕೆ 40ಕ್ಕೂ ಹೆಚ್ಚು ಅಮೂಲ್ಯವಾದ ನಮ್ಮ ಯೋಧರು ಜೀವ ಕಳೆದುಕೊಂಡಿದ್ದಾರೆ. ಈ ಪಾಕಿಸ್ತಾನಿ ಭಯೋತ್ಪಾದಕರಿಗೆ ಪಾಠ ಕಲಿಸುವ ಅವಶ್ಯಕತೆ ಇದ್ದು, ನಮ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಇದಕ್ಕಾಗಿ ನಾವು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ' ಎಂದು ಉಲ್ಲೇಖಿಸಿದ್ದಾರೆ.

ಮೊಹಮ್ಮದ್, ಮೂಲತಃ ಸಿದ್ದಾಪುರದವನಾಗಿದ್ದರೂ, ಸಾಗರದಲ್ಲಿ ಬಿಕಾಂ ಓದುತ್ತಿದ್ದಾನೆ. ಇದೀಗ ಉಗ್ರರ ದಾಳಿಯಿಂದ ನೊಂದ ಈತ, ಇಮೈಲ್ ಹಾಗೂ ಅಂಚೆ ಮೂಲಕ ಪ್ರಧಾನಿಗೆ ಪತ್ರ ರವಾನಿಸಿದ್ದಾನೆ.













Click it and Unblock the Notifications