ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವರಿಗಾಗಿ ಕಾದು ಕುಳಿತ ಬಿಜೆಪಿ!

|
Google Oneindia Kannada News

ಬೆಂಗಳೂರು, ಡಿ. 12 : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಕರ್ನಾಟಕ ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಅವರಿಂದ ಹಿನ್ನಡೆ ಉಂಟಾಗುತ್ತಿದೆ. ಯಡಿಯೂರಪ್ಪ ಪಕ್ಷಕ್ಕೆ ಮರಳುವ ಪ್ರಕ್ರಿಯೆ ವಿಳಂವಾಗುತ್ತಿರುವುದರಿಂದ ಅಭ್ಯರ್ಥಿಗಳ ಪಟ್ಟಿ ತಯಾರಿಕೆ ಸಹ ತಡವಾಗುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ.

ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ತಯಾರಿಸಿದೆ. ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಯೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ವರಿಷ್ಠರ ಒಪ್ಪಿಗೆ ಪಡೆಯಲು ಮುಂದಾಗಿದೆ. ಆದರೆ, ಯಡಿಯೂರಪ್ಪ ಮರಳುವ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ತಡವಾಗುತ್ತಿದೆ. (ಯಡಿಯೂರಪ್ಪ ದೂರವಾಗಲು 7 ಕಾರಣಗಳು)

BJP

ಕೆಜೆಪಿ ಬಿಜೆಪಿಯ ಜೊತೆ ವಿಲೀನಗೊಂಡರೆ ಕೆಲವು ಕ್ಷೇತ್ರಗಳಲ್ಲಿ ಕೆಜೆಪಿಯಿಂದ ಬಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ಹಾಗೆಯೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಕೊರತೆಯೂ ಎದುರಾಗಿದೆ. ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಬಂದರೆ ಅವರ ಸಲಹೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು. ಸದ್ಯ, ಬಿಎಸ್ವೈ ಮರು ಸೇರ್ಪಡೆ ಬಗ್ಗೆ ಗೊಂದಲವಿದೆ.( ಯಡಿಯೂರಪ್ಪ ಮತ್ತು ಬಿಜೆಪಿಗೆ ನಡುವೆ ಹಗ್ಗ ಜಗ್ಗಾಟ)

ಅಭ್ಯರ್ಥಿಗಳ ಕೊರತೆ ಎಲ್ಲಿ : ಸದ್ಯ ಬಿಜೆಪಿಗೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಬಳ್ಳಾರಿ, ಕೊಪ್ಪಳ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಈ ಕ್ಷೇತ್ರಗಳಲ್ಲಿ ಮತಗಳನ್ನು ಸೆಳೆಯಬಲ್ಲ ಕೆಲವು ನಾಯಕರಿದ್ದು, ಅವರು ಕೆಜೆಪಿಯಲ್ಲಿದ್ದಾರೆ. ಬಿಎಸ್ವೈ ಪಕ್ಷಕ್ಕೆ ಮರಳಿದರೆ ಅವರು, ಆಗಮಿಸುತ್ತಾರೆ. ಆಗ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. (ಯಡಿಯೂರಪ್ಪಗೆ ಮೊದಲ ಆಹ್ವಾನ)

ಡಿ.20ರ ತನಕ ಬಿಎಸ್ವೈ ಬರೋಲ್ಲ : ಬಿಜೆಪಿ ರಾಷ್ಟ್ರೀಯ ನಾಯಕರು ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ತಲ್ಲೀನರಾಗಿದ್ದಾರೆ. ಆದ್ದರಿಂದ ಡಿ.20ರವರೆಗೆ ಅವರು ಬಿಡುವಿಲ್ಲ. ನಂತರ ಯಡಿಯೂರಪ್ಪ ಕರೆತರುವ ಕುರಿತು ಅವರು ಚರ್ಚೆ ಆರಂಭಿಸಲಿದ್ದಾರೆ. ಹಾಗಾಗಿ ಯಡಿಯೂರಪ್ಪ ಮರಳಿ ಬರುವ ಪ್ರಕಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

English summary
BJP's Karnataka unit want B.S.Yeddyurappa to return party. Yeddyurappa return may impact on choice of candidates for lok sabha election 2014. In constituency BJP searching for candidates, But they are in KJP party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X