ಕರ್ನಾಟಕ ಚುನಾವಣೆಯಲ್ಲಿ ಇಂಥವರಿಗೆ ಅಧಿಕಾರ ಯೋಗ ಇಲ್ಲ: ಕೊಡೇಕಲ್ ಕಾಲಜ್ಞಾನಿಯ ಭವಿಷ್ಯವಾಣಿ ಇದು?
ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಇದೀಗ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರು ನುಡಿದ ಭವಿಷ್ಯವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇಂಥವರಿಗೆ ಈ ಚುನಾವಣೆಯಲ್ಲಿ ಅಧಿಕಾರ ಸಿಗುವುದಿಲ್ಲ ಎಂದ ಬಸವಣ್ಣ.
ಯಾದಗಿರಿ, ಫೆಬ್ರವರಿ 19: ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಇದೀಗ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರು ನುಡಿದ ಭವಿಷ್ಯವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಹೌದು, ಪ್ರತಿ ವರ್ಷ ಶಿವರಾತ್ರಿ ದಿನದಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣ ದೇವಸ್ಥಾನದಲ್ಲಿ ರಾಜಕೀಯ ಕುರಿತು ಮಹತ್ವ ಭವಿಷ್ಯವೊಂದು ಹೊರ ಬಿದಿದ್ದಿದೆ. ಈ ಭವಿಷ್ಯವು ಅಧಿಕಾರ ಹಿಡಿಯಲು ಬಯಸುವವರಿಗೆ ಅನ್ವಯಿಸಲಿದೆ.
ಮುಂಬರಲಿರುವ ಚುನಾವಣೆಯಲ್ಲಿ ಪಕ್ಷಾಂತರ ಮಾಡುವವರಿಗೆ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರ ಯೋಗವು ಇಲ್ಲ ಎಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯ ಕೊಡೇಕಲ್ ಗ್ರಾಮದ ಕಾಲಜ್ಞಾನಿ ಬಸವಣ್ಣನ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿಆಚರಣೆ ವೇಳೆ ಕಾಲಜ್ಞಾನಿ ಬಸವಣ್ಣನವರ ವಚನಗಳನ್ನು ನುಡಿಯುತ್ತಾರೆ. ಅದೆ ರೀತಿ ಶನಿವಾರ ಫೆಬ್ರವರಿ 18 ರಂದು ನಡೆದ ಶಿವರಾತ್ರಿ ಹಬ್ಬದಲ್ಲಿ ಭವಿಷ್ಯ ನುಡಿಯಲ್ಲಿ ಪಕ್ಷಾಂತರಿಗಳಿಗೆ ಬಸವಣ್ಣನವರು ಚಾಟಿ ಬೀಸಿದ್ದಾರೆ.
ಕೆಲವೇ ತಿಂಗಳು ಬಾಕಿ ಇರುವ ಈ 2023ರ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ. ನುಡಿದಂತೆ ನಡೆಯುವವರಿಗೆ ಮಾತ್ರ ಅಧಿಕಾರ ಧಕ್ಕಲಿದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ. 'ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೇ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ' ಎಂಬ ಶಿವರಾತ್ರಿ ನುಡಿ ಇದಾಗಿದೆ.
ಹೀಗೆ ಹಲವು ಅರ್ಥದಲ್ಲಿ ಈ ಭವಿಷ್ಯ ನುಡಿಯನ್ನು ವಿಶ್ಲೇಷಿಸಲಾಗುತ್ತಿದೆ. ಬಣ್ಣದ ಮಾತನಾಡುವವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ ನುಡಿದಂತೆ ನಡೆದುಕೊಳ್ಳುವವರಿಗೆ ಮಾತ್ರ ಅಧಿಕಾರ ಯೋಗ್ಯ. ಅಂಥವರ ಮೇಲೆ ಜನರು ನಂಬಿಕೆ ಇಟ್ಟು ಅಧಿಕಾರ ಗದ್ದುಗೆಗೆ ದಯಪಾಲಿಸುತ್ತಾರೆ.

ಆದರೆ ಚನಾವಣೆ ವೇಳೆ ಅಧಿಕಾರಕ್ಕೇರಲು ಪಕ್ಷಾಂತರ ಮಾಡುವುದು ಇಲ್ಲವೇ ಕುದುರೆ ವ್ಯಾಪಾರಕ್ಕೊಳಗಾಗುವವರಿಗೆ ಅಧಿಕಾರ ಯೋಗವಿಲ್ಲ. ಅಂಥವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಅರ್ಥೈಸಲಾಗಿದೆ.
ಈ ಕೊಡೇಕಲ್ ಬಸವಣ್ಣ ಭಾವೈಕ್ಯತೆಯ ಹರಿಕಾರ. ಅಪಾರ ಸಂಖ್ಯೆ ಭಕ್ತರು ಇಲ್ಲಿಗ ಶಿವರಾತ್ರಿ ವೇಳೆ ಆಗಮಿಸುತ್ತಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಕೊಡೇಕಲ್ ಕ್ಷೇತ್ರದಲ್ಲಿ ನೆಲೆಸಿರುವ ಬಸವಣ್ಣನವರು ಕಾಲಜ್ಞಾನದ ವಚನಗಳಡಿ ಮನುಷ್ಯ ಕುಲ ಉದ್ಧರಿಸಿದ್ದಾರೆ. ಇವರ ಸಾಹಿತ್ಯವೆಲ್ಲವು ಇಲ್ಲಿ ಅಮರಗನ್ನಡ ಎಂಬ ಸಾಂಕೇತಿಕ ಲಿಪಿಯಲ್ಲಿ ಇವೆ. ವಚನಕಾರರು ವಚನ ಬರೆದರೆ, ಕೊಡೇಕಲ್ ಬಸವಣ್ಣನವರು ವಚನಗಳ ಜತೆ ನಾಡಿನಲ್ಲಿ ಭವಿಷ್ಯದಲ್ಲಾಗುವುದನ್ನು ಕಾಲಜ್ಞಾನದ ಮೂಲಕ ನುಡಿಯುತ್ತಾರೆ.
ಕಾಲಜ್ಞಾನ ಸಾಹಿತ್ಯ ಎನ್ನುವುದೇ ಭವಿಷ್ಯದಲ್ಲಿ ಮುಂದೆನಾಗುತ್ತದೋ ಅದನ್ನು ತಿಳಿಸುವುದು ಆಗಿದೆ. ಕಲ್ಯಾಣ/ಉತ್ತರ ಕರ್ನಾಟಕ ಭಾಗದ ಕೊಡೇಕಲ್ನ ಕಾಲಜ್ಞಾನ ಪ್ರಸಕ್ತದಲ್ಲೂ ಹೆಸರುವಾಸಿ. ಸಂಭಾವ್ಯದ ದುರಂತಗಳ ಕುರಿತು ಮೊದಲೇ ಊಹಿಸಿ ಪರಿಹಾರ ನೀಡುವ ಪ್ರಯತ್ನವನ್ನು ಕೊಡೇಕಲ್ ಬಸವಣ್ಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications