Good news for homeless: "ಮನೆ ಭಾಗ್ಯ" ಮನೆ ಇಲ್ಲದವರಿಗೆ ಗುಡ್‌ನ್ಯೂಸ್ ಕೊಟ್ಟ ಜಮೀರ್
ರಾಜ್ಯದಲ್ಲಿ "ವಸತಿ ಭಾಗ್ಯ" ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಈ ಮೂಲಕ ಮನೆ ಇಲ್ಲದ ಬಡವರಿಗೆ ಗುಡ್‌ನ್ಯೂಸ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದೀಗ ರಾಜ್ಯದ ಬಡ ಕುಟುಂಬದವರಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲಿ ಮನೆ ಇಲ್ಲದಿರುವ ಸಮುದಾದವರಿಗೆ ಮನೆ ನಿರ್ಮಾಣ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಬಡ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಮಂಡಳಿಯಿಂದಲೇ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಖ್ಫ್ ಅದಾಲತ್ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಜಮೀರ್ ಅವರು ಹೇಳಿದ್ದಾರೆ. ನಮ್ಮ ಸಮುದಾಯದಲ್ಲಿ ಅತ್ಯಂತ ಬಡವರಿದ್ದು, ಈ ರೀತಿ ಮನೆ ಇಲ್ಲದವರ ಸಮೀಕ್ಷೆ ನಡೆಸಿ ಅವರಿಗೆ ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗುವುದು. ಇದರಿಂದ ಮಂಡಳಿ ಗೂ ಆದಾಯ ಬರುವಂತಾಗುತ್ತದೆ, ಸಮುದಾಯಕ್ಕೂ ಒಳಿತಾಗುತ್ತದೆ ಎಂದಿದ್ದಾರೆ.

ಅಲ್ಲದೇ ಮೌಜನ್ ಹಾಗೂ ಇಮಾಮ್‌ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ರಾಜ್ಯ ವಕ್ಫ್ ಮಂಡಳಿ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಬುಲೆನ್ಸ್ ನೀಡಲಾಗುವುದು. ಪ್ರತಿ ತಾಲ್ಲೂಕಿಗೆ ಒಂದರಂತೆ ಫ್ರೀಜರ್ ಸಹ ನೀಡಲಾಗುವುದು ಎಂದರು.
ಅರ್ಜಿ ಸ್ವೀಕಾರ: ವಖ್ಫ್ ಅದಾಲತ್ ನಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 368 ಅರ್ಜಿ ಸ್ವೀಕರಿಸಲಾಗಿದ್ದು, ಈ ಪೈಕಿ ಒತ್ತುವರಿ ಸಂಬಂಧ 100, ಖಬರಸ್ಥಾನ ಕುರಿತ 55 ಹಾಗೂ ಇತರೆ 213 ಅರ್ಜಿಗಳು ಸಲ್ಲಿಕೆಯಾಗಿವೆ. ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 82 ಅರ್ಜಿ ಸ್ವೀಕೃತವಾಗಿದ್ದು ಆ ಪೈಕಿ ಒತ್ತುವರಿ ಸಂಬಂಧ 38, ಖಬರಾಸ್ಥಾನ ಕುರಿತ 33 ಹಾಗೂ ಇತರೆ 11 ಅರ್ಜಿ ಸ್ವೀಕಾರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐದು ಜಿಲ್ಲೆಗಳಲ್ಲಿ ವಖ್ಫ ಅದಾಲತ್
ಇಲ್ಲಿಯವರೆಗೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ವಖ್ಫ ಅದಾಲತ್ ನಡೆಸಲಾಗಿದೆ. ಐದು ಜಿಲ್ಲೆಗಳ ವಖ್ಫ್ ಅದಾಲತ್‌ನಿಂದಾಗಿ 507 ಖಾತೆ ಆಗಿದೆ. ಇನ್ನುಳಿದ 382 ಪ್ರಗತಿಯಲ್ಲಿದೆ. ಕಲಬುರಗಿಯಲ್ಲಿ ವಖ್ಫ್ ಆಸ್ತಿ 21440 ಎಕರೆ ಇದ್ದು, 3610 ಎಕರೆ ಒತ್ತುವರಿ ಆಗಿದೆ. ಯಾದಗಿರಿಯಲ್ಲಿ 6194 ಎಕರೆ ಪೈಕಿ 123 ಎಕರೆ ಒತ್ತುವರಿ ಆಗಿದೆ ಎಂದು ಜಮೀರ್ ತಿಳಿಸಿದ್ದಾರೆ. ಇನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಭಾಷಾ ಮಾತನಾಡಿ, ರಾಜ್ಯದಲ್ಲಿ ಆಸ್ತಿಗಳ ಸಂರಕ್ಷಣೆ ನಿಟ್ಟಿನಲ್ಲಿ ಅದರ ಖಾತಾ ಅಪಡೇಟ್, ಸರ್ವೇ, ಮುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications