Elephant Attack: ಕಾಡಾನೆ ದಾಳಿಗೆ ಮಹಿಳೆ ಬಲಿ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್; ಫೆಬ್ರವರಿ 23ಕ್ಕೆ ಶೃಂಗೇರಿ ಬಂದ್
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಅಲ್ಲದೆ ಕಾಡಾನೆ ದಾಳಿಯಿಂದ ಬಲಿಯಾದ ಮಹಿಳೆಯ ಮೃತದೇಹವನ್ನು ಇರಿಸಿ ಪ್ರತಿಭಟನೆ ನಡೆಸಿದ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಘಟನೆ ಇದೀಗ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ರೈತರು ಹಾಗೂ ಕಾರ್ಮಿಕರ ಮೇಲೆ ಲಘು ಲಾಠಿ ಚಾರ್ಜ್ ನಡೆಸಲಾಗಿದೆ. ಪ್ರತಿಭಟನಾಕಾರರಾದ ಮಾಜಿ ಸಚಿವ ಡಿ.ಎನ್ ಜೀವರಾಜ್, ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ, ಶೃಂಗೇರಿ ರೈತ ಒಕ್ಕೂಟದ ವಿಶ್ವನಾಥ್ ಗದ್ದೆಮನೆ, ಅಭಿಷೇಕ್ ಹೊಸಳ್ಳಿ, ರಂಜಿತ್ ಶೃಂಗೇರಿ, ನಾಮಾ ನಾಗೇಶ್, ಪುರುಷೋತ್ತಮ್ ಕೂಸ್ಕಲ್, ಸಚಿನ್ ಮುಡುಬಾಗಿಲು, ಧನಂಜಯ ವರ್ಕಟ್ಟೆ, ಕಾರ್ತಿಕ್ ಅಲೆಹಳ್ಳಿ ವಿನೋದ್ ಬೊಗಸೆ, ಅರೇನೂರು ಸಂತೋಷ್, ಮಂಜುನಾಥ್ ಕುಂಬಾಸಾಲೂರು, ಸಾರ್ಥಕ ಕುಂಬಾಸಾಲೂರು, ಹಾಗೂ ಅರುಣ್ ಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

ರೈತರ ಮೇಲೆ ನಡೆದಿರುವ ಲಾಠಿ ಚಾರ್ಜ್ ವಿರುದ್ಧ ನಾಳೆ (ಸೋಮವಾರ ಫೆಬ್ರವರಿ 23) ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿರುವ ಬಂದ್‌ಗೆ ಬಿಜೆಪಿ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಿದೆ. ಈ ರೀತಿ ರೈತರ ಮೇಲೆ ನಡೆದಿರುವ ಲಾಠಿ ಚಾರ್ಜ್ ಖಂಡನಾರ್ಹ. ಕೆಲವರಿಗೆ ತಲೆ, ಕಿವಿ ಭಾಗದಲ್ಲಿ ರಕ್ತ ಬರುವಂತೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಶೃಂಗೇರಿ ಕ್ಷೇತ್ರ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ನಾಳೆ ಶೃಂಗೇರಿ ಕ್ಷೇತ್ರ ಬಂದ್‌ಗೆ ಕರೆ
ನಾಳೆ (ಫೆಬ್ರವರಿ 23ರಂದು) ನಡೆಯಲಿರುವ ಬಂದ್‌ಗೆ ಶೃಂಗೇರಿ ರೈತ ಒಕ್ಕೂಟ ಹಾಗೂ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಅವರು ಹೇಳಿದ್ದಾರೆ. ಶೃಂಗೇರಿ ಕ್ಷೇತ್ರದ ಎಲ್ಲಾ ರೈತರು, ನಾಗರಿಕರು ಹಾಗೂ ವರ್ತಕರು ಸಹಕಾರ ನೀಡಬೇಕು ಎಂದು ಸಮಿತಿ ಮನವಿ ಮಾಡಿದೆ.
Elephant Attack ಘಟನೆಯ ಹಿನ್ನೆಲೆ ಏನು
ಕಡಬಗೆರೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ನಡೆದ ಲಾಠಿ ಚಾರ್ಜ್ ಹಾಗೂ ರೈತರ ಬಂಧನವನ್ನು ಖಂಡಿಸಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವು ನಾಳೆ ಫೆಬ್ರವರಿ 23, ಸೋಮವಾರದಂದು ಕ್ಷೇತ್ರದಾದ್ಯಂತ ಸ್ವಯಂಪ್ರೇರಿತ ಬಂದ್ ಕರೆ ನೀಡಿದೆ. ಶಾಂತಿಯುತವಾಗಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಅನ್ನದಾತರ ಮೇಲೆ ನಡೆದ ದೌರ್ಜನ್ಯವನ್ನು ಒಕ್ಕೂಟವು ತೀವ್ರವಾಗಿ ಖಂಡಿಸಿದ್ದು, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಬಂದ್ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲಾ ರೈತ ಬಾಂಧವರು, ಸಾರ್ವಜನಿಕರು ಹಾಗೂ ವರ್ತಕರು ಸ್ವಯಂಪ್ರೇರಿತವಾಗಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ. ಈ ಬಂದ್‌ನಲ್ಲಿ ಭಾಗವಹಿಸುವ ಮೂಲಕ ರೈತರ ಪರವಾಗಿ ನಿಲ್ಲಬೇಕೆಂದು ರೈತ ಒಕ್ಕೂಟವು ಮನವಿ ಮಾಡಿದೆ.












Click it and Unblock the Notifications