ಆಪರೇಷನ್ ಕಮಲ ಆರೋಪ: ಯಡಿಯೂರಪ್ಪ ಮತ್ತು ಇತರರಿಗೆ ಜಾಮೀನು

ನವದೆಹಲಿ, ಫೆಬ್ರವರಿ 16: ಭಾರೀ ಕೋಲಾಹಲ ಸೃಷ್ಟಿಸಿದ್ದ ಆಪರೇಷನ್ ಕಮಲ ಪ್ರಯತ್ನದ ಆಡಿಯೋ ಕ್ಲಿಪ್ ಪ್ರಕರಣದ ಆರೋಪದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಇತರರಿಗೆ ಜಾಮೀನು ಸಿಕ್ಕಿದೆ.

ಯಡಿಯೂರಪ್ಪ ಅವರೊಂದಿಗೆ ಶಾಸಕರಾದ ಶಿವನಗೌಡ ಪಾಟೀಲ, ಪ್ರೀತಂ ಗೌಡ ಮತ್ತು ಪತ್ರಕರ್ತ ಮರಂಕಲ್ ಅವರಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವೈಯಕ್ತಿಕ ಒಂದು ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ. ಪಾಟೀಲ್, ಸಾಕ್ಷ್ಯ ನಾಶ ಮಾಡದಂತೆ, ಪೊಲೀಸರಿಗೆ ತನಿಖೆಗೆ ಸಹಕರಿಸುವಂತೆ ಮತ್ತು ಅನುಮತಿ ಇಲ್ಲದೆ ಬೇರೆಡೆ ತೆರಳದಂತೆ ಷರತ್ತುಗಳನ್ನು ವಿಧಿಸಿದರು.

yeddyurappa preetham gowda shivana gowda gets bail in operationa lotus audio case

ಇದರಿಂದ ಆಡಿಯೋ ಟೇಪ್ ಪ್ರಕರಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಯಡಯೂರಪ್ಪ ಅವರಿಗೆ ಕೊಂಚ ನೆಮ್ಮದಿ ದೊರೆತಿದೆ.

ಗುರುಮಿಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರು ಕಾಂಗ್ರೆಸ್ ತೊರೆದು ಪಕ್ಷ ಸೇರ್ಪಡೆಯಾಗುವಂತೆ ಆಮಿಷವೊಡ್ಡಿದ್ದರು ಎಂದು ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 506ರ ಅನ್ವಯ ಶಿಕ್ಷಾರ್ಹ ಅಪರಾಧದ ಪ್ರಕರಣ ದಾಖಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+