'ಕರ್ನಾಟಕ ಸಿಎಂ ಅಭ್ಯರ್ಥಿ ಬಿಎಸ್ವೈ, ರಾಯಣ್ಣ ಬ್ರಿಗೇಡ್ ಗೆ ನಾನು ಮುಖ್ಯಸ್ಥ'

Posted By:
Subscribe to Oneindia Kannada

ಬೆಂಗಳೂರು, ಸೆ. 04: ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿರುವ ಕರ್ನಾಟಜ ಬಿಜೆಪಿ ತನ್ನ ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸುವಲ್ಲಿ ಸಮಯ ಕಳೆಯುತ್ತಿದೆ. ಕರ್ನಾಟಕದ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಮಾಜಿ ಉಪಮುಖ್ಯಮತ್ರಿ ಕೆಎಸ್ ಈಶ್ವರಪ್ಪ ಅವರು ಉತ್ತರಿಸಿದ್ದಾರೆ.[ಧೈರ್ಯವಿದ್ದರೆ ನಾನೇ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಲಿ']

ಪಕ್ಷದ ಹೈಕಮಾಂಡ್ ನಾಯಕರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ. ನಾನು ಪಕ್ಷ ಸಂಘಟನೆಗಾಗಿ ದುಿಯುತ್ತಿದ್ದೇನೆ. 'ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ಸ್ಥಾಪನೆಯ ಉದ್ದೇಶವೇ ಪಕ್ಷದ ಸಂಘಟನೆಯಾಗಿದೆ. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಮುಂದಾಳತ್ವ ವಹಿಸಿಕೊಂಡಿದ್ದೇನೆ ಅಷ್ಟೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.[ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶ]

BS Yeddyurappa is the CM Candidate and Eshwarappa in charge Sangolli Rayanna Brigade

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ನ ವಕೀಲರ ಘಟಕದ ಸಭೆಯಲ್ಲಿ ಶನಿವಾರ ಮಾತನಾಡಿದ ಈಶ್ವರಪ್ಪ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗದ ಕಾರಣ ನಾವು ಸಾಕಷ್ಟು ತಪ್ಪುಗಳನ್ನು ಎಸಗಿದ್ದು ನಿಜ. ಪಕ್ಷದ ಬಲವರ್ಧನೆ, ಸಂಘಟನೆ ಎಲ್ಲವೂ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಕಳೆದ 5ರ್ಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ತಪ್ಪು ಮಾಡಿದ್ದೇವೆ. ಪೂರ್ಣ ಬಹುಮತ ಪಡೆದ ನರೇಂದ್ರ ಮೋದಿಯವರ ಹಿಂದೆ ಇಂದು ಇಡೀ ವಿಶ್ವವೇ ನಿಂತಿದೆ. ಅದೇ ರೀತಿಯ ವಾತಾವರಣ ರಾಜ್ಯದಲ್ಲೂ ನಿರ್ಮಿಸುವುದು ರಾಯಣ್ಣ ಬ್ರಿಗೇಡ್‌ನ ಮೂಲ ಉದ್ದೇಶ ಎಂದರು.[ಕರ್ನಾಟಕ ಬಿಜೆಪಿ ಬಿಕ್ಕಟ್ಟಿಗೆ 'ರಾಮ'ಬಾಣ ಸಿದ್ಧ!]

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಕಾನೂನು ಸಲಹೆಗಾರ ಬಿ.ಎಸ್. ರಾಜಶೇಖರ್ ಮಾತನಾಡಿ, ವಕೀಲರ ಘಟಕದ ಮುಖ್ಯ ಉದ್ದೇಶ, ಕಾನೂನು ಸಲಹೆ ಹಾಗೂ ಪಕ್ಷದ ಸರಿಯಾದ ಹಾದಿಯಲ್ಲಿ ಸಾಗುವುದನ್ನು ಪರಿಶೀಲಿಸುವುದೇ ಆಗಿದೆ. ಸಮಾಜದ ವಿವಿಧ ಸ್ತರಗಳ ಸುಶಿಕ್ಷಿತರ ಸಲಹೆ, ಸೂಚನೆ ಮೇರೆಗೆ ಪಕ್ಷ ಬಲಗೊಳ್ಳಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Party High command leaders decided to project state president BS Yeddyurappa as the CM candidate so, further discussion on this. I m incharge of Sangolli Rayanna Brigade said former Deputy CM KS Eshwarappa
Please Wait while comments are loading...