ಪಂಚಮಸಾಲಿ ಮೀಸಲಾತಿ; ಬೊಮ್ಮಾಯಿ ತಮ್ಮ ತಾಯಿ ಮೇಲೆ ಆಣೆ ಮಾಡಿದ್ದಾರೆ ಡಿ 29 ಕ್ಕೆ ಘೋಷಣೆ ಮಾಡ್ತಾರೆ: ಯತ್ನಾಳ್
ಬೆಳಗಾವಿ,ಡಿಸೆಂಬರ್ 23: ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡವಾದ ಪಂಚಮಸಾಲಿ ಸಮುದಾಯವನ್ನು 2 ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವಾರ ಕಾಲಾವಕಾಶ ಪಡೆದಿದ್ದು, 29 ಕ್ಕೆ ಘೋಷಣೆ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಅವರು ತಮ್ಮ ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಗುರುವಾರ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಪಾದಯಾತ್ರೆಯ ನಡುವೆ ಆಯೋಜಿಸಿದ್ದ ಪಂಚ ಶಕ್ತಿ ವಿರಾಟ ಮಹಾಸಮಾವೇಶದಲ್ಲಿ ಮಾತನಾಡಿದ ಅವರು, ತಮಗೆ ಮೀಸಲಾತಿ ಸೀಗುವ ಭರವಸೆ ಇಟ್ಟಿದ್ದರು. ಆದರೆ ಏತನ್ಮಧ್ಯೆ ಸಿಎಂ ಸಮುದಾಯದ ಮುಖಂಡರ ಜೊತೆ ಸಭೆ ನಡಿಸಿ ಸಿಹಿ ನೀಡದೆ ಸಿಹಿಯ ವಾಸನೆಯನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ತಜ್ಞರ ಜೊತೆ ಚರ್ಚೆ ಮಾಡಿ ಬರುವ ಗುರುವಾರ (ಡಿಸೆಂಬರ್ 29) ರಂದು ಸಮುದಾಯಕ್ಕೆ ಸಿಹಿ ಸುದ್ದಿ ನೀಡುತ್ತೇನೆ ಎಂದಿದ್ದಾರೆ ಎಂದರು. ಬಸವರಾಜ್ ಬೊಮ್ಮಾಯಿಯವರ ತಾಯಿಯ ಮೇಲೆ ಅನೆ ಮಾಡಿದ್ದಾರೆ.ಈಗಾಗಲೇ ಆಯೋಗ ವರದಿಯನ್ನ ನಮ್ಮ ಸರ್ಕಾರ ಒಪ್ಪಿಕೊಂಡಿದೆ. ಬರುವ ಡಿಸೆಂಬರ್ 29 ರಂದು ಮೀಸಲಾತಿ ಘೋಷಣೆ ಮಾಡುತ್ತಾರೆಂದು ಬೊಮ್ಮಾಯಿ ಹೇಳದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪಂಚಮಸಾಲಿಗಳು ಹಿಂದುಳಿದವರು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಆಯೋಗದ ವರದಿ ಸರ್ಕಾರ ಒಪ್ಪಿಕೊಂಡಿದೆ. ಡಿಸೆಂಬರ್ 29ಕ್ಕೆ ಮೀಸಲಾತಿ ಘೋಷಣೆ ಮಾಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ತಿಳಿಸಿದರು.

ನೀವೇ ಕೊನೆಯ ಮುಖ್ಯಮಂತ್ರಿ ಆಗಬೇಕು ಎಂದು ನಿರ್ಧರಿಸಿದ್ದೀರಾ ಎಂದು ಸಿಎಂ ಗೆ ಯತ್ನಾಳ್ ಪ್ರಶಿಸಿದ್ದು, ಸೂರ್ಯ ಚದ್ರ ಇರೋವರೆಗೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ತೋರಿಸಿ, ನಾನು ಯಾವುದಕ್ಕೂ ಅಂಜೋದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಟಿಕೆಟ್ ಕೊಡುತ್ತಿರೋ ಇಲ್ಲವೋ, ಮಂತ್ರಿ ಮಾಡುತ್ತಿರೋ ಇಲ್ಲವೋ ಗೊತ್ತಿಲ್ಲ. ಮಾಡುತ್ತೇನೆ, ನೋಡತ್ತೇವೆ, ಪರಿಶೀಲಿಸುತ್ತೇವೆ ಎನ್ನುವ ಮಾತು ನಾವು ಕೇಳುವುದಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದರು.
ಇನ್ನು ಯಾರು ತಲೆ ಕೆಡಿಸಿಕೊಳ್ಳಬೇಡಿ, 29 ಕ್ಕೆ ಜಾತ್ರೆ ಮಾಡುತ್ತೇವೆ ಮೀಸಲಾತಿ ಕೊಡದಿದ್ದರೆ ಎಲ್ಲರನ್ನೂ ಮನೆಗೆ ಕಳಿಸುವ ಕೆಲಸ ಮಾಡುತ್ತೇವೆ. 29 ರಂದು ಮೀಸಲಾತಿ ಕೊಡದಿದ್ರೆ ನಾವು ವಿಧಾನಸೌಧದಲ್ಲಿ ನೋಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಯತ್ನಾಳ್ ಸವಾಲು ಹಾಕಿದ್ದಾರೆ.

ಇನ್ನೂ ಈ ವೇಳೆ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು. ಒಮ್ಮಮೆ ಒಬ್ಬಬ ಶಾಸಕರು ನನಗೆ ಮಧ್ಯರಾತ್ರಿ ಕರೆ ಮಾಡಿದರು. ನಾನು ಸಚಿವನಾಗಲು ನೀವು ಬೆಂಬಲ ನೀಡಬೇಕು. ಆಗ ನಾನು ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ, ಇಲ್ಲದಿದ್ದರೆ ಸಹಕಾರ ನೀಡುವುದಿಲ್ಲ ಎಂದರು, ಆಗ ನನಗೆ ತುಂಬಾಬೇಸರವಾಯಿತು. ನಾನು ಇಲ್ಲಿ ಸನ್ಯಾಸಿ ಆಗಿರುವುದು ಯಾರನೋ ಸಚಿವರನ್ನಾಗಿ ಮಾಡಲು ಅಲ್ಲ. ಪಂಚಮಸಾಲಿ ಸಮುದಾಯಕ್ಕೆ ಸೇವೆ ಸಲ್ಲಿಸಬೇಕು ಎಂಬ ಕಾರಣಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭಿಸಿದೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಂಚಮಸಾಲಿ ಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ ಮಾಡುತ್ತೇನೆ. ಮಡಿಯುವ ಮುನ್ನ ಮೀಸಲಾತಿ ಕೊಡಿ ಎಂದರು. ಇನ್ನೂ 28 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತೀದ್ದೇವೆ. ಮುಖ್ಯಮಂತ್ರಿಗಳು ಗಡುವು ಮೇಲೆ ಗಡುವು ಕೊಡುತ್ತಾರೆ. ನಾವು ಯಾರಿಗೂ ಅಂಜುವುದಿಲ್ಲ. ಮೀಸಲಾತಿ ಬಿಡುವುದಿಲ್ಲ. ಈಗಾಗಲೇ ಸರ್ಕಾರ ಡಿಸೆಂಬರ್ 19 ಕ್ಕೆ ಗಡುವು ಕೊಟ್ಟಿತ್ತು, ಸರ್ಕಾರ ಕೊಟ್ಟಂತಹ ಗಡುವು ಮುಗಿದಿದೆ. ಯಾರೂ ನಿರಾಶ್ರಿತರಾಗಿ ಇಲ್ಲಿಂದ ಹೋಗಬೇಡಿ. ನಿಮ್ಮ ಬೇಡಿಕೆಯನ್ನ ನಾವು ಈಡೇರಿಸುತ್ತೇವೆ ಎಂದು ಹೇಳಿದರು.

ಇನ್ನೂ ಮೀಸಲಾತಿ ವಿಚಾರವಾಗಿ ಗುರುವಾರ ನಡೆದ ಸಚಿವ ಸಂಪುಟ ಸಭಬೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಈಗಾಗಲೇ ಒಂದು ವಾರಗಳ ಕಾಲ ಕಾಲಾವಕಾಶ ತೆಗೆದುಕೊಂಡಿರುವ ಸಿಎಂ ಡಿಸೆಂಬರ್ 28 ಕ್ಕೆ ಸಚಿವ ಸಂಪುಟ ಸಭೆ ನಡೆಸಿ, 29 ಕ್ಕೆ ಮೀಸಲಾತಿ ಘೋಷಣೆ ಮಾಡುತ್ತೇವೆ ಎಂಬ ಮಂಆಹಿತಿ ದೊರಕಿದ್ದು, ಆದರೆ, ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಅಧಿಕೃತಿ ಮಾಹಿತಿ ಇಲ್ಲ .












Click it and Unblock the Notifications