Get Updates
Get notified of breaking news, exclusive insights, and must-see stories!

Cold Wave: ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯ ಕ್ರಮಗಳು ಹೀಗಿರಲಿ, ಇಲ್ಲಿವೆ ಟಿಪ್ಸ್

Winter Health Tips: ಕರ್ನಾಟಕದಲ್ಲಿ ಡಿಸೆಂಬರ್ ಚಳಿ ಪ್ರಭಾವ ಜೋರಾಗಿದೆ. ಚಳಿ ಹೆಚ್ಚಾದಂತೆಲ್ಲ ದೇಹ ವಾತಾವರಣಕ್ಕೆ ಬೇಗ ಒಗ್ಗಿಕೊಳ್ಳಲು ಕಷ್ಟಪಡುತ್ತದೆ. ಇದೇ ವೇಳೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಚರ್ಮ, ಮುಖ ಒಣಗುವುದು, ಪಾದಗಳು ಒಡೆಯುವುದು ಆಗುತ್ತದೆ. ಶೀತ, ಕೆಮ್ಮು, ಶ್ವಾಸಕೋಶದ ಸೋಂಕು ಇರುವವರು ಹೆಚ್ಚಿನ ಆರೋಗ್ಯ ಕಾಳಜಿ ವಹಿಸಬೇಕಿದೆ. ನೀವು ಆರೋಗ್ಯವಾಗಿರಲು ಮುಖ, ಚರ್ಮಕಾಂತಿ ಕಾಪಾಡಲು ಇಲ್ಲಿನ ಒಂದಷ್ಟು ಸಲಹೆಗಳು ಗಮನಿಸಿ.

Winter Health Tips How to Stay Healthy and Protect Skin in During Cold Weather

ಚಳಿಗಾಲದಲ್ಲಿ ಜ್ವರ ಮತ್ತು ನ್ಯುಮೋನಿಯಾಗಳು ಸಹ ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ. ಚಳಿ ಗಾಳಿಗೆ ಆಸ್ತಮಾ, ಬ್ರಾಂಕೈಟಿಸ್, ಸೈನುಟಿಸ್ ಮತ್ತು ಅಲರ್ಜಿಗಳಂತಹ ಉಸಿರಾಟದ ಕಾಯಿಲೆಗಳು ಎದುರಾಗುತ್ತವೆ. ಹಗಲು ಅಧಿಕ ತಾಪಮಾನದ ಬಿಸಿ ಹಾಗೂ ಬೆಳಗ್ಗೆ, ರಾತ್ರಿಯ ತಂಪು ವಾತವರಣದ ಪ್ರಭಾವ ದೇಹದ ಮೇಲಾಗುತ್ತದೆ. ಚಳಿಯಿಂದ ತಪ್ಪಿಸಿಕೊಳ್ಳಲು ಹೊರಗಿನ ಕೆಲಸಗಳಿಗೆ ತೆರಳುವಾಗ ಮುಖಗವಸು, ಬೆಚ್ಚಗಿನ ಧಿರಿಸು ಧರಿಸಿ ಹೋಗಬೇಕು. ಮನೆ ಒಳಾಂಗಣದಲ್ಲಿ ಗಾಳಿ ಶುದ್ಧೀಕರಣ ಸಾಧನ ಬಳಸಬಹುದು. ಬೆಳಗಿನ ತಂಪು ವಾತಾವರಣಕ್ಕೆ ಮೈ ಒಡ್ಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಜ್ವರ, ಶೀತ ಇತರ ಕಾಯಿಲೆಗಳು ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅನಾರೋಗ್ಯ ಪೀಡಿತ ಅಂತರ ಕಾಯ್ದುಕೊಳ್ಳಬೇಕು.

ಚರ್ಮದ ಕಾಂತಿ ಕಾಪಾಡಿಕೊಳ್ಳುವುದು ಹೇಗೆ?

ಚಳಿಗಾಲದಲ್ಲಿ ಗಾಳಿಗೆ ಚರ್ಮ, ಮೈ, ಕೈಗಳ ಒಣಗಿದ ಅನುಭವವಾಗುತ್ತದೆ. ಮೈಕೊರೆವ ಚಳಿ, ಶೀತ ಅಲೆಯು ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೆಲವರಿಗೆ ಕೈ, ಮೈಮೇಲೆ ತುರಿಕೆ ಉಂಟಾಗುತ್ತದೆ. ಚರ್ಮದ ಕಾಂತಿ ಹಾಳಾಗುತ್ತದೆ. ಗಾಳಿಯಲ್ಲಿನ ತೇವಾಂಶ ಕೊರತೆಯಿಂದ ದೇಹಕ್ಕೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ನೀವು ಚರ್ಮದ ಸೌಂದರ್ಯ ಕಾಪಾಡುವ ಮಾಯಿಶ್ಚರೈಸರ್‌ಗಳನ್ನು ಬಳಸಬಹುದು. ಅದು ಚರ್ಮದಲ್ಲಿ ತೇವ ಕಾಪಾಡುತ್ತದೆ. ವೈದ್ಯರ ಸಲಹೆ ಮೇರೆಗೆ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ಎಣ್ಣೆ/ಮಾತ್ರೆ ತೆಗೆದುಕೊಳ್ಳಬಹುದು. ಇದು ಎಸ್ಜಿಮಾ ನಿವಾರಿಸಿ ಒಮೆಗಾ -3ಅಂಶ ಒದಗಿಸುತ್ತದೆ. ಚರ್ಮ, ಮುಖ ತುಟಿಗಳ ಒಡೆಯುವುದನ್ನು ತಪ್ಪಿಸಲು ವ್ಯಾಸಲಿನ್ ಉಪಯೋಗಿಸಬಹುದು. ಮೆಡಿಕಲ್ ಶಾಪ್‌ಗಳಲ್ಲಿ ತರಹೇವಾರಿ ಬ್ರ್ಯಾಂಡ್‌ಗಳ ಚರ್ಮ, ಮುಖ ಸಂಬಂಧಿ ಕ್ರಿಮ್‌ಗಳು ಸಿಗುತ್ತವೆ. ಅವುಗಳನ್ನು ಬಳಸಬಹುದು.

ಹೊರಗಿನ ಆಹಾರದಿಂದ ದೂರವಿರಿ

ಚಳಿಗಾಲದಲ್ಲಿ ಬಿಸಿ ಆಹಾರ ಪದಾರ್ಥ ತಿನ್ನಲು ಮನಸ್ಸು ಇಷ್ಟವಾಗುತ್ತದೆ. ಹಾಗೆಂದು ಸಿಕ್ಕ ಸಿಕ್ಕಲ್ಲಿ, ಹೊರಗಿನ ತಿಂಡಿ ಪದಾರ್ಥ ಸೇವಿಸಿದರೆ ಅದು ಸಹ ಆರೋಗ್ಯ ಹದಗೆಡಿಸಬಹುದು. ಸಾಧ್ಯವಾದಷ್ಟು ಮನೆಯ ಆಹಾರಕ್ಕೆ ಆದ್ಯತೆ ನೀಡಿ. ಮನೆಯಿಂದಲೇ ನೀರಿನ ಬಾಟಲಿ ಕ್ಯಾರಿ ಮಾಡಿ. ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸು ಮತ್ತು ಲಸ್ಸಿ, ಕೋಲ್ಡ್ರಿಂಕ್ಸ್ ನಂತರಹ ತಂಪು ಪಾನೀಯಗಳನ್ನು ಸೇವನೆ ಸಹ ತಪ್ಪಿಸಬೇಕು. ಕೊಂಚ ಬಿಸಿಯಾದ ನೀರು ಸೇವನೆಯು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಆಹಾರದ ಕ್ರಮ ಸರಿಯಾಗಿರಲಿ

ಚಳಿಗಾದಲ್ಲಿ ಹೊರಗಿನ ತಿಂಡಿ ಸೇವನೆ ತಪ್ಪಿಸುವ ಜೊತೆಗೆ ಉತ್ತಮ ಹಾಗೂ ದೇಹಕ್ಕೆ ಅಗತ್ಯವಾದ ಆಹಾರ ಸೇವಿಸುವುದು ಅಷ್ಟೇ ಮುಖ್ಯ. ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್ ಸೇವನೆಯಿಂದ ದೇಹಕ್ಕೆ ತತ್‌ಕ್ಷಣಕ್ಕೆ ಶಕ್ತಿ ದೊರೆಯುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಚಳಿ ಹಿನ್ನೆಲೆ ಬಿಸಿ ಆಹಾರ ಪದಾರ್ಥ ಸೇವಿಸುವುದು ಒಳಿತು. ಚಳಿಗಾಲ ಆರಂಭವಾಗುತ್ತಿದ್ದಂತೆ ಕೆಲವರು ಸಾಮಾನ್ಯವಾಗಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ. ಹೊರಗೆ ಚಳಿಯಿಂದಲೂ ಚರ್ಮ ಒಣಗುತ್ತದೆ. ಇದನ್ನು ನಿಯಂತ್ರಿಸಲು ಹೆಚ್ಚು ನೀರು ಕುಡಿಯಬೇಕು.

ವ್ಯಾಯಾಮಕ್ಕೆ ಆದ್ಯತೆ ನೀಡಿ

ಬೆಳಗ್ಗೆ ಹೆಚ್ಚಿನ ಚಳಿ ಕಂಡು ಬರುವ ಕಾರಣ ಬೇಗ ಎದ್ದು ವ್ಯಾಯಾಮ ಮಾಡಲು, ಜಿಮ್‌ಗೆ ತೆರಳಲು ಕಷ್ಟವೆನಿಸಬಹುದು. ಬೆಡ್‌ನಿಂದ ಕೊಂಚ ತಡವಾಗಿ ಎದ್ದರೂ ಸಹಿತ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಇದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ವ್ಯಾಯಾಮದಿಂದ ಕೀಲುಗಳು ಸಡಿಲಗೊಳ್ಳುತ್ತವೆ. ಇಡೀ ದಿನ ನೀವು ಆಕ್ಟಿವ್ ಆಗಿರುತ್ತೀರಿ. ಇದರಿಂದ ರಾತ್ರಿವರೆಗಿನ ವೃತ್ತಿ ಜೀವನ ಹಾಗೂ ಇತರ ಕೆಲಸ ಕಾರ್ಯಗಳಲ್ಲಿ ಲಘುಬಗೆಯಿಂದ ತೊಡಗಲು ಸಾಧ್ಯವಾಗುತ್ತದೆ. ದೈನಂದಿನ ವ್ಯಾಯಾಮದಿಂದ ಆರೋಗ್ಯ ಸುಧಾರಿಸುತ್ತದೆ.

ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ

ಚಳಿ ಹೆಚ್ಚಾಗುತ್ತಿದ್ದಂತೆ ತ್ವರಿತವಾಗಿ ಆರೋಗ್ಯ ಕಾಳಜಿ ವಹಿಸುವಲ್ಲಿ ವಿಫಲವಾದಾಗ ಅಥವಾ ಬೇರಾವುದೇ ಕಾರಣದಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು, ಶೀತ, ಕೆಮ್ಮು, ಜ್ವರ, ಇತರ ಸೋಂಕುಗಳಿಂದ ದೇಹದಲ್ಲಿ ಬದಲಾವಣೆ ಆದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ತಡ ಮಾಡಿದಲ್ಲಿ ಇಂದಿನ ಚಳಿಗಾಲ ಸನ್ನಿವೇಶದಲ್ಲಿ ಕಾಯಿಲೆಗಳು ತ್ವರಿತವಾಗಿ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ತಪ್ಪಿಸಿ ವೈದ್ಯರ ಸಲಹೆ, ಚಿಕಿತ್ಸೆ ಪಡೆಯುವುದು ಒಳಿತು. ನಿರ್ಲಕ್ಷಿಸಿದರೆ ನಿಮ್ಮೊಂದಿಗೆ ನಿಮ್ಮ ಕುಟುಂಬಸ್ಥರ ಆರೋಗ್ಯವು ಹದಗೆಡಬಹುದು.

ಚಳಿಗಾಲ ಮುಂದಿನ ಎರಡು ತಿಂಗಳವರೆಗೆ ಮುಂದುವರಿಯುತ್ತದೆ. ಶೀತಗಾಳಿ ಹೆಚ್ಚಲೂಬಹುದು. ತಗ್ಗಲೂಬಹುದು. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಈ ಎರಡು ತಿಂಗಳು ಅಗತ್ಯ ಎಚ್ಚರಿಕೆಯಿಂದ ಇರಬೇಕು. ಮಕ್ಕಳು, ವೃದ್ಧರು ಆರೋಗ್ಯದಲ್ಲೂ ನಾವು ಜವಾಬ್ದಾರಿ ವಹಿಸಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+