ನರೇಂದ್ರ ಮೋದಿ ವಿರುದ್ಧ ಮತ್ತೆ ಒಡೆದ ಅಸಹನೆ ಕಟ್ಟೆ

ಕರಾವಳಿ ಭಾಗದಲ್ಲಿ ಕೆಲ ದುಷ್ಕರ್ಮಿಗಳು ಮೋದಿ ಬ್ಯಾನರಿಗೆ ಬೆಂಕಿ ಹಚ್ಚಿ ತಮ್ಮ ಅಸಹನೆ/ ಆಕ್ರೋಶವನ್ನು ವ್ಯಕ್ತಪಡಿಸಿದ್ದ ಘಟನೆ ಕಳೆದ ತಿಂಗಳು ನಡೆದಿತ್ತು. ಅಂತಹುದೇ ಘಟನೆ ಈಗ ಪುನರಾವರ್ತನೆಯಾಗಿದೆ. ಆದರೆ, ದುಷ್ಕರ್ಮಿಗಳು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ನಮೋ ಬ್ರಿಗೇಡ್ ಎಚ್ಚರಿಸಿದೆ.
ಮಣಿಪಾಲ ಸಮೀಪದಲ್ಲಿರುವ ಪರ್ಕಳದಲ್ಲಿ ವಿಜಯದಶಮಿಯ ರಾತ್ರಿ ಕಿಡಿಗೇಡಿಗಳು 'ನಮೋ ಬ್ರಿಗೇಡ್' ಹಾಕಿದ್ದ ಬೃಹತ್ ಬ್ಯಾನರ್ ಅನ್ನು ಸೀಳಿ, ಛಿದ್ರಗೊಳಿಸಿದ್ದಾರೆ. ಘಟನೆಯನ್ನು ಖಂಡಿಸಿ ನರೇಂದ್ರ ಮೋದಿ ಅಭಿಮಾಣಿಗಳು ಮತ್ತು 'ನಮೋ ಬ್ರಿಗೇಡ್' ಪಡೆಯವರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ಅನೇಕ ಕಾರ್ಯಕರ್ತರು ಬ್ಯಾನರ್ ಹಾಕಿದ್ದ ಜಾಗದಲ್ಲಿ ಸಭೆ ನಡೆಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಘಟನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಾಯಕರು ಎಚ್ಚರಿಸಿದ್ದಾರೆ.
ಮಣಿಪಾಲ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ತೊಡಗಿದವರನ್ನು ಸಮಾಧಾನಪಡಿಸಿದರು. ಹೆಚ್ಚಿನ ಅನಾಹುತ ತಡೆಗಟ್ಟಲು ಹರಿದಿದ್ದ ಬ್ಯಾನರನ್ನು ಅಲ್ಲಿಂದ ಪೂರ್ತಿ ತೆಗೆದುಹಾಕಿದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications