"ತಕ್ಷಣದಿಂದಲೇ ಜಾರಿ": ಕೊರೊನಾ ಭಾರೀ ಏರಿಕೆ: ಶವ ಸಂಸ್ಕಾರ, ಶುಭ ಸಮಾರಂಭಕ್ಕೂ ಹೊಸ ಮಾರ್ಗಸೂಚಿ

ಬೆಂಗಳೂರು, ಮಾರ್ಚ್ 12: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಹೊಸ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಕಟಿಸಿದೆ.

Recommended Video

      ಕೊರೋನಾ ಎರಡನೇ ಅಲೆ ಆತಂಕದಲ್ಲಿ ರಾಜ್ಯ..! ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನ | Oneindia Kannada

      ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಸಚಿವ ಡಾ.ಸುಧಾಕರ್, ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

      ಹೊಸ ಸೋಂಕಿತರ ಪ್ರಕರಣ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ದೈನಂದಿನ ಪರೀಕ್ಷಾ ಪ್ರಮಾಣದ ಟಾರ್ಗೆಟ್ ನಲ್ಲಿ ಪರಿಷ್ಕರಣೆ ಮಾಡಲಾಗಿದೆ. ಎರಡನೇ ಅಲೆಯನ್ನು ತಡೆಗಟ್ಟಲು ಈ ಮುಂಜಾಗೃತಾ ಕ್ರಮ ಎಂದು ಇಲಾಖೆ ಸ್ಪಷ್ಟ ಪಡಿಸಿದೆ.

      ಈ ಜಿಲ್ಲೆಗಳೆಂದರೆ, ಬೆಂಗಳೂರು ನಗರ ವ್ಯಾಪ್ತಿ (ಬಿಬಿಎಂಪಿ), ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಮೈಸೂರು, ತುಮಕೂರು ಮತ್ತು ವಿಜಯಪುರ. ಇದರ ಜೊತೆಗೆ, ಶುಭ ಸಮಾರಂಭಕ್ಕೆ ಮತ್ತು ಶವ ಸಂಸ್ಕಾರಕ್ಕೆ ಎಷ್ಟು ಜನರು ಸೇರಬಹುದು ಎನ್ನುವ ವಿಚಾರದಲ್ಲೂ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಅದು ಹೀಗಿದೆ:

      ಮಾಸ್ಕ್ ಧರಿಸುವುದು ಕಡ್ಡಾಯ

      ಮಾಸ್ಕ್ ಧರಿಸುವುದು ಕಡ್ಡಾಯ

      • ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ದಕ್ಷಿಣಕನ್ನಡ, ಬೀದರ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ ಮತ್ತು ಉಡುಪಿ ಜಿಲ್ಲೆಗಳ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
      • ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. (ಚಿತ್ರ:ಪಿಟಿಐ)
      ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ

      ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ

      • ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಮತ್ತು ಕೋವಿಡ್ ಪರೀಕ್ಷೆಗೆ ಒಳಪಡುವುದನ್ನು ವ್ಯಾಪಕವಾಗಿ ಹೆಚ್ಚಿಸಲು ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲು, ಮುಖ್ಯಮಂತ್ರಿಗಳ ಮತ್ತು ಆರೋಗ್ಯ ಸಚಿವರ ಸಂದೇಶವನ್ನು ಜನರಿಗೆ ತಲುಪಿಸಲು ಸೂಚಿಸಲಾಗಿದೆ.
      • ವಿವಿಧ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುತ್ತಿರುವುದರಿಂದ ಕೋವಿಡ್ ಪಸರಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಇಂತಹ ಕಾರ್ಯಕ್ರಮಗಳಲ್ಲಿ ಭಾರತೀಯ ಸರಕಾರದ ಮಾನದಂಡದ ಪ್ರಕಾರ 3.25 sq.mtr ಮಾನದಂಡವನ್ನು ಪಾಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

      ಮದುವೆ ಸಮಾರಂಭ

      ಮದುವೆ ಸಮಾರಂಭ (ತೆರೆದ ಪ್ರದೇಶಗಳಲ್ಲಿ) - 500 ಜನ ಮೀರಬಾರದು
      ಮದುವೆ ಸಮಾರಂಭ (ಹಾಲ್, ಸಭಾಂಗಣ ಇತ್ಯಾದಿ, ಮುಚ್ಚಿದ ಪ್ರದೇಶಗಳಲ್ಲಿ) - 200 ಜನ ಮೀರಬಾರದು
      ಜನ್ಮದಿನ ಮತ್ತು ಇತರ ಸಮಾರಂಭಗಳು - (ತೆರೆದ ಪ್ರದೇಶಗಳಲ್ಲಿ) - 100 ಜನ ಮೀರಬಾರದು
      ಜನ್ಮದಿನ ಮತ್ತು ಇತರ ಸಮಾರಂಭಗಳು - (ಹಾಲ್, ಸಭಾಂಗಣ ಇತ್ಯಾದಿ, ಮುಚ್ಚಿದ ಪ್ರದೇಶಗಳಲ್ಲಿ) - 50 ಜನ ಮೀರಬಾರದು

      ಅಂತಿಮ ಕ್ರಿಯೆಯಲ್ಲಿ ಐವತ್ತು ಜನಕ್ಕಿಂತ ಹೆಚ್ಚು ಸೇರಬಾರದು

      ಅಂತಿಮ ಕ್ರಿಯೆಯಲ್ಲಿ ಐವತ್ತು ಜನಕ್ಕಿಂತ ಹೆಚ್ಚು ಸೇರಬಾರದು

      ನಿಧನ/ಅಂತಿಮ ದರ್ಶನ - (ತೆರೆದ ಪ್ರದೇಶಗಳಲ್ಲಿ) - 100 ಜನ ಮೀರಬಾರದು
      ನಿಧನ/ಅಂತಿಮ ದರ್ಶನ - (ಮುಚ್ಚಿದ ಪ್ರದೇಶಗಳಲ್ಲಿ) - 50 ಜನ ಮೀರಬಾರದು
      ಅಂತಿಮ ಕ್ರಿಯೆಯಲ್ಲಿ ಐವತ್ತು ಜನಕ್ಕಿಂತ ಹೆಚ್ಚು ಸೇರಬಾರದು
      ಧಾರ್ಮಿಕ ಮತ್ತು ರಾಜಕೀಯ ಆಚರಣೆಗಳಲ್ಲಿ - ಐನೂರಕ್ಕಿಂತ (ತೆರೆದ ಪ್ರದೇಶ) ಹೆಚ್ಚು ಜನ ಸೇರಬಾರದು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+