ಮೋದಿ ಮತ್ತೆ ಪ್ರಧಾನಿಯಾಗಲ್ಲ; ಓರ್ವ ಸ್ತ್ರೀ ದೇಶ ಆಳುತ್ತಾಳೆ: ಯಶವಂತ ಗುರೂಜಿ ಅಚ್ಚರಿ ಭವಿಷ್ಯ

ತುಮಕೂರು, ಆಗಸ್ಟ್‌ 08: 2024 ರ ಲೋಕಸಭಾ ಚುನಾವಣೆ ಈಗಾಗಲೇ ರಾಜಕೀಯ ಪಕ್ಷಗಳು ಬರದ ಸಿದ್ದತೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ,ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ ಎಂದು ಯಶವಂತ ಗುರೂಜಿ ಭವಿಷ್ಯ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ ಗುರೂಜಿ ಮಾತನಾಡಿ, ಮುಂದಿನ ಬಾರಿ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆ ದೇಶವನ್ನು ಆಳ್ತಾಳೆ. ಮಾರ್ಚ್‌ ತಿಂಗಳ ಬಳಿಕ ಇದು ಶತಃಸಿದ್ಧ ಎಂದು ಕಾಲಜ್ಞಾನಿ ಡಾ ಯಶವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

yashwanth-guruji-predictions

ಎರಡು ಬಾರೀ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು, ಮತ್ತೊಮ್ಮೆ ಪ್ರಧಾನಿಯಾಗಲ್ಲ, ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 35 ವರ್ಷಗಳ ಹಿಂದೆ ದೇಶವನ್ನು ಮಹಿಳೆ ಆಳಿದ್ದಳು. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳ್ತಾಳೆ ಎಂದು ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನು ಹೇಳುತ್ತಿದೆ.

ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ. ಈಗಿನ ಸಂವಸ್ತರದ ಫಲಾಫಲಗಳನ್ನ ನೋಡಿದಾಗ ಓರ್ವ ಸ್ತ್ರೀ ದೇಶ ಆಳುತ್ತಾಳೆ ಎಂದು ಹೇಳಿದ ಅವರು, ಯಾರು ಮುಂದಿನ ಪ್ರಧಾನಿ ಆಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಂಕ್ರಾಂತಿಯ ಕಾಲಜ್ಞಾನದವರೆಗೂ ಕಾಯಲೇಬೇಕು ಎಂದು ತಿಳಿಸಿದ್ದಾರೆ.

ಶಿವರಾತ್ರಿ ಒಳಗಡೆ ಚುನಾವಣೆ ನಡೆದರೆ ಮೋದಿಗೆ ಪ್ರಧಾನಿ ಪಟ್ಟ!

ಇನ್ನೂ ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದರೆ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ ಅವರು, ಓರ್ವ ಮಹಿಳೆಗೆ ಪ್ರಧಾನಿ ಆಗುವ ಯೋಗವಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಇನ್ನೂ ಯಾವ ಪಕ್ಷದಿಂದ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದನ್ನ ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಆ ಮಹಿಳೆ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನು ಆ ಮಹಿಳೆ ಆಳುವುದು ಶತಃಸಿದ್ಧ ಎಂದು ಯಶವಂತ್‌ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದಿದ್ದ ಗುರೂಜಿ!

ಹೌದು, 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಇಲ್ಲದ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ. 135 ಸ್ಥಾನಗಳಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತ್‌ ಗುರೂಜಿ ಹೇಳಿದ್ದರು. ಆ ಭವಿಷ್ಯ ನಿಜವಾಗಿದೆ. ಅದರ ಜೊತೆ ಮುಖ್ಯಮಂತ್ರಿ ಆಯ್ಕೆ ಗೊಂದಲದ ವೇಳೆ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿ ಕೂಡ ನಿಜವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+