ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈಗೆ ಕೊರೊನಾ ಸೋಂಕು; ವಿಧಾನಸೌಧ ಕಚೇರಿ ಸೀಲ್ ಡೌನ್ ಇಲ್ಲ

|
Google Oneindia Kannada News

ಬೆಂಗಳೂರು, ಆಗಸ್ಟ್ 03 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮಣಿಪಾಲ್‌ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಗೃಹ ಕಚೇರಿ ಕೃಷ್ಣಾಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Recommended Video

BS Yediyurappa ಆಸ್ಪತ್ರೆಯಿಂದ ವಿಡಿಯೋ ಸಂದೇಶ | Oneindia Kannada

ಭಾನುವಾರ ರಾತ್ರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದರು. ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗಳನ್ನು ಪರೀಕ್ಷೆ ಮಾಡಲಾಗುತ್ತಿದ್ದು, 6 ಜನರಿಗೆ ಸೋಂಕು ಖಚಿತವಾಗಿದೆ.

ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ: ಮಣಿಪಾಲ್‌ ಆಸ್ಪತ್ರೆಯಿಂದ ಮಾಹಿತಿ ಯಡಿಯೂರಪ್ಪ ಆರೋಗ್ಯ ಸ್ಥಿರವಾಗಿದೆ: ಮಣಿಪಾಲ್‌ ಆಸ್ಪತ್ರೆಯಿಂದ ಮಾಹಿತಿ

ವಿಧಾನಸೌಧದ 3ನೇ ಮಹಡಿಯಲ್ಲಿರುವ ಯಡಿಯೂರಪ್ಪ ಕಚೇರಿ, ಕ್ಯಾಬಿನೆಟ್ ಹಾಲ್, ಅಕ್ಕಪಕ್ಕದ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಸಿಎಂಗೆ ಸೋಂಕು ತಗುಲಿದರೂ ಕಚೇರಿಯನ್ನು ತೆರೆಯಲಾಗುತ್ತದೆ.

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರಿಗೂ ಕೊರೊನಾ ಸೋಂಕು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರಿಗೂ ಕೊರೊನಾ ಸೋಂಕು

ಕೊರೊನಾ ಪರಿಸ್ಥಿತಿಯ ಆರಂಭದಿಂದಲೂ ಯಡಿಯೂರಪ್ಪ ಗೃಹ ಕಚೇರಿಯಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಸಭೆ, ಪತ್ರಿಕಾಗೋಷ್ಠಿಗಳಿಗೆ ಮಾತ್ರ ವಿಧಾನಸೌಧಕ್ಕೆ ಹೋಗುತ್ತಿದ್ದರು. ಆದ್ದರಿಂದ, ವಿಧಾನಸೌಧದ ಕಚೇರಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ.

'ಯಡಿಯೂರಪ್ಪ ಬೇಗ ಗುಣಮುಖರಾಗಿ': ಎಚ್‌ಡಿಕೆ, ಸಿದ್ದರಾಮಯ್ಯ ಟ್ವೀಟ್'ಯಡಿಯೂರಪ್ಪ ಬೇಗ ಗುಣಮುಖರಾಗಿ': ಎಚ್‌ಡಿಕೆ, ಸಿದ್ದರಾಮಯ್ಯ ಟ್ವೀಟ್

ಯಡಿಯೂರಪ್ಪ ಟ್ವೀಟ್

ಯಡಿಯೂರಪ್ಪ ಅವರು, "ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಕೃಷ್ಣಾದಲ್ಲಿ ಸ್ಯಾನಿಟೈಸ್‌

ಕೃಷ್ಣಾದಲ್ಲಿ ಸ್ಯಾನಿಟೈಸ್‌

ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಗಳು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ. ಮನೆಯ ಅಡುಗೆಯವರು, ಕೆಲಸದವರು ಸೇರಿ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿದ್ದು 6 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅವರನ್ನು ಮಾದಾವರ ಬಳಿ ಇರುವ ಕೋವಿಡ್‌ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.

ಸಚಿವರು, ಅಧಿಕಾರಿಗಳು ಕ್ವಾರಂಟೈನ್

ಸಚಿವರು, ಅಧಿಕಾರಿಗಳು ಕ್ವಾರಂಟೈನ್

ಕಳೆದ ಮೂರು ದಿನಗಳಿಂದ ಯಡಿಯೂರಪ್ಪ ಭೇಟಿ ಮಾಡಿದ್ದ ಅಧಿಕಾರಿಗಳು, ಸಚಿವರು ಹೋಂ ಕ್ವಾರಂಟೈನ್‌ಲ್ಲಿದ್ದಾರೆ. ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಯಲ್ಲಿದ್ದಾರೆ.

ಸಿಎಂ ಕಚೇರಿ ಓಪನ್

ಸಿಎಂ ಕಚೇರಿ ಓಪನ್

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾವನ್ನು ಸೀಲ್ ಡೌನ್ ಮಾಡಲಾಗಿದೆ. ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ. ಆದರೆ, ವಿಧಾನಸೌಧದ ಕಚೇರಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ.

English summary
Karnataka chief minister B. S. Yediyurappa tested positive for COVID 19. Yediyurappa chamber and cabinet hall on the 3rd floor in Vidhana Soudha are working normally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X