ಝೈಡಸ್ ಕೋವಿಡ್ ಲಸಿಕೆ ಪ್ರಯೋಗ; ಕರ್ನಾಟಕದ 20 ಮಕ್ಕಳು ಭಾಗಿ

ಬೆಂಗಳೂರು, ಮೇ 20; ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ. ಮಕ್ಕಳಿಗೆ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಯಾವ ಲಸಿಕೆ ಇದೆ ಎಂದು ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಸಿಕ್ಕಿದೆ. ಮತ್ತೊಂದು ಕಡೆ ಝೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆಯ 3ನೇ ಹಂತದ ಪ್ರಯೋಗ ಮಕ್ಕಳ ಮೇಲೆ ನಡೆಯುತ್ತಿದೆ.

ಗುಜರಾತ್ ಮೂಲದ ಝೈಡಸ್ ಕ್ಯಾಡಿಯಾ ಕಂಪನಿಯ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ 3ನೇ ಹಂತದ ಪ್ರಯೋಗ ಕರ್ನಾಟಕದಲ್ಲಿ 1,700 ಸ್ವಯಂ ಸೇವಕರ ಮೇಲೆ ನಡೆದಿದೆ. ಇದರಲ್ಲಿ 20 ಮಕ್ಕಳು 12 ರಿಂದ 18ರ ವಯೋಮಿತಿಯವರು.

 Zydus Cadilas Covid Vaccine Trial 20 Children Took Part In Karnataka

ಬೆಳಗಾವಿಯ ಜೀವನ್ ರಕ್ಷಾ ಆಸ್ಪತ್ರೆ ನಿರ್ದೇಶ ಡಾ. ಅಮಿತ್ ಭಾಟೆ ಈ ಕುರಿತು ಮಾಹಿತಿ ನೀಡಿದ್ದಾರೆ. "ಎಲ್ಲಾ ಮಕ್ಕಳಿಗೂ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಬೀರಿಲ್ಲ" ಎಂದು ಹೇಳಿದ್ದಾರೆ.

ಭಾರತದಲ್ಲಿ 43 ಕಡೆಗಳಲ್ಲಿ 20 ರಿಂದ 30 ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗಿದೆ. ಒಟ್ಟು ಮೂರು ಹಂತದಲ್ಲಿ 0, 28, 56 ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ. ಎರಡನೇ ಡೋಸ್ ಲಸಿಕೆ ಪಡೆದ ಬಳಿಕ ಎಲ್ಲಾ ಮಕ್ಕಳ ರಕ್ತ ಪರೀಕ್ಷೆ ನಡೆಯಲಿದೆ.

ಲಸಿಕೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಇದ್ದ 8 ತಿಂಗಳ ಅವಧಿಯನ್ನು 12 ತಿಂಗಳಿಗೆ ಏರಿಕೆ ಮಾಡಲಾಗಿದೆ. ಆದ್ದರಿಂದ ಲಸಿಕೆ ಪಡೆದ ಮಕ್ಕಳು ಒಂದು ವರ್ಷಗಳ ಕಾಲ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ.

ಮೊದಲ ಹಂತದಲ್ಲಿ ಸುರಕ್ಷತೆ, 2ನೇ ಹಂತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಯ ಪ್ರಯೋಗ ನಡೆಯುತ್ತಿದೆ. 3ನೇ ಹಂತದ ಲಸಿಕೆ ನೀಡಿದ ಬಳಿಕ ಅಧ್ಯಯನ ವರದಿ ತಜ್ಞರ ಕೈ ಸೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+