ಯಡಿಯೂರಪ್ಪ ಬಿಜೆಪಿಯಲ್ಲಿ ಸಿಂಹವಿದ್ದಂತೆ: ಈಶ್ವರಪ್ಪ

 BS Yeddyurappa is like king of the forest in BJP- KS Eshwarappa
ಬೆಂಗಳೂರು, ಫೆ.3: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರ ಜತೆ ಮತ್ತೆ ಸಪ್ತಪದಿ ತುಳಿದು ಒಂದು ತಿಂಗಳ ಮೇಲಾಯ್ತು ಇನ್ನೂ ಯಡಿಯೂರಪ್ಪ ಅಂಡ್ ಟೀಂ ಏಕೀಕೃತ ಬಿಜೆಪಿಯಲ್ಲಿ ಅಧೀರರಾಗಿಯೇ ಇದ್ದಾರೆ.

ಈ ಮಧ್ಯೆ, ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ಇಂದು ಪೂರ್ವ ಸಭೆ ಸೇರುತ್ತಿದೆ. ಆದರೆ ಯಡಿಯೂರಪ್ಪ ಇದರಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಚಿಂತೆ ಎದುರಾಗಿದೆ.

ಮುಖ್ಯವಾಗಿ ತಮ್ಮ ಬೆಂಬಲಿಗರಿಗೆ ಬಿಜೆಪಿಯಲ್ಲಿ ಇನ್ನೂ ಸೂಕ್ತ ಸ್ಥಾನಮಾನ ಕಲ್ಪಿಸದಿರುವುದು ಯಡಿಯೂರಪ್ಪಗೆ ಅಸಮಾಧಾನವನ್ನುಂಟುಮಾಡಿದೆ ಎನ್ನಲಾಗಿದೆ. ಒಂದು ವೇಳೆ ಇಂದಿನ ಸಭೆಯಲ್ಲಿ ಪಾಲ್ಗೊಂಡರೂ ಬಿಎಸ್ವೈ ಅವರು ಇದನ್ನೇ ಮುಖ್ಯವಾಗಿ ಪ್ರಶ್ನಿಸುವ ಸಾಧ್ಯತೆಯಿದೆ.

ಗಮನಾರ್ಹ ಸಂಗತಿಯೆಂದರೆ ಇದು ಕೇವಲ ರಾಜ್ಯ ಬಿಜೆಪಿ ನಾಯಕರ ನಡುವಳಿಕೆಯಾಗಿಲ್ಲ. ಕೇಂದ್ರ ನಾಯಕರೂ ವಾಪಸಾದ ಮೇಲೆ ಯಡಿಯೂರಪ್ಪ ವಿಷಯದಲ್ಲಿ ಅಷ್ಟೊಂದು ಮುತುವರ್ಜಿ ವಹಿಸಿಲ್ಲ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಖುದ್ದು ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರತ್ತ ಗಮನ ಕೊಡುತ್ತಿಲ್ಲ. ಇದು ಯಡಿಯೂರಪ್ಪಗೆ ಮತ್ತಷ್ಟು ಅಸಮಾಧಾನ ತಂದಿದೆ.

ಇದೇ ವೇಳೆ, ಮಾಜಿ ಉಪಮುಖ್ಯಮಂತ್ರಿ ಶಿವಮೊಗ್ಗದ ನಾಯಕ ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ನಮ್ಮೆಲ್ಲರ ನಾಯಕ. ಅವರು ಸಿಂಹ ಇದ್ದಂತೆ. ಸಿಂಹಕ್ಕೆ ನೀನು ಕಾಡಿನ ರಾಜ ಇಂದು ಪ್ರತ್ಯೇಕವಾಗಿ ಹೆಳಬೇಕೇ? ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

'ಪಕ್ಷದಲ್ಲಿ ಅವರ ಹಿಂಬಾಲಕರು, ಇವರ ಹಿಂಬಾಲಕರು ಎಂಬುದಿಲ್ಲ. ನಾವೆಲ್ಲರೂ ಪಕ್ಷದ ಹಿಂಬಾಲಕರು' ಎಂದು ಈಶ್ವರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+