ಸರಕು ವಾಹನ ಪಲ್ಟಿ: 22 ಮಂದಿ ಸಾವು

ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ 22 ಮಂದಿ ಅಸುನೀಗಿದ್ದಾರೆ. ಉಳಿದವರಿಗೆ ಕೈಕಾಲುಗಳು ಮುರಿದ್ದಿದ್ದು ತೀವ್ರವಾದ ಗಾಯಗಳಾಗಿವೆ. ವಾಹನದಲ್ಲಿ 30ಕ್ಕೂ ಹೆಚ್ಚು ಮಂದಿಯಿದ್ದರು.
ಯಾದಗಿರಿಯಿಂದ ಬೆಳಗಾವಿಗೆ ಹೊರಟಿದ್ದ ಕ್ಯಾಂಟರ್ ಗೂಡ್ಸ್ ಗಾಡಿ ಇದಾಗಿದೆ. ವಾಹನದಲ್ಲಿದ್ದವರೆಲ್ಲಾ ಕೂಲಿ ಕಾರ್ಮಿಕರು. ಮೃತರ ಪೈಕಿ 10 ಮಕ್ಕಳೂ ಸೇರಿದ್ದಾರೆ. ಸವದತ್ತಿ ತಾಲೂಕು ಮುರಗೋಡು ಠಾಣಾ ವ್ಯಾಪ್ತಿಯಲ್ಲಿ ಹಲಕಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಘಟಿಸಿದೆ.
ಯಾದಗಿರಿಯ ಸುರಪುರದಿಂದ ರಾತ್ರಿ 9 ಗಂಟೆಗೆ ಹೊರಟಿದ್ದ ವಾಹನ ಬೆಳಗಿನ ಜಾವ ಪಲ್ಟಿಯಾಗಿದೆ. ಅಪಘಾತವಾಗಿರುವುದು ತಡವಾಗಿ ಬೆಳಗ್ಗೆ 5 ಗಂಟೆಯಲ್ಲಿ ಬೆಳಕಿಗೆ ಬಂದಿದೆ. ಬಹುಶಃ ಬೆಳಗಿನ ಜಾವ 3 ಗಂಟೆಯಲ್ಲಿ ಅಪಘಾತ ಸಂಭವಿಸಿರಬಹುದು.
ವಾಹನದಲ್ಲಿ ಹೆಚ್ಚಾಗಿ ತಾಂಡಾ ವಾಸಿಗಳೇ ಇದ್ದರು. ಇವರೆಲ್ಲಾ ಹೊಟ್ಟೆಪಾಡಿಗೋಸ್ಕರ ತಂಡೋಪಾದಿಯಲ್ಲಿ ಮಹಾರಾಷ್ಟ್ರಕ್ಕೆ ಗುಳೆ ಹೊರಟಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.












Click it and Unblock the Notifications