ಜನ ಚಪ್ಪಾಳೆ ತಟ್ಟಿದ್ದು ಏಕೆ? ಸಿದ್ದರಾಮಯ್ಯಗೆ ಬಿಎಸ್‌ವೈ ಟ್ವೀಟ್ ಬಾಣ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 11 : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ನಾಯಕರ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಬಹಿರಂಗ ಸಭೆಗಳು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿಯೂ ನಾಯಕರ ವಾಕ್ಸಮರ ನಡೆಯುತ್ತಿದೆ. ಟ್ವಿಟ್ಟರ್ ಇದಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನವರಿ 7ರಂದು ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಮಾತನಾಡಿದ್ದರು. ಅವರು ಮಾಡಿದ ಭಾಷಣದ ಬಗ್ಗೆ ಟ್ವಟ್ಟರ್‌ನಲ್ಲಿ ಭಾರೀ ಚರ್ಚೆ ನಡೆದಿತ್ತು.

ಯೋಗಿ ಎಂದಾದ್ರೂ ದನ ಸಾಕಿದ್ರಾ,ಸೆಗಣಿ ಬಾಚಿದ್ರಾ? ಸಿದ್ದು ಟ್ವೀಟಾಸ್ತ್ರ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕವೇ ಅವರಿಗೆ ತಿರುಗೇಟು ಕೊಟ್ಟಿದ್ದರು. ಈ ಬಗ್ಗೆ ಇನ್ನೂ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ. ಈಗ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್‌ನಲ್ಲಿ ಟೀಕಾಪ್ರಹಾರ ಮಾಡಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಬಿ.ಎಸ್.ಯಡಿಯೂರಪ್ಪ ತಮ್ಮ @BSYBJP ಅಕೌಂಟ್‌ನಿಂದ ಮಾಡಿರುವ ಟ್ವಿಟ್ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಕಾಳೆದಿರುವ ಯಡಿಯೂರಪ್ಪ ಅವರ ಟ್ವಿಟ್‌ಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿಕೊಡಲಾಗಿದೆ. ಯಡಿಯೂರಪ್ಪ ಕೇಳಿದ್ದೇನು?, ಬಂದ ಪ್ರತಿಕ್ರಿಯೆಗಳು ಏನು? ಎಂದು ಚಿತ್ರಗಳಲ್ಲಿ ನೋಡಿ...

ಯಡಿಯೂರಪ್ಪ ಕೇಳಿರುವುದೇನು?

ಯಡಿಯೂರಪ್ಪ ಟ್ವಿಟ್‌ನಲ್ಲೇನಿದೆ?

ಉಡುಪಿಯ ಕಾರ್ಯಕ್ರಮ

ಉಡುಪಿಯ ಕಾರ್ಯಕ್ರಮ

ಉಡುಪಿಯಲ್ಲಿ ನಡೆದ ಸಾಧನಾ ಸಮಾವೇಶ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ನಿದ್ದೆಗೆ ಜಾರಿದ್ದರು. ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಿದ್ದರಾಮಯ್ಯ ಅವರನ್ನು ಎಬ್ಬಿಸಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಮುಂದಿಟ್ಟುಕೊಂಡೇ ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.

ಉಭಯ ನಾಯಕರಿಗೂ ಸಲಹೆ

ಈ ಟ್ವಿಟ್‌ಗೆ ಸಾಕಷ್ಟು ಟೀಕೆಗಳು ಬಂದಿವೆ. ಇಂತಹ ವಿಚಾರ ಬಿಟ್ಟು ಪಕ್ಷದ ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡಿ ಎಂದು ಸಲಹೆಯನ್ನು ನೀಡಲಾಗಿದೆ.

ಬಿಜೆಪಿ ಸರ್ಕಾರದ ಸಾಧನೆ ಏನು?

ಸಿದ್ದರಾಮಯ್ಯ ಕಾಲೆಳೆದ ಯಡಿಯೂರಪ್ಪ ಅವರನ್ನು ಟೀಕಿಸಲಾಗಿದೆ. ಬಿಜೆಪಿ ಸಾಧನೆ ಏನು? ಎಂದು ಪ್ರಶ್ನಿಸಲಾಗಿದೆ.

ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ

ನೀವು ನಾಡಿನ ಸಮಸ್ಯೆಗಳ ಬಗ್ಗೆ ಏಕೆ ಚರ್ಚೆ ಮಾಡಬಾರದು.

ಸರ್ಕಾರದ ಸಾಧನೆಗಳು

ಸರ್ಕಾರದ ಸಾಧನೆಗಳ ಪಟ್ಟಿ ಯಡಿಯೂರಪ್ಪಗೆ

ಕರ್ನಾಟಕಕ್ಕೆ ಒಳ್ಳೆಯ ನಾಯಕರು ಸಿಕ್ಕಿಲ್ಲ

ನಿಮ್ಮ ಜಗಳ ಕುರ್ಚಿಗೋಸ್ಕರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa tweet against Chief Minister Siddaramaiah goes viral. Yeddyurappa tweeted about Siddaramaiah sleeping in the function in Udupi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