ಮಂಗಳವಾರ ಮೇ 16 ರಾಷ್ಟ್ರೀಯ ಡೆಂಗೀ ದಿನ: ಆರೋಗ್ಯ ಇಲಾಖೆ ಕ್ರಮ, ಸಲಹೆಗಳೇನು?
ಬೆಂಗಳೂರು, ಮೇ 15: ಪ್ರಸ್ತಕ ವರ್ಷ 2023ರ ಇದುವರೆಗೆ 1716 ಡೆಂಗೀ ಕಾಯಿಲೆಯ ಪ್ರಕರಣಗಳು ವರದಿಯಾಗಿದೆ. ನಾಳೆ ಮಂಗಳವಾರ ಮೇ 16 ''ರಾಷ್ಟ್ರೀಯ ಡೆಂಗೀ ದಿನ''ವಾಗಿದ್ದು, ಸರ್ಕಾರ ಆಚರಣೆ ಮಾಡುತ್ತಿದೆ. ಈ ಕುರಿತಂತೆ ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಜನರಿಗೆ ಒಂದಷ್ಟು ಸಲಹೆಗಳನ್ನು ನೀಡಿದೆ.
ರಾಷ್ಟ್ರೀಯ ಡೆಂಗೀ ದಿನ ಅಂಗವಾಗಿ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕೈಗೊಂಡಿರುವ ಕಾರ್ಯಚಟುವಟಿಕೆ, ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು ಹಾಗೂ 2017ರಿಂದ ಇದುವರೆಗೆ ರಾಜ್ಯದಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ 2017ರಲ್ಲಿ 17884 ಪ್ರಕರಣಗಳು ಕಂಡಿದ್ದು, ಆಗ 10 ಮಂದಿ ಡೆಂಗೀಯಿಂದ ಮೃತಪಟ್ಟಿದ್ದರು. 2018ರಲ್ಲಿ 4848 ಮಂದಿಗೆ ಡೆಂಗಿ ಬಂದರೆ ಅದರಲ್ಲಿ 04 ಜನ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು. 2019ರಲ್ಲಿ 18183 ಮಂದಿಗೆ ಡೆಂಗೀ ಬಂದರೆ ಬರೊಬ್ಬರಿ 17 ಮಂದಿಯ ಸಾವಾಗಿದೆ. ಇದು ಇದುವರೆಗಿನ ಅಧಿಕ ಸಾವಿನ ಸಂಖ್ಯೆ ಎನ್ನಬಹುದು.
ಉಳಿದಂತೆ 2020ರಲ್ಲಿ 3823 ಮಂದಿಯಲ್ಲಿ ಸೋಂಕು ಕಂಡು ಬಂದರೆ 05 ಮಂದಿ ಮೃತಪಟ್ಟಿದ್ದಾರೆ. 2021ರಲ್ಲಿ 7393 ಪ್ರಕರಣಗಳ ಪತ್ತೆಯಾಗಿದ್ದು, ಅದರಲ್ಲಿ 07 ಮಂದಿ ಸಾವಿಗೀಡಾಗಿದ್ದರು. 2022 ರಲ್ಲಿ 9889 ಮಂದಿಗೆ ಡೆಂಗೀ ಕಾಯಿಲೆ ಬಂದಿತ್ತು, 09 ಮಂದಿ ಮೃತಪಟಿದ್ದಾರೆ. ಇನ್ನೂ 2023ರಲ್ಲಿ ಜನವರಿಯಿಂದ ಮೇ 11ರವರೆಗಿನ ಮಾಹಿತಿ ಪ್ರಕಾರ, 1776 ಡೆಂಗೀ ಪ್ರಕರಣ ದಾಖಲಾಗಿವೆ. ಇದೇ ಅವಧಿಯಲ್ಲಿ ಕಳೆದ ವರ್ಷ ಒಟ್ಟು 1335 ಮಂದಿಗೆ ಡೆಂಗೀ ಕಾಯಿಲೆ ಬಂದಿತ್ತು ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಡೆಂಗೀ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮ
* ಆರೋಗ್ಯ ಸೇವೆಗಳಿಂದ ದೂರವಿರುವ, ಗುಡ್ಡಗಾಡು ಪ್ರದೇಶ, ಗಡಿ ಪ್ರದೇಶ, ಬುಡಕಟ್ಟು ಪ್ರದೇಶಗಳ, ಆರೋಗ್ಯ
ಕಾರ್ಯಕ್ರಮಗಳ ಪ್ರಗತಿಯಲ್ಲಿ ಹಿಂದುಳಿದಿರುವ ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.
* ಸೊಳ್ಳೆ ಕಡಿತದಿಂದ ಬರುವ ಕಾಯಿಲೆಗಳು ಹಾಗೂ ಅವುಗಳ ನಿಯಂತ್ರಣ, ಬಗ್ಗೆ ಆರೋಗ್ಯ ಅರಿವು ಮೂಡಿಸುವುದು.
* ಪ್ರಸ್ತುತ, ಡೆಂಗೀ ನಿಯಂತ್ರಣ ಕುರಿತಂತೆ ಜಾಥಾ, ರ‍್ಯಾಲಿ ಜೊತೆಗೆ ಸ್ಥಳಿಯ ನಿವಾಸಿಗಳ ಕ್ಷೇಮಾಭಿವೃದ್ಧಿ ಮುಖ್ಯಸ್ಥರನ್ನು ಒಳಗೊಂಡಂತೆ ಸಭೆ ಸಮಾರಂಭ ಆಯೋಜಿಸುವುದು.

