ಯಾದಗಿರಿ: ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ
ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಅಲ್ಲಿಪುರ ದೊಡ್ಡತಾಂಡದಲ್ಲಿ ನಡೆದಿದೆ. ಪತಿ ವಿನಾಯಕ ರಾಠೋಡನನ್ನು ಬಂಧಿಸಲಾಗಿದೆ.
ಯಾದಗಿರಿ, ಜೂನ್ 2: ಕ್ಷುಲ್ಲಕ ಕಾರಣಕ್ಕಾಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಅಲ್ಲಿಪುರ ದೊಡ್ಡತಾಂಡದಲ್ಲಿ ನಡೆದಿದೆ.
ವಿನಾಯಕ ರಾಠೋಡ ಮತ್ತು ಅನಿತಾಬಾಯಿ ದಂಪತಿಗಳ ನಡುವಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊನೆಗೆ ಪತ್ನಿಯ ಸಾವಿನಲ್ಲಿ ದುರಂತ ಅಂತ್ಯ ಕಂಡಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.[ಹೆಂಡತಿಯ ಕತ್ತು ಕೊಯ್ದು ಕೊಂದ ಉಪನ್ಯಾಸಕ ಪಕ್ಕದಲ್ಲೇ ಕೂತಿದ್ದ]

ಪತಿ ವಿನಾಯಕ ರಾಠೋಡನನ್ನು ಬಂಧಿಸಲಾಗಿದ್ದು, ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications