ಬಿಜೆಪಿ ಟಿಕೆಟ್ ಪಡೆದ ಯದುವೀರ ಕೃಷ್ಣದತ್ತ ಒಡೆಯರ್‌ಗೆ ಮೊದಲನೇ ಶಾಕ್?

ಕರ್ನಾಟಕದಲ್ಲಿ ಇದೀಗ ಲೋಕಸಭೆ ಚುನಾವಣೆ ಅಬ್ಬರ ಜೋರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹಂತ ಹಂತವಾಗಿ ಟಿಕೆಟ್ ಘೋಷಣೆ ಮಾಡುತ್ತಿವೆ. ಹೀಗಿದ್ದಾಗ ಇದೀಗ ಮೈಸೂರು & ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದ್ದು ಮೈಸೂರಿನ ರಾಜವಂಶದ, ಯದುವೀರ ಕೃಷ್ಣದತ್ತ ಒಡೆಯರ್ ಅವರಿಗೆ. ಪ್ರತಾಪ್ ಸಿಂಹ ಅವರ ಕೈತಪ್ಪಿದ ಈ ಟಿಕೆಟ್ ಯದುವೀರ್‌ಗೆ ಸಿಕ್ಕಿದೆ. ಇದೇ ಖುಷಿ ಸಮಯದಲ್ಲೀಗ ಯದುವೀರ್ ಅವರಿಗೆ ದೊಡ್ಡ ಆಘಾತ ಕೂಡ ಎದುರಾಗಿದೆ!

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ. ಹೀಗಾಗಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಅನುಕೂಲ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಕಳೆದ ಕೆಲವು ತಿಂಗಳಿಂದ ಪರಿಸ್ಥಿತಿ ಬೇರೆಯೇ ಆಗುತ್ತಿದೆ.

Yaduveer Krishnadatta Chamaraja Wadiyar May Got First Shock After Getting BJP Ticket

ಕರ್ನಾಟಕದಲ್ಲಿ ಬಿಜೆಪಿಗೆ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನದಲ್ಲಿ ಗೆಲುವು ಸಿಗಲಿದೆ, ಎಂಬ ಮಾತು ಕೇಳಿಬರುತ್ತಿದೆ. ಹೀಗಿದ್ದಾಗಲೇ ಬಿಜೆಪಿ ನಾಯಕರು ಮತ್ತಷ್ಟು ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಮೈಸೂರು & ಕೊಡಗು ಕ್ಷೇತ್ರದಲ್ಲಿ ಯದುವೀರ ಕೃಷ್ಣದತ್ತ ಒಡೆಯರ್‌ಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ಮೈಸೂರು ಕ್ಷೇತ್ರದಲ್ಲಿ ಹೊಸ ಅಲೆ ಎದ್ದಿರುವಾಗಲೇ ಯದುವೀರ್ ಅವರಿಗೆ ದೊಡ್ಡ ಶಾಕ್ ಕೂಡ ಸಿಕ್ಕಿದೆ.

ಕಾಂಗ್ರೆಸ್ ಸರ್ಕಾರದಿಂದ ಯದುವೀರ್‌ಗೆ ಶಾಕ್?

ಅಷ್ಟಕ್ಕೂ ಮೈಸೂರು ರಾಜವಂಶಕ್ಕೆ ಭಾರಿ ಪ್ರಮಾಣದ ಆಸ್ತಿ ಇದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಮೈಸೂರು ರಾಜವಂಶಕ್ಕೆ ಸೇರಿದ ಹಲವು ಆಸ್ತಿಗಳು ಇವೆ. ಇದರಲ್ಲಿ ಬರುತ್ತಿರುವ ಆದಾಯ ಅಂದ್ರೆ ಹಣ ರಾಜವಂಶಕ್ಕೆ ಸೇರಿದ್ದು. ಹೀಗಿದ್ದಾಗಲೇ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ಬಗ್ಗೆ ಆಗಾಗ ಕಿರಿಕ್ ಆಗುತ್ತಲೇ ಇರುತ್ತದೆ.

ಮೈಸೂರು ರಾಜವಂಶದ ಆಸ್ತಿ ಎಂಬ ಮಾತಿನ ನಡುವೆಯು ಇಲ್ಲ ಎಂಬ ವಾದವೂ ಇದೆ. ಹೀಗಿದ್ದಾಗ ಇದೀಗ ಕರ್ನಾಟಕ ಸರ್ಕಾರ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದೆ. ಇದು ಮೈಸೂರು ರಾಜವಂಶದ ಯದುವೀರ್‌ಗೆ ದೊಡ್ಡ ಆಘಾತ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾದರೆ ಏನದು ನಿರ್ಧಾರ?

ಪ್ಯಾಲೆಸ್ ಗ್ರೌಂಡ್ ಬಳಿ ರಸ್ತೆ ಅಗಲೀಕರಣ?

ಅಂದಹಾಗೆ ಇಂದು ನಡೆದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆಯಲ್ಲಿ ಈಗ, ಮಹತ್ವದ ನಿರ್ಧಾರ ಕೈಗೊಳ್ಳಾಗಿದ್ದು. ಈ ಪೈಕಿ ಪ್ರಮುಖವಾಗಿ, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ಬಳಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿರುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದೇ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ಮೈಸೂರಿನ ರಾಜವಂಶದ ಆಸ್ತಿ ಎಂಬ ವಾದದ ನಡುವೆ ಸಿದ್ದರಾಮಯ್ಯ ಅವರ ಸರ್ಕಾರದ ಕ್ರಮ ಈಗ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ.

ಟಾರ್ಗೆಟ್ ಆಗಿದ್ದಾರಾ ಯದುವೀರ್?

ಮತ್ತೊಂದು ಕಡೆ ಹೀಗೆ ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ ಗ್ರೌಂಡ್ ಬಳಿ ರಸ್ತೆ ಅಗಲೀಕರಣವನ್ನ ಮಾಡಲು ಮುಂದಾದ ಸಮಯದಲ್ಲೇ, ಯದುವೀರ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರ? ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಬೆಂಗಳೂರು ಪ್ಯಾಲೆಸ್ ರಸ್ತೆಯಲ್ಲಿ ಟ್ರಾಫಿಕ್ ನರಕ ನೋಡುತ್ತಿರುವ ವಾಹನ ಸವಾರರಿಗೆ ಮಾತ್ರ ಈ ಸುದ್ದಿ ಕೇಳಿ ರಿಲೀಫ್ ಸಿಕ್ಕಿದೆ. ಯಾಕೆ ಅಂದ್ರೆ ಈ ರಸ್ತೆಯಲ್ಲಿ ಓಡಾಡಿದ ಸವಾರರಿಗೆ ಮಾತ್ರ ಗೊತ್ತು ಇಲ್ಲಿ ಹೇಗೆ ಟ್ರಾಫಿಕ್ ಇರುತ್ತೆ ಅನ್ನೋದು. ಹೀಗಾಗಿ ಇದೀಗ ದಿಢೀರ್ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಬಿಸಿಬಿಸಿ ಚರ್ಚೆ ಕೂಡ ಶುರುವಾಗಿದೆ.

ಬಿಜೆಪಿ ಹೈಕಮಾಂಡ್ ತಂತ್ರ ಏನಾಗಿತ್ತು?

ಲೋಕಸಭಾ ಚುನಾವಣೆ 2024ರ ಕರ್ನಾಟಕದ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದ್ದು, ಮೊದಲೇ ಅಂದುಕೊಂಡಂತೆ ಹಲವಾರು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಲ್ಲೂ ಈ ಪಟ್ಟಿಯಲ್ಲಿ ಮೈಸೂರು & ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹಗೂ ಆಘಾತವನ್ನು ಸಿಕ್ಕಿದೆ. ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೂ ಟಿಕೆಟ್ ಕೊಟ್ಟಿದೆ ಬಿಜೆಪಿ ಹೈಕಮಾಂಡ್. ಹೀಗೆ, ಸುಲಭವಾಗಿ ಮೈಸೂರು ಕ್ಷೇತ್ರವನ್ನು ಗೆಲ್ಲುವ ತಂತ್ರ ಕೂಡ ಇದೆ. ಇದರ ಜೊತೆ ಕಾಂಗ್ರೆಸ್‌ಗೆ ಶಾಕ್ ಕೊಡುವ ರಣತಂತ್ರ ಬಿಜೆಪಿ ವರಿಷ್ಠರದ್ದು. ಆದರೆ ಇದೇ ಸಮಯದಲ್ಲಿ ಬೇರೆಯದ್ದೆ ಅಸ್ತ್ರವನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ ಕಾಂಗ್ರೆಸ್ ನಾಯಕರು, ಇದೆಲ್ಲಾ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+