Yuva Nidhi: ಯುವನಿಧಿ ಯೋಜನೆ ಬಗ್ಗೆ ಭರ್ಜರಿ ಅಪ್‌ಡೇಟ್, ಇಲ್ಲಿದೆ ಮಾಹಿತಿ...
ಕರ್ನಾಟಕದಲ್ಲಿ 2023 ವಿಧಾನಸಭೆ ಚುನಾವಣೆ ಗೆದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿದ್ದೇ ಗ್ಯಾರಂಟಿ ಯೋಜನೆಗಳು ಎನ್ನಬಹುದು. ಯಾಕಂದ್ರೆ ಗ್ಯಾರಂಟಿ ಯೋಜನೆಗಳು ಮತದಾರರ ಮನಸ್ಸು ಗೆದ್ದು, ಭರ್ಜರಿ ವೋಟ್ ಗಳಿಸುವಲ್ಲಿ ಸಹಾಯ ಮಾಡಿದ್ದವು. ಒಟ್ಟು 5 ಗ್ಯಾರಂಟಿ ಯೋಜನೆಗಳ ಪೈಕಿ 'ಯುವನಿಧಿ' ಕೂಡ ಸಾಕಷ್ಟು ಗಮನ ಸೆಳೆದಿತ್ತು. ಯುವಕರಿಗೆ ಈ ಯೋಜನೆ ಸಾಕಷ್ಟು ಬೆಂಬಲ ನೀಡುವ ನಿರೀಕ್ಷೆಯು ಕೂಡ ಇದ್ದು, ಇದೇ ಸಮಯದಲ್ಲಿ ಯುವನಿಧಿ ಯೋಜನೆ ಬಗ್ಗೆ ಭರ್ಜರಿ ಅಪ್‌ಡೇಟ್ ಇಲ್ಲಿದೆ!
ಹೌದು, ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿದ್ದ ಬಿಜೆಪಿ & ಕಾಂಗ್ರೆಸ್ ಗ್ಯಾರಂಟಿ ವಾರ್ ದೇಶದ ಮಟ್ಟದಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೆ, ಅನ್ನೋ ಆರೋಪ ಕೂಡ ಮಾಡುತ್ತಿದ್ದವು ವಿರೋಧ ಪಕ್ಷಗಳು. ಆದರೆ ಅದನ್ನೆಲ್ಲಾ ಮೀರಿ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ಈಗಲೂ ಮುಂದುವರಿಸಿಕೊಂಡು ಬರುತ್ತಿದೆ. ಈ ಪೈಕಿ 'ಯುವನಿಧಿ' ಯೋಜನೆ ಭರ್ಜರಿ ಗಮನ ಸೆಳೆಯುತ್ತಿದ್ದು, ರಾಜ್ಯದಲ್ಲಿ ಈ ಬಗ್ಗೆ ಈಗ ವಿಶೇಷ ನೋಂದಣಿ ಅಭಿಯಾನ ಶುರು ಮಾಡಲಾಗಿದೆ.

'ಯುವನಿಧಿ' ಯೋಜನೆ ವಿಶೇಷ ನೋಂದಣಿ
ಹೌದು, ಕರ್ನಾಟಕದ ಮಹಾತ್ವಾಕಾಂಕ್ಷಿ ಯೋಜನೆ 'ಯುವನಿಧಿ' ಅಡಿ ಫಲಾನುಭವಿಗಳ ನೋಂದಣಿಯು ನಡೆಯುತ್ತಿದೆ. 2025ನೇ ಸಾಲಿನಲ್ಲಿ ಪದವಿ / ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ತೇರ್ಗಡೆ ಆಗಿರುವ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನ ಪಡೆಯಲು ಅವಕಾಶವಿದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ 'ಯುವನಿಧಿ' ಯೋಜನೆ ವಿಶೇಷ ನೋಂದಣಿ ಅಭಿಯಾನ 2025 ಜುಲೈ 7 ರಿಂದ ಆಗಸ್ಟ್ 7ರ ತನಕ ಹಮ್ಮಿಕೊಂಡಿದೆ.
2023 & 2024 ಸಾಲಿನಲ್ಲಿ ತೇರ್ಗಡೆ ಆಗಿದ್ದು, ಅರ್ಜಿ ಸಲ್ಲಿಸದೇ ಇರುವವರು ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅಭ್ಯರ್ಥಿಗಳು ಸೂಚಿತ ವಿದ್ಯಾರ್ಹತೆಗಳಲ್ಲಿ ಪಾಸ್ ಆಗಿ 180 ದಿನ ಕಳೆದರೂ ಉದ್ಯೋಗ ಸಿಗದ ಪದವೀಧರ ನಿರುದ್ಯೋಗಿಗಳಿಗೆ ಈ ಯೋಜನೆ ಅಡಿಯಲ್ಲಿ ಭತ್ಯೆ ಸಿಗಲಿದೆ. ಹಾಗಾದ್ರೆ ಅರ್ಜಿಯನ್ನು ಸಲ್ಲಿಸಲು ಯಾವ ವೆಬ್‌ಸೈಟ್ ಸಂಪರ್ಕಿಸಬೇಕು? ಮುಂದೆ ಓದಿ.
ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ
ಅಂದಹಾಗೆ, ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆಯನ್ನು & ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1,500 ರೂಪಾಯಿ ನಿರುದ್ಯೋಗ ಭತ್ಯೆ ಉದ್ಯೋಗ ಸಿಗುವವರೆಗೂ ಅಥವ ಗರಿಷ್ಠ 2 ವರ್ಷ ಅವಧಿಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲು ಅವಕಾಶವನ್ನ ಕಲ್ಪಿಸಲಾಗಿದೆ. ಯುವನಿಧಿ ಯೋಜನೆ ಬಗ್ಗೆ ಮಾಹಿತಿಗೆ www.sevasindhugs.karnataka.gov.in ವೆಬ್ ಸೈಟ್ ಅಥವಾ ಸಹಾಯವಾಣಿ 1800-599-7154 ಸಂಪರ್ಕವನ್ನು ಮಾಡಬಹುದು ಎಂದು ಮಾಹಿತಿಯನ್ನ ನೀಡಲಾಗಿದ್ದು, ಈ ಯೋಜನೆಯ ಲಾಭ ಪಡೆಯಲು ತಿಳಿಸಲಾಗಿದೆ.












Click it and Unblock the Notifications