ವಿಡಿಯೋ:ಕಾಂಗ್ರೆಸ್‌ಗೆ ಈ ಗತಿ ಬರುತ್ತೆಂದು ಯಡಿಯೂರಪ್ಪ ಅಂದೇ ಹೇಳಿದ್ರು

ಬೆಂಗಳೂರು, ಮೇ 23: ಸಾರ್ವತ್ರಿಕ ಚುನಾವಣೆ ಫಲಿತಾಂಶ ಅರ್ಧ ಹೊರಬಿದ್ದಾಗಿದೆ. ಬಹುತೇಕ ಕಡೆ ಅಭ್ಯರ್ಥಿ ಗೆಲುವು ಖಾಯಂ ಆಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ರಾಜ್ಯದಲ್ಲೂ ಸಹ ಬಿಜೆಪಿಯು 24 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ದಟ್ಟವಾಗಿದೆಯೆಂದು ಈ ವರೆಗೆ ಆಗಿರುವ ಮತ ಎಣಿಕೆಯಿಂದ ತಿಳಿದುಬರುತ್ತಿದೆ. ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಜೆಡಿಎಸ್‌ ಒಂದರಲ್ಲಿದ್ದರೆ, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಮೋದಿ ಅಲೆ ಇದ್ದಾಗಲೂ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ಆದರೆ ಈ ಬಾರಿ ಎರಡು ಕ್ಷೇತ್ರ ಗೆಲ್ಲಲು ತೊಳಲಾಡುತ್ತಿದೆ. ಇದು ಕಾಂಗ್ರೆಸ್‌ನ ಸ್ವಯಂಕೃತ ಅಪರಾಧ ಎಂದೇ ಹೇಳಲಾಗುತ್ತಿದೆ.

Yeddyurappa once told about Karnataka congress future

ಕಾಂಗ್ರೆಸ್‌ಗೆ ಇಂತಹಾ ಒಂದು ಗತಿ ಬರುತ್ತದೆ ಎಂದು ಯಡಿಯೂರಪ್ಪ ಅವರು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಯಡಿಯೂರಪ್ಪ ಅವರ ಮಾತಿನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕುಮಾರಸ್ವಾಮಿ ಅವರು ಈ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕರೆದಿದ್ದ ಮೊದಲ ಅಧಿವೇಶನದಲ್ಲಿ ಅಂದು ಮಾತನಾಡಿದ್ದ ಯಡಿಯೂರಪ್ಪ ಅವರು 'ಅಪ್ಪ-ಮಗ ಸೇರಿ ಕಾಂಗ್ರೆಸ್‌ ಅನ್ನು ಹೇಳ ಹೆಸರಿಲ್ಲದಂತೆ ಮಾಡದಿದ್ದರೆ, ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ' ಎಂದು ಅಂದೇ ಹೇಳಿದ್ದರು.

ಸದನದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದರು, ಅಂದು ಯಡಿಯೂರಪ್ಪ ಅವರ ಮಾತಿಗೆ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ ನವರು ನಕ್ಕಿದ್ದರು, ಆದರೆ ಇಂದು ಮರುಗುವಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+