ಹೌದು ಲವ್ ಜಿಹಾದ್ ನಮ್ಮ ಅಜೆಂಡಾ,ಕಟೀಲ್ ಹೇಳಿಕೆ ಸಮರ್ಥಿಸಿಕೊಂಡ ರೇಣುಕಾಚಾರ್ಯ

ಬೆಂಗಳೂರು, ಜನವರಿ 4: ಹೌದು ಲವ್ ಜಿಹಾದ್ ನಮ್ಮ ಅಜೆಂಡಾ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಅಭಿವೃದ್ದಿ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರವಾಗಿ ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರದಲ್ಲಿ ತ್ರಿವಳಿ ತಲಾಕ್ ವಿಚಾರವಾಗಿ ಮುಸ್ಲಿಂ ಹೆಚ್ಚು ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡಿದೆ. ತ್ರಿವಳಿ ತಲಾಕ್ ನಿಂದ ಮುಸ್ಲಿಂ ಹಣ್ಣು ಮಕ್ಕಳಿಗೆ ಅವಮಾನ ಆಗುತ್ತಿತ್ತು. ಮೂರು ಬಾರಿ ತಲಾಕ್ ಹೇಳಿದ್ರೆ ಹೆಣ್ಣು ಮಗಳ ಭವಿಷ್ಯ ಮುಗಿದು ಹೋಗ್ತಿತ್ತು.ಬೇಕು ಬೇಕು ಎನಿಸಿದಾಗ ಯಾರನ್ನ ಬೇಕಾದ್ರೂ ಕರೆತರಬಹುದಾ.? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ರೆ ಯಾವ ತರ ಗೌರವಿಸುತ್ತಿದ್ರಿ, ಅದೇ ರೀತಿ ದೇಶದಲ್ಲಿ, ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನ ಗೌರವಿಸಿದ ಪಕ್ಷ ಬಿಜೆಪಿ. ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಪಕ್ಷದ ಅಜೆಂಡಾ ಬಗ್ಗೆ ರಾಜ್ಯಾಧ್ಯಕ್ಷರು ಸರಿಯಾಗಿ ಹೇಳಿದ್ದಾರೆ. ಲವ್ ಜಿಹಾದ್‌ನಿಂದ ನಮ್ಮ ಹೆಣ್ಣು ಮಕ್ಕಳು ಹೊರಗೆ ಬರಬೇಕು. ಸರ್ಕಾರ ಅಭಿವೃದ್ಧಿ ಮಾಡುತ್ತಿದೆ, ಅದಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡುತ್ತಿದೆ. ನೀರಾವರಿ, ಆರೋಗ್ಯ ಎಲ್ಲಾ ವಿಚಾರವಾಗಿ ಅಭಿವೃದ್ಧಿ ಆಗುತ್ತಿದೆ. ಲವ್ ಜಿಹಾದ್‌ನಿಂದ ನಮ್ಮ ಹಿಂದೂ ಹೆಣ್ಣು ಮಕ್ಕಳು ಹಾಳಾಗಬೇಕಾ.? ಎಂದು ಪ್ರಶ್ನಿಸಿದರು. ಇನ್ನೂ ಇದಕ್ಕೆ ಅವಕಾಶ ಕೊಡಲ್ಲ, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸ್ಪಷ್ಟವಾಗಿದೆ ಎಂದು ಹೇಳಿದರು.

Yes, Love Jihad Is Our Agenda M P Renukacharya Said

ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಒಂದು ಬಾರಿ ಸಿಎಂ ಆಗಿ ಹಿರಿಯ ರಾಜಕಾರಣಿ ಆಗಿದ್ದಾರೆ. ಒಬ್ಬ ಮುಖ್ಯಮಂತ್ರಿ ಆಗಿರೋ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಅನೇಕ ಬಾರಿ ಪ್ರಧಾನಿ ಮೋದಿಯವರಿಗೆ ವಿವಾದಾತ್ಮಕ ಹೇಳಿಕೆ ಕೊಡುತ್ತಾ ಬಂದಿದ್ದಾರೆ. ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿ ಆಗಿದ್ರು. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಕಂಡ್ರೆ ಹೆದರುತ್ತಿದ್ದರು. ಮನಮೋಹನ್ ಸಿಂಗ್ ಕಪಿ ಮುಷ್ಠಿಯಲ್ಲಿದರು
ಮನಮೋಹನ್ ಸಿಂಗ್ ಅವರಿಗೆ ಅವಮಾನ ಮಾಡಿದ್ದು ನಿಮ್ಮ ಪಕ್ಷ.ನಿಮ್ಮ ಹಾಗೆ ಹೆದರಿ ಕೂತಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುತ್ಸದ್ದಿ ರಾಜಕಾರಣಿ. ನರೇಂದ್ರ ಮೋದಿಗೆ ಗೌರವ ಕೊಡುತ್ತಾರೆ ಎಂದು ಹೇಳಿದರು.

ಇನ್ನೂ ನರೇಂದ್ರ ಮೋದಿ ಅವರು ಸ್ವಾಮೀಜಿ ಕಂಡ್ರೆ ಶಿರಬಾಗಿ ಗೌರವ ಕೊಡುತ್ತಾರೆ. ಕಾಂಗ್ರೆಸ್‌ನಲ್ಲಿ ಲೆಸ್ ಹೈಕಮಾಂಡ್ ಇದೆ. ನಿಮಗೆ ಹೈಕಮಾಂಡ್ ಇದೆಯಾ.? ನಿಮ್ಮ ಪಕ್ಷಕ್ಕೆ ನಾವಿಕನೇ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರೆ ನೀವು ಏನು ಬೇಕಾದ್ರೂ ಹೇಳಿಕೆ ಕೊಡಿ. ನಿಮ್ಮ ಸಂಸ್ಕೃತಿ ತೋರಿಸುತ್ತದೆ. ಸಿದ್ದರಾಮಯ್ಯ ಅವರೆ ನಿಮ್ಮ ಪಕ್ಷ ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರವೇ ಇಲ್ಲ. ಮತ್ತೊಮ್ಮೆ ಬರ್ತೀವಿ ಅಂತ ಕನಸು ಕಾಣ್ತಿದ್ದೀರಾ.? ಎಂದು ಪ್ರಶ್ನಸಿದರು.

ಕಾಂಗ್ರೆಸ್‌ಗೆ ಅಧಿಕಾರ ಕೊಟ್ರೆ ರಾಜ್ಯ ರೌಡಿಗಳ ರಾಜ್ಯ ಆಗಲಿದೆ. ಬಿಜೆಪಿ ಹಿಂದುತ್ವ, ಸನಾತನ ಹಿಂದುತ್ವ ಅಳವಡಿಸಿಕೊಂಡಿದೆ,ನೀವು ಒಂದು ಕಡೆ ರೌಡಿಗಳ ರೀತಿ ಆಡ್ತೀರಿ, ಭಯೋತ್ಪಾದನೆ ಬೆಂಬಲಿಸ್ತೀರಾ. ನಿಮಗೆ ಹೈಕಮಾಂಡ್ ಇದಿಯಾ, ಹೈಕಮಾಂಡ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+