ಸದಾನಂದ ಗೌಡರಿಗೆ ಷರತ್ತು ವಿಧಿಸಿದ ಬಿ.ಎಸ್.ಯಡಿಯೂರಪ್ಪ!

ನವದೆಹಲಿ, ಮೇ 30 : ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಕೇಂದ್ರ ಸಚಿವರಾಗಲಿದ್ದಾರೆ. ನರೇಂದ್ರ ಮೋದಿ ಅವರೊಂದಿಗೆ ಗುರುವಾರ ಸಂಜೆ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈಗಾಗಲೇ ಸದಾನಂದ ಗೌಡರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಸೂಚನೆ ನೀಡಿದ್ದಾರೆ. ಡಿ.ವಿ.ಸದಾನಂದ ಗೌಡರು ದೆಹಲಿಯಲ್ಲಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು.

ಆಶೀರ್ವಾದ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸದಾನಂದ ಗೌಡರಿಗೆ ಷರತ್ತನ್ನು ಹಾಕಿದ್ದಾರೆ. ಯಡಿಯೂರಪ್ಪ ಷರತ್ತಿಗೆ ಒಪ್ಪಿಗೆ ನೀಡಿರುವ ಸದಾನಂದ ಗೌಡರು ನಿಮ್ಮ ಷರತ್ತಿನಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಒಕ್ಕಲಿಗ ಕೋಟಾದಡಿ ಡಿ.ವಿ.ಸದಾನಂದ ಗೌಡ ಅವರು ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ರಾಜ್ಯದ ನಾಲ್ವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುತ್ತಿದ್ದಾರೆ.......

ಯಡಿಯೂರಪ್ಪ ಹಾಕಿದ ಷರತ್ತು

ಯಡಿಯೂರಪ್ಪ ಹಾಕಿದ ಷರತ್ತು

ಸಚಿವರಾಗಿ ನಿಯೋಜಿತರಾಗಿರುವ ಡಿ.ವಿ.ಸದಾನಂದ ಗೌಡರು ದೆಹಲಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಆಪ್ತ ಮಿತ್ರನನ್ನು ನೆನಪಿಸಿಕೊಂಡ ಯಡಿಯೂರಪ್ಪ ಅವರು, 'ಅನಂತ್ ಕುಮಾರ್‌ರಂತೆ ನೀವು ಕೆಲಸ ಮಾಡಬೇಕು' ಎಂದು ಷರತ್ತು ಹಾಕಿದರು.

ಕರ್ನಾಟಕದ ಜನರ ಧ್ವನಿಯಾಗಬೇಕು

ಕರ್ನಾಟಕದ ಜನರ ಧ್ವನಿಯಾಗಬೇಕು

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ಅವರ ಸ್ಥಾನವನ್ನು ನೀವು ತುಂಬಬೇಕು. ರಾಜ್ಯದ ಜನರ ಕೆಲಸಗಳಿಗೆ ದೆಹಲಿಯಲ್ಲಿ ನೀವು ಸ್ಪಂದಿಸಬೇಕು ಎಂದು ಯಡಿಯೂರಪ್ಪ ಅವರು ಷರತ್ತು ಹಾಕಿದ್ದು, ಇದಕ್ಕೆ ಸದಾನಂದ ಗೌಡರು ಒಪ್ಪಿಗೆ ನೀಡಿದ್ದಾರೆ.

ರಾಜ್ಯದ ಪರ ಧ್ವನಿಯಾಗಿದ್ದ ಅನಂತ್

ರಾಜ್ಯದ ಪರ ಧ್ವನಿಯಾಗಿದ್ದ ಅನಂತ್

ಅನಂತ್ ಕುಮಾರ್ ಅವರು ರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ದೆಹಲಿಯಲ್ಲಿರುವ ಬಿಜೆಪಿ ನಾಯಕರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯಾಗಿ ಅವರು ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ಮರಣ ರಾಜ್ಯ ಬಿಜೆಪಿಗೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ.

ಗೆಳೆಯನ ನೆನಪು ಮಾಡಿಕೊಂಡ ಯಡಿಯೂರಪ್ಪ

ಗೆಳೆಯನ ನೆನಪು ಮಾಡಿಕೊಂಡ ಯಡಿಯೂರಪ್ಪ

ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಉತ್ತಮ ಗೆಳೆಯರು. ಇಬ್ಬರೂ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ಹಗಲಿರುಳು ಶ್ರಮಿಸಿದವರು. ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ, ಅನಂತ್ ಕುಮಾರ್ ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿದ್ದರು. ಯಡಿಯೂರಪ್ಪ ಅವರಿಗೆ ಮಿತ್ರನ ಅಗಲಿಕೆಯ ನೋವು ಸದಾ ಕಾಡುತ್ತಿದೆ.

ಕರ್ನಾಟಕದಿಂದ ನಾಲ್ವರು ಸಂಪುಟಕ್ಕೆ

ಕರ್ನಾಟಕದಿಂದ ನಾಲ್ವರು ಸಂಪುಟಕ್ಕೆ

ಕರ್ನಾಟಕದಿಂದ ನಾಲ್ವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

* ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ)

* ಪ್ರಹ್ಲಾದ್ ಜೋಶಿ (ಧಾರವಾಡ)

* ಸುರೇಶ್ ಅಂಗಡಿ (ಬೆಳಗಾವಿ)

* ನಿರ್ಮಲಾ ಸೀತಾರಾಮನ್ (ರಾಜ್ಯಸಭಾ ಸದಸ್ಯರು)

ಯಡಿಯೂರಪ್ಪ ಭೇಟಿ

ಡಿ.ವಿ.ಸದಾನಂದ ಗೌಡರು ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿದ ಬಗ್ಗೆ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+