* ನಿಯಂತ್ರಣ ಜೊತೆಗೆ ಪ್ರಾಥಮಿಕ ಕೇಂದ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಮಟ್ಟದಲ್ಲಿ ನಡೆಸಲು ಮಾರ್ಗಸೂಚಿ ಪಾಲನೆಗೆ ಮತ್ತು ರೋಗ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಜಿಲ್ಲೆಗಳಿಗೆ ಸೂಚಿಸಲಾಗಿದೆ.
* ಡೆಂಗೀ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಮುದಾಯದ ಅಗತ್ಯ ಸಹಕಾರಕ್ಕಾಗಿ ಜಾಗೃತಿ ಮೂಡಿಸಲು ರಾಜ್ಯದ
ಎಲ್ಲಾ ಜಿಲ್ಲೆಗಳಲ್ಲಿ 'ಡೆಂಗೀ ರಥ'ಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
* ಡೆಂಗೀ ನಿಯಂತ್ರಣಕ್ಕಾಗಿ ವಿನೂತನ ಕ್ರಮಗಳ ಕುರಿತು ಶಾಲಾ ಮಕ್ಕಳಿಂದ ವಸ್ತು ಪ್ರದರ್ಶನ ಹಾಗೂ ಮಾದರಿ
ಪ್ರದರ್ಶನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
* ಸೊಳ್ಳೆ ಕಡಿತದಿಂದ ಬರುವ ಕಾಯಿಲೆಗಳು ಹಾಗೂ ಅವುಗಳ ನಿಯಂತ್ರಣ, ಸಮುದಾಯದಲ್ಲಿ ನೀರಿನ ಶೇಖರಣಾ
ವಿಧಾನಗಳು, ಸ್ವಯಂ ರಕ್ಷಣಾ ವಿಧಾನ, ಸ್ವಚ್ಛ ಪರಿಸರ, ಕುಡಿಯುವ ನೀರಿನ/ಬಳಸುವ ಮಹತ್ವ ಬಗ್ಗೆ ಸಮುದಾಯದ ಸಹಭಾಗಿತ್ವದೊಂದಿಗೆ ಜಾಗೃತಿ ಮೂಡಿಸುವುದು.
* ಸಮುದಾಯದೊಂದಿಗೆ ನಿಕಟ ಸಂಪರ್ಕವಿರುವ ಸರ್ಕಾರದ ಇಲಾಖೆಯ ಅಧಿಕಾರಿಗಳು ಸ್ವಯಂ ಸೇವಾ ಸಂಘಗಳ
ಸದಸ್ಯರುಗಳು ಹಾಗೂ ಗ್ರಾಮ ಮಟ್ಟದ ಪ್ರಭಾವಿ ವ್ಯಕ್ತಿಗಳ ಜೊತೆಗೆ ಕಾರ್ಯಗಾರ ನಡೆಸುವುದು.
* ಆರೋಗ್ಯ ಸಿಬ್ಬಂದಿ ಮತ್ತು ಆಶಾ ಸ್ವಯಂಸೇವಕರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ನಿತ್ಯವು ಈಡಿಸ್
ಸೊಳ್ಳೆಗಳ ಉತ್ಪತ್ತಿ ತಾಣ ಸಮೀಕ್ಷೆ ಹಾಗೂ ನಾಶ ಚಟುವಟಿಕೆಯನ್ನು ಸರ್ಕಾರ ಈಗಾಗಲೇ ಕೈಗೊಳ್ಳಲಾಗಿದೆ.
ಪಾಲಿಸಬೇಕಾದ ಸಲಹೆಗಳು
* ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗ್‌ಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡುವುದು, ಅವುಗಳನ್ನು ಸ್ವಚ್ಚವಾಗಿ ತೊಳೆಯುವುದ, ಪುನಃ ನೀರು ತುಂಬಿಸಬೇಕು.
* ಮನೆ ಸುತ್ತಮುತ್ತ ಬಿಸಾಡುವ ವಸ್ತುಗಳನ್ನು ಮಳೆ ನೀರು ತುಂಬಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.
* ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿ ಮತ್ತು ಸಂಸ್ಥೆಗಳ ಒಳಾಂಗಣ ಮತ್ತು ಹೊರಾಂಗಣದಲ್ಲಿ ಡಿಂಗೀಗೆ ಕಾರಣವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು.
* ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತು ವಿಶ್ರಾಂತಿ ಪಡೆಯುವ ಮಕ್ಕಳು, ವೃದ್ಧರು, ಮಹಿಳೆಯುರ ಸೊಳ್ಳೆ ಪರದೆ ಬಳಕೆಮಾಡಬೇಕು.
* ಇದರೊಂದಿಗೆ ಆರೋಗ್ಯ ಕಾರ್ಯಕರ್ತೆಯರು ಮತ್ತು ಶಾ ಸ್ವಯಂ ಸೇಕರು ಮನೆ ಭೇಟಿ ಸಂದರ್ಭದಲ್ಲಿ ಡೆಂಗೀ ನಿಯಂತ್ರಣಕ್ಕೆ ನೀಡುವ ಕುರಿತು ಸಲಹೆಗಳನ್ನು ಅಗತ್ಯವಾಗಿ ಪಾಲಿಸಬೇಕು ಎಂಬುದು ಸೇರಿದಂತೆ ಹಲವು ಸಲಹೆಗಳನ್ನು ಆರೋಗ್ಯ ಇಲಾಖೆ ನೀಡಿದೆ.
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications