ಜೆಡಿಎಸ್ 123 ಮಿಷನ್; ಜೆಡಿಎಸ್ ನವರು ತಪ್ಪಾಗಿ ಒಂದು ಸೇರಿಸಿ ಬಿಟ್ಟಿದ್ದಾರೆ: ಜಮೀರ್ ವ್ಯಂಗ್ಯ
ಈ ಬಾರಿ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಎಷ್ಟೇ ಬಾರಿ ಬಂದರು ಗೆಲ್ಲುವುದಿಲ್ಲ ಎಂದು ಜಮೀರ್ ಹೇಳಿದರು.
ಬೆಂಗಳೂರು,ಫೆಬ್ರವರಿ27: ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿದ್ದು, ಮೂರುಗಳು ಭರ್ಜರಿ ಪ್ರಚಾರದ ವೇಳೆ ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿ ಚರ್ಚೆಯಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 123 ಮಿಷನ್ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಾಡುತ್ತಿದ್ರೆ, ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದು, ಇದೀಗ ಕಾಂಗ್ರೆಸ್ ಪಕ್ಷದಲ್ಲಿರುವ ಜಮೀರ್ ಅಹ್ಮದ್ ಜೆಡಿಎಸ್ ನವರು ತಪ್ಪಾಗಿ ಒಂದು ಸೇರಿಸಿ ಬಿಟ್ಟಿದ್ದಾರೆ. ಅವರು ಗೆಲ್ಲುವುದು 23 ಕ್ಷೇತ್ರ ಮಾತ್ರ, ಜೆಡಿಎಸ್ 123 ಸ್ಥಾನವನ್ನ ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಯಾರೆ ಆದ್ರೂ ನಮ್ಮ ಮನೆ ಬಾಗಿಲಿಗೆ ಬರಬೇಕು ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರೆ ಆದರು ದೇವೇಗೌಡರ ಮನೆಗೆ ಹೋಗುವುದಾದ್ರೆ ಅವರಿಗೆ ಬಹುಮತ ಬರಲ್ಲ ಅಂತ ಅಲ್ವಾ? ಮತ್ತೆ 123 ಮಿಷನ್ ಹೇಗೆ ಆಗುತ್ತೆ ಎಂದು ಜಮೀರ್ ತಿಳಿಸಿದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ರಾಜ್ಯದ ಜನರು ಬಹುಮತ ನೀಡಿಲ್ಲ. ಕಳೆದ ಬಾರಿ ಮೋದಿ, ಶಾ ರಾಜ್ಯಕ್ಕೆ ಬಂದರು 104 ಸ್ಥಾನ ಗೆದ್ದರು, ಈ ಬಾರಿ ಕೂಡ ಮೋದಿ, ಅಮಿತ್ ಶಾ ಬಂದ್ರು ಏನು ನಡೆಯಲ್ಲ. ಕಾಂಗ್ರೆಸ್ ಗೆ ಬಹುಮತ ಸಿಗಲಿದೆ. 150 ಕ್ಕೂ ಹೆಚ್ಚು ಸ್ಥಾನ ಗೆದ್ದರು ಅಚ್ಚರಿ ಪಡಬೇಕಿಲ್ಲ. ಕಾಂಗ್ರೆಸ್ ನ ಗೆಲ್ಲಿಸಬೇಕು ಎಂದುಜನ ತೀರ್ಮಾನ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜಪೇಟೆಯಲ್ಲಿ ವಿದೇಶಿ ಕರೆನ್ಸಿ ಹಂಚಿದ ವಿಚಾರವಾಗಿ ಮಾತನಾಡಿ, ಉಮ್ರಾಗೆ ಆಶಾ ಕಾರ್ಯಕರ್ತೆಯರು ಹೋಗ್ತಾ ಇದ್ರು. ಅವರಿಗೆ ತಲಾ 12 ಸಾವಿರ ಹಂಚಿದ್ದೇನೆ. ಸೌಧಿಯಲ್ಲಿ 500 ರಿಯಲ್ ಆಗುತ್ತೆ. ಅಲ್ಲಿ ಹೋಗಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ನೋಟು ಹಂಚಿದ್ದು ಕಾನೂನು ತೊಡಕು ಏನು ಆಗಲ್ಲ, ನಾನು ಅದರ ವಿವರಣೆ ಕೊಟ್ಟು ಕಳಿಸಿದ್ದೇನೆ ಎಂದು ಹೇಳಿದರು.
ಜನಾಭಿಪ್ರಾಯ ಈ ಬಾರಿ ನಮ್ಮ ಪರವಾಗಿ ಇದೆ. ಸಿದ್ದರಾಮಯ್ಯ ಕೊಟ್ಟ ಯೋಜನೆ ನೆನೆಯುತ್ತಿದ್ದಾರೆ, ಅಕ್ಕಿ ಕೊಟ್ಟಿದ್ದು ನೆನೆಯುತ್ತಿದ್ದಾರೆ. 2018 ರಲ್ಲಿ ಓಟ್ ಕೊಡದೆ ತಪ್ಪು ಮಾಡಿದ್ವಿ ಅಂತ ಜನರು ಬೇಸರದಲ್ಲಿದ್ದಾರೆ. ನಾವು 120 ಸೀಟ್ ಅಲ್ಲ, 150 ಸೀಟ್ ಈ ಬಾರಿ ಬರುವ ನಿರೀಕ್ಷೆ ಇದೆ. ಬಿಜೆಪಿಗೆ ದುಡ್ಡು ಮಾಡುವ ಅವಸರ ಇದೆ, ಬಿಜೆಪಿ ಅಧಿಕಾರಕ್ಕೆ ಯಾವುದೇ ಕಾರಣಕ್ಕೂ ಬರಲ್ಲ. ಒಂದು ಕ್ಷೇತ್ರದಲ್ಲಿ ಬಿಜೆಪಿ ನೂರು ಕೋಟಿ ಖರ್ಚು ಮಾಡಿದರು ಗೆಲ್ಲಲ್ಲ. ದುಡ್ಡಿನ ಮೇಲೆ ಚುನಾವಣೆ ನಡೆಯಲ್ಲ ಎಂದು ಹೇಳಿದರು.
ಮುಸ್ಲಿಂ ರಿಗೆ ಮತ ಹಾಕಬೇಡಿ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯತ್ನಾಳಗೆ ಯಾರು ಮುಸ್ಲಿಂ ಓಟ್ ಹಾಕಲ್ಲ, ಬಿಜೆಪಿಗೂ ಯಾವ ಮುಸ್ಲಿಮರು ಮತ ಹಾಕಲ್ಲ, ಹಾಗಾಗಿ ಆ ಮಾತು ಹೇಳುತ್ತಿದ್ದಾರೆ ಎಂದು ಹೇಳಿದರು.
ಹಾಸನ ಟಿಕೆಟ್ ಪೈಟ್ ವಿಚಾರವಾಗಿ ಮಾತನಾಡಿದ ಅವರು, ಅದು ಅವರ ಪಾರ್ಟಿ ವಿಚಾರ ನಾನು ಮಾತನಾಡಲ್ಲ ಎಂದು ಹೇಳಿದರು.












Click it and Unblock the Notifications