ಯೋಗಿ ಆದಿತ್ಯನಾಥ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರಾ?
ಬಿಜೆಪಿ 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡ ಹಿನ್ನೆಲೆ ಈಗ ಫುಲ್ ಟ್ರೋಲ್ ಮಾಡಲಾಗುತ್ತಿದೆ. ಅದ್ರಲ್ಲೂ BJP 400 ಸ್ಥಾನಗಳಲ್ಲಿ ಗೆದ್ದು ಭರ್ಜರಿ ಅಬ್ಬರದೊಂದಿಗೆ ಸರ್ಕಾರ ರಚಿಸಲಿದೆ ಅಂತಾ ಊರೆಲ್ಲಾ ಹೇಳಿಕೊಂಡು ಬಂದಿದ್ದ ಬಿಜೆಪಿ ಕಾರ್ಯರ್ತರು ಈಗ ಮನೆಯಲ್ಲಿ ಕೂತಿದ್ದಾರೆ. ಹೊರಗೆ ಬಂದು ಅವರು ಮಾತನಾಡಲಿ ಅಂತಿದ್ದಾರೆ ಕಾಂಗ್ರೆಸ್ ನಾಯಕರು. ಈ ಮೂಲಕ ಹೊಸ ಕಿಚ್ಚು ಹೊತ್ತಿಕೊಂಡಿದೆ. ಇದೇ ಸಮಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡ್ತಾರಾ? ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಹೌದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯ ಪ್ರದರ್ಶನ ನೀಡಿದೆ. ಯಾಕೆ ಅಂದ್ರೆ ಅಲ್ಲಿ ಬಿಜೆಪಿ ಅರ್ಧಕ್ಕೆ ಅರ್ಧ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ. ಹೀಗಿದ್ದಾಗ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟಾಗಿ ಸೋಲಿನ ಸುಳಿಗೆ ಸಿಲುಕುವಂತೆ ಆಗಿತ್ತು. ಆದರೆ, ಕೊನೆಗೆ ಅಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಹಾಯ ಬಿಜೆಪಿ ಕೈಹಿಡಿದಿದೆ ಹೀಗಿದ್ದಾಗ ಉತ್ತರ ಪ್ರದೇಶದಲ್ಲಿ ದೊಡ್ಡ ಹಿನ್ನಡೆ ಕಂಡ ಬಿಜೆಪಿ ಸೋಲಿನ ಹೊಣೆ ಹೊತ್ತು ಇದೀಗ, ಉತ್ತರ ಪ್ರದೇಶದ ಸಿಎಂ ಹಾಗೂ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿದೆ.

ಯೋಗಿ ಆದಿತ್ಯನಾಥ್ ರಾಜೀನಾಮೆ ಗ್ಯಾರಂಟಿ?
ಬಿಜೆಪಿ ಹೈಕಮಾಂಡ್ ನಾಯಕರಿಗೆ ಈ ಬಾರಿ ಎಲ್ಲಾ ವಿಧದಲ್ಲೂ ದೊಡ್ಡ ಆಘಾತ ಸಿಕ್ಕಿದೆ. ಅಂದಹಾಗೆ ಬಿಜೆಪಿ 400 ಸ್ಥಾನಗಳಲ್ಲಿ ಗೆದ್ದು ಬೀಗುವ ವಿಶ್ವಾಸ ಹೊಂದಿತ್ತು. ಕೇವಲ 2 ತಿಂಗಳ ಹಿಂದೆ ಚುನಾವಣೆ ಶುರುವಾದ ಸಮಯದಲ್ಲಿ ಬಿಜೆಪಿಗೆ ಧೈರ್ಯ ಇತ್ತು ಈ ಬಾರಿ ಹೊಸ ದಾಖಲೆ ನಿರ್ಮಾಣ ಮಾಡಿ, 400 ಸ್ಥಾನ ಗೆದ್ದು ಸಾಧಿಸುವ ಗುರಿ ಇಟ್ಟುಕೊಂಡಿದ್ದರು ಬಿಜೆಪಿ ನಾಯಕರು.
ಬಿಜೆಪಿ ಕಾರ್ಯಕರ್ತರ ಆಕ್ರೋಶ
ಆದ್ರೆ ಈಗ ಆಗಿರುವುದೇ ಬೇರೆ ಬಿಜೆಪಿ 400 ಸ್ಥಾನಗಳನ್ನ ಗೆಲ್ಲುವುದು ಬಿಡಿ ಈಗಿನ ಸ್ಥಿತಿ ನೋಡಿದ್ರೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವುದು ಕೂಡ ಕಷ್ಟವಾಗಿದೆ. ಹೀಗೆಲ್ಲಾ ಬಿಜೆಪಿ ಕೇವಲ 240 ಸ್ಥಾನಕ್ಕೆ ಕುಸಿತ ಕಾಣಲು ಉತ್ತರ ಪ್ರದೇಶ ಕಾರಣ. ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ, ಬಿಜೆಪಿ ಅರ್ಧದಷ್ಟು ಸ್ಥಾನ ಗೆಲ್ಲಲು ಪರದಾಡಿತ್ತು. ಈ ಬಗ್ಗೆ ಸ್ವತಃ ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಕೇಂದ್ರದ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಚುನಾವಣೆಗೆ ಆರಂಭಕ್ಕೆ ಮೊದಲು ಇಲ್ಲಿನ ಎಲ್ಲಾ 80 ಸ್ಥಾನಗಳನ್ನೂ ಗೆದ್ದು ಬೀಗುವ ವಿಶ್ವಾಸ ಹೊಂದಿತ್ತು ಬಿಜೆಪಿ. ಆದ್ರೆ ಹೀಗೆ ಭಾರಿ ಹಿನ್ನಡೆ ಅನುಭವಿಸಿದ ಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರೇ ರಾಜೀನಾಮೆ ಕೊಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಿಜೆಪಿ ನಾಯಕರಿಂದ ಆಗಲಿ ಅಥವಾ ಇನ್ನಾವುದೇ ಮೂಲದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಹೀಗಾಗಿ ಸ್ಪಷ್ಟ ಮಾಹಿತಿಗಾಗಿ ಕಾದು ನೋಡಬೇಕಿದೆ.












Click it and Unblock the Notifications