ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು? ಮಗನ ನಿರ್ಧಾರದ ವಿರುದ್ಧವೇ ರಾಜಮಾತೆ... Mysuru Kingdom
ಮೈಸೂರು ಸಂಸ್ಥಾನ ಕರ್ನಾಟಕ & ಕನ್ನಡಿಗರ ಪಾಲಿಗೆ ಹೆಮ್ಮೆ... ಮೈಸೂರು ಸಂಸ್ಥಾನ ಇಲ್ಲದೇ ಹೋಗಿದ್ದರೆ ಕರ್ನಾಟಕದಲ್ಲಿ ಕನ್ನಡವೇ ಇರುತ್ತಿರಲಿಲ್ಲ, ಯಾಕಂದ್ರೆ ಒಂದು ಕಡೆ ಮರಾಠರು ಮತ್ತು ಇನ್ನೊಂದು ಕಡೆ ಹೈದರಾಬಾದ್ ಸಂಸ್ಥಾನದ ಆಡಳಿತದಲ್ಲಿ ಕನ್ನಡ ಕಣ್ಮರೆ ಆಗಿರುತ್ತಿತ್ತು ಅಂತಾ ಕನ್ನಡಿಗರು ಹೆಮ್ಮೆಯಿಂದ ಮೈಸೂರು ಸಂಸ್ಥಾನದ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ ಇಂದಿಗೂ ಮೈಸೂರು ಸಂಸ್ಥಾನಕ್ಕೆ ಅಷ್ಟೇ ಗೌರವ ಕೊಟ್ಟು ಜನರು ತಲೆ ಬಾಗುತ್ತಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೂಡ ಜನರ ಈ ಪ್ರೀತಿಯಿಂದ ಮೈಸೂರು ಸಂಸದರಾಗಿ ಆಯ್ಕೆ ಆಗಿ ಪಾರ್ಲಿಮೆಂಟ್ ಮುಟ್ಟಿದ್ದರು. ಆದರೆ ಈಗ ದಿಢೀರ್ ಆಘಾತ ಎದುರಾಗಿದೆ...
ಹೌದು, ಮೈಸೂರು ಸಂಸ್ಥಾನ ಕರ್ನಾಟಕ & ಕನ್ನಡಿಗರ ಪಾಲಿಗೆ ಮಾತ್ರವಲ್ಲ ಇಡೀ ಭಾರತ ಹಾಗೂ ಶತಕೋಟಿ ಮೀರಿದ ಭಾರತೀಯರ ಪಾಲಿಗೆ ಒಂದು ಹೆಮ್ಮೆಯ ಸಂಸ್ಥಾನವಾಗಿದೆ. ಹೀಗೆ ಪ್ರಪಂಚದ ಮೂಲೆ ಮೂಲೆಗೂ ನಮ್ಮ ಮೈಸೂರು ಸಂಸ್ಥಾನ ಹಾಗೂ ಕನ್ನಡಿಗರ ನಾಡಿನ ರಾಜ ಮನೆತನದ ಗತ್ತು ಗೊತ್ತು. ಅದರಲ್ಲೂ ಕನ್ನಡ ನಾಡಲ್ಲಿ ಮೈಸೂರು ಸಂಸ್ಥಾನದ ರಾಜರನ್ನು ದೇವರಂತೆಯೇ ನೋಡುತ್ತಾರೆ ಜನ. ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಾ, ಹತ್ತಾರು ಡ್ಯಾಂ ಅಂದ್ರೆ ಜಲಾಶಯಗಳನ್ನು ನಿರ್ಮಾಣ ಮಾಡಿ ಕೋಟ್ಯಂತರ ರೈತರ ಕುಟುಂಬಗಳನ್ನ ಇಂದಿಗೂ ಕಾಪಾಡುವಂತೆ ಮಾಡಿದ್ದು ಇದೇ ಮೈಸೂರು ಸಂಸ್ಥಾನ. ಹೀಗಿದ್ದಾಗಲೇ, ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು? ಮಗನ ನಿರ್ಧಾರದ ವಿರುದ್ಧವೇ ರಾಜಮಾತೆ...

ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು?
ಅಂದಹಾಗೆ ಇದೀಗ ಸಂಚಲನ ಸೃಷ್ಟಿಯಾಗಿದೆ, ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು ಮೂಡಿದೆಯಾ? ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ರಾಜಮಾತೆ ಅವರ ಅದೊಂದು ನಿರ್ಧಾರ ಇದೀಗ ಭಾರಿ ದೊಡ್ಡ ಚರ್ಚೆ ಜೊತೆ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಕೂಡ ಸೃಷ್ಟಿ ಮಾಡುತ್ತಿದೆ. ಹಾಗಾದರೆ ಇದೀಗ ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು ಮೂಡಿದೆಯಾ?
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್...
ಅಂದಹಾಗೆ ಕೇಂದ್ರ ಸರ್ಕಾರದ ಜೊತೆಗೂಡಿ ಮೈಸೂರಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 'ಯುನಿಟಿ ಮಾಲ್' ಯೋಜನೆಗೆ ದಿಢೀರ್ ಅಡ್ಡಿಯಾಗಿದೆ. ಖದ್ದು ಸಂಸದ & ರಾಜಮಾತೆ ಪ್ರಮೋದಾದೇವಿ ಅವರ ಮಗ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ಯುನಿಟಿ ಮಾಲ್' ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ಮೂಲಕ ಯುನಿಟಿ ಮಾಲ್ ಸ್ಥಳೀಯವಾಗಿ ಉತ್ಪಾದನೆ ಆಗುವ ಕರಕುಶಲ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವ ಬಗ್ಗೆ ತಿಳಿಸಿದ್ದರು. ಆದರೆ, ಇದೀಗ ರಾಜಮಾತೆ ಪ್ರಮೋದಾದೇವಿ ಅವರು ನ್ಯಾಯಾಲಯದ ಮೊರೆ ಹೋಗಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆಯನ್ನು ತಂದಿದ್ದಾರೆ. ಈ ವಿಚಾರ ಈಗ ಸಂಚಲನ ಸೃಷ್ಟಿ ಮಾಡಿದ್ದು, ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು ಮೂಡಿದೆಯಾ? ಅಂತಾ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.
'ಯುನಿಟಿ ಮಾಲ್' ಯೋಜನೆಗೆ ಬ್ರೇಕ್
ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಸರ್ವೇ ನಂಬರ್ 1ರ ಒಟ್ಟು 6.5 ಎಕರೆ ಜಾಗದಲ್ಲಿ 'ಯುನಿಟಿ ಮಾಲ್' ಯೋಜನೆಗೆ ಪ್ಲಾನಿಂಗ್ ಮಾಡಲಾಗಿತ್ತು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೆಲವು ತಿಂಗಳ ಹಿಂದಷ್ಟೇ ಗುದ್ದಲಿ ಪೂಜೆ ಕೂಡ ನೆರವೇಸಿದ್ದರು. ಅಲ್ಲದೆ ಈ ಯೋಜನೆಯ ಬಗ್ಗೆ ಹೆಮ್ಮೆ ಕೂಡ ವ್ಯಕ್ತಪಡಿಸಿದ್ದರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು. ಹೀಗಿದ್ದಾಗ ದಿಢೀರ್, ಯುನಿಟಿ ಮಾಲ್ ನಿರ್ಮಿಸಲು ಮುಂದಾದ ಜಾಗ ಮೈಸೂರು ಅರಮನೆಗೆ ಸೇರಿದ್ದು ಎಂದು ಅರ್ಜಿ ಸಲ್ಲಿಸಿದ್ದರು ರಾಜಮಾತೆ ಪ್ರಮೋದಾದೇವಿ ಅವರು. ಈಗ ಮಾನ್ಯ ನ್ಯಾಯಾಲಯವು ಆ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಸದಂತೆ & ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದೆ. ಇದೇ ವಿಚಾರವಾಗಿ, ಮಗನ ನಿರ್ಧಾರಕ್ಕೆ ಅಮ್ಮ ಅಡ್ಡಿ ಆಗಿದ್ದಾರಾ? ಅಂತಾ ಬಹುದೊಡ್ಡ ಚರ್ಚೆಗೆ ಈ ಘಟನೆ ವೇದಿಕೆ ಒದಗಿಸಿದೆ.












Click it and Unblock the Notifications